ಬೆಳ್ತಂಗಡಿ; ರಸ್ತೆ, ಸೇತುವೆ, ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ಪಿಡಬ್ಲ್ಯುಡಿ ಸಚಿವರಿಗೆ ಮನವಿ

ಬೆಳ್ತಂಗಡಿ; ರಸ್ತೆ, ಸೇತುವೆ, ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ಪಿಡಬ್ಲ್ಯುಡಿ ಸಚಿವರಿಗೆ ಮನವಿ

Share
IMG-20260404-WA0001-1024x548 ಬೆಳ್ತಂಗಡಿ; ರಸ್ತೆ, ಸೇತುವೆ, ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ಪಿಡಬ್ಲ್ಯುಡಿ ಸಚಿವರಿಗೆ ಮನವಿ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತಾಲೂಕಿನ ನಾರಾವಿ- ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.80 ರಿಂದ 9.10ರವರೆಗೆ ಅಭಿವೃದ್ಧಿ, ಬದ್ಯಾರು ಸವಣಾಲು ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 3.00 ರಿಂದ 6.80ರವರೆಗೆ ಅಭಿವೃದ್ಧಿ, ದಿಡುಪೆ-ಸಂಸೆ ರಸ್ತೆ ಕಿ.ಮೀ 0.00 ರಿಂದ 9. 00ರವರೆಗೆ ರಸ್ತೆ ಕಾಂಕ್ರಿಟೀಕರಣ,
ಚಾರ್ಮಾಡಿ ಗ್ರಾಮದ ಕುಂಡೊಟ್ಟು ಎಂಬಲ್ಲಿ ಕಾಲುಸಂಕ ರಚನೆ ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ಸೇತುವೆ ರಚನೆ ಕಾಮಗಾರಿ, ಬೆಳ್ತಂಗಡಿ ನಗರದಲ್ಲಿ ಲೋ.ಇ ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೆ, ಅನುದಾನ ಒದಗಿಸುವಂತೆ ಮತ್ತು ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ 275.00ಲಕ್ಷಗಳ ಅನುದಾನ (ಲೆ.ಶೀ.5054-03-101-0-02-132 ಪ್ರಮುಖ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ) ಬಿಡುಗಡೆಗೆ ಆದೇಶವಾಗಿದ್ದು ಅದರೆ ಸದ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು ಮೊತ್ತದಂತೆ ಕಾಮಗಾರಿಗೆ 499.36 ಲಕ್ಷಗಳ ಅನುದಾನ ಅಗತ್ಜವಿದ್ದು ಈ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ, ಮತ್ತು ಅತೀ ಅವಶ್ಯವಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿಯನ್ನು ನೀಡಿ ಬೇಡಿಕೆಗಳ ಪ್ರಾಮುಖ್ಯತೆಗಳನ್ನು ವಿವರಿಸಿದರು.

Post Comment

ಟ್ರೆಂಡಿಂಗ್‌

error: Content is protected !!