ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ!

ಬೆಳ್ತಂಗಡಿ : ಪುಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತಿದ್ದು, ನಗರದಲ್ಲಿ ಅಂಗಡಿ ಮುಂಭಾಗ ಚರಂಡಿಗಾಗಿ ತೆಗೆದ ಹೊಂಡಗಳನ್ನು ಮುಚ್ಚದೇ ದೀಪಾವಳಿ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿರುವ ವ್ಯಾಪಾರಸ್ಥರು ಮತ್ತು ವ್ಯಾಪಾರ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ವ್ಯಾಪಾರಿಗಳು ತಮ್ಮ ಅಂಗಡಿ ಬಾಗಿಲಿನಲ್ಲಿ ಜೆಸಿಬಿ ತೋಡಿದ ಬೃಹತ್ ಗುಂಡಿಗಳನ್ನು ನೆನೆದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲೆಕ್ಟ್ರಾನಿಕ್ಸ್ ಸೇರಿದಂತೆ ಇನ್ನಿತರ ವ್ಯಾಪಾರಸ್ಥರು ದೀಪಾವಳಿಯಲ್ಲಿ ಉತ್ತುಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರಿಗೆ ಗುತ್ತಿಗೆದಾರರ ನಿಧಾನಗತಿ ಕಾಮಗಾರಿಯಿಂದ ಗ್ರಾಹಕರು ಅಂಗಡಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣಕ್ಕಾಗಿ ಅಂಗಡಿಗಳ ಮುಂಭಾಗ ದೊಡ್ಡ ಹೊಂಡ ಮಾಡಿದ್ದು, ದೀಪಾವಳಿಯ ಮುಂಚೆ ಸರಿ ಪಡಿಸುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದರು, ಅದರೆ ಇದೀಗ ಚರಂಡಿ ಕೆಲಸ ಪೂರ್ಣಗೊಳಿಸದೇ ವ್ಯಾಪಾರಸ್ಥರಿಗೆ ನಿರಾಶೆಯನ್ನು ಉಂಟು ಮಾಡಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿ ಲಕ್ಷಗಟ್ಟಲೆ ಬಂಡವಾಳ ಹಾಕಿ ನಾನಾ ವಸ್ತುಗಳನ್ನು ಖರೀದಿಸಿ ಗ್ರಾಹಕರು ಅಂಗಡಿಗೆ ಬಾರದ ರೀತಿಯಲ್ಲಿ ಹೊಂಡ ಅಗೆದು ಹಾಕಿರುವುದರಿಂದ ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ತಾತ್ಕಲಿಕವಾಗಿ ವ್ಯಾಪಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಸರಿ ಪಡಿಸುವಂತೆ ವಿನಂತಿಸಿದರೆ ಗುತ್ತಿಗೆದಾರರು ಉಡಾಫೆ ಉತ್ತರ ನೀಡಿ ಸರಿ ಪಡಿಸಲಾಗುವುದಿಲ್ಲ ನೀವು ಮಾಡುವುದನ್ನು ಮಾಡಿ ಎಂಬ ಉತ್ತರವನ್ನು ನೀಡುತ್ತಾರೆ, ನಮ್ಮ ಸಂಕಷ್ಟವನ್ನು ಕೇಳುವವರಾರು ಈಗಾಗಲೇ ವ್ಯಾಪಾರವಿಲ್ಲ, ದೀಪಾವಳಿಯ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದ ನಮಗೆ ರಸ್ತೆ ಬದಿ ಅಗೆದು ಹಾಕಿದ ಪರಿಣಾಮ ಅಂಗಡಿಗಳಿಗೆ ಗ್ರಾಹಕರು ಬಾರದ ಸ್ಥಿತಿ ನಿರ್ಮಾಣವಾಗಿದೆ.

ಸಾಲ ಮಾಡಿ ಲಕ್ಷ ಗಟ್ಟಲೆ ಬಂಡವಾಳ ಹಾಕಿ ವ್ಯಾಪಾರವಿಲ್ಲದಿದ್ದರೆ ಗತಿ ಏನು, ರಸ್ತೆ ಅಭಿವೃದ್ಧಿ ಗೆ ನಮ್ಮ ತಕರಾರು ಇಲ್ಲ. ಅದರೆ ಇಡೀ ವರ್ಷದ ವ್ಯಾಪಾರ ದೀಪಾವಳಿ ಸಂದರ್ಭದಲ್ಲಿ ಆಗುವಂತದ್ದು, ಹಬ್ಬ ಮುಗಿದ ನಂತರ ಅಂಗಡಿ ಮುಂಭಾಗ ಕಾಮಗಾರಿ ಪ್ರಾರಂಭಿಸಿ ಎಂದು ವಿನಂತಿಸಿಕೊಂಡಿದ್ದರೂ , ಕೇಳದೆ ನಮ್ಮನ್ನು ಸಂಕಷ್ಟಕ್ಕೆ ದೂಡಿರುವಂತಾದ್ದು ತುಂಬಾ ಬೇಸರ ತರಿಸಿದೆ. ಸರಿಪಡಿಸಲು ಸೂಚಿಸಿದರೆ ಮಾಡುವುದಿಲ್ಲ ಏನು ಮಾಡುತ್ತೀರಿ ಎಂಬ ದರ್ಪದ ಉತ್ತರ ಗುತ್ತಿಗೆದಾರರ ಕಡೆಯಿಂದ ಬರುತ್ತದೆ. ಈಗಾಗಲೇ ಮಳೆಯಿಂದ ಹೊಂಡದಲ್ಲಿ ನೀರು ನಿಂತು ಮತ್ತಷ್ಟು ತೊಂದರೆಗಳಾಗುತ್ತಿವೆ. ಎಂದು ಅಸಾಮಾಧಾನ ಹೊರ ಹಾಕಿದ್ದಾರೆ.
















Post Comment