ಬೆಳ್ತಂಗಡಿ ಪಿಡಬ್ಲ್ಯೂಡಿ‌ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್ ಅವರಿಗೆ ವಯೋನಿವೃತ್ತಿ ವಿದಾಯ ಕಾರ್ಯಕ್ರಮ

ಬೆಳ್ತಂಗಡಿ ಪಿಡಬ್ಲ್ಯೂಡಿ‌ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್ ಅವರಿಗೆ ವಯೋನಿವೃತ್ತಿ ವಿದಾಯ ಕಾರ್ಯಕ್ರಮ

Share
IMG_20260530_172108 ಬೆಳ್ತಂಗಡಿ ಪಿಡಬ್ಲ್ಯೂಡಿ‌ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್ ಅವರಿಗೆ ವಯೋನಿವೃತ್ತಿ ವಿದಾಯ ಕಾರ್ಯಕ್ರಮ

ಬೆಳ್ತಂಗಡಿ : ಲೋಕೋಪಯೋಗಿ ಇಲಾಖಾ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್. ಅವರು ಮೇ 30ರಂದು ವಯೋನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳ ವತಿಯಿಂದ ಗೌರವಪೂರ್ವಕ ವಿದಾಯ ಹಾರೈಕೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು‌ ಇಲ್ಲಿನ ನೂತನ ಪ್ರವಾಸಿ ಮಂದಿರದಲ್ಲಿ ಶನಿವಾರ ನೆರವೇರಿತು. ‌
ಕಾರ್ಯಕ್ರಮವನ್ನು‌ ಉದ್ದೇಶಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್ ಅವರು ಮಾತನಾಡಿ ತಮ್ಮ ಸುದೀರ್ಘ ಸೇವಾವಧಿಯ ಸವಿ ನೆನಪುಗಳನ್ನು‌ ಮತ್ತು ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಗಳನ್ನು
ಮೆಲುಕು ಹಾಕುತ್ತಾ ತಮಗೆ ಉತ್ತಮ ಸೇವೆ ಸಲ್ಲಿಸುವಲ್ಲಿ‌ ಸ್ಪಂದಿಸಿದ ಮತ್ತು ಸಹಕರಿಸಿದ ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ , ಸಹೋದ್ಯೋಗಿಗಳಿಗೆ ವಿವಿಧ ಇಲಾಖಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಳ್ತಂಗಡಿ ನ್ಯಾಯಾಲಯದ ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್ ಇಳಂತಿಲ ಅವರು ಮಾತನಾಡಿ ಬಕ್ಕಪ್ಪ ಅವರ ನಿವೃತ್ತಿ ಪೂರ್ವ ಸೇವಾ ವೈಖರಿಯನ್ನು ಶ್ಲಾಘಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಶುಭ ಹಾರಿಸಿದರು. ಈ ಸಂದರ್ಭ ಬೆಳ್ತಂಗಡಿ ಶಾಖಾ ಖಜಾನಾಧಿಕಾರಿ ಹರಿಣಾಕ್ಷಿ, ಬಕ್ಕಪ್ಪ ಅವರ ಧರ್ಮಪತ್ನಿ ಲಕ್ಷ್ಮಿ , ಗುತ್ತಿಗೆದಾರ ದಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭ ಬಕ್ಕಪ್ಪ ಅವರ ಸಹೋದ್ಯೋಗಿಗಳ ವತಿಯಿಂದ, ಕುಕ್ಕೇಡಿ ಗ್ರಾ.ಪಂ.ಆಡಳಿತದ ವತಿಯಿಂದ ಹಾರಾರ್ಪಣೆ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭ ಬಕ್ಕಪ್ಪ‌ ಹೆಚ್ ಅವರಿಗೆ 2026ನೇ ಸಾಲಿನ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಕರ್ನಾಟಕ ತಾಂತ್ರಿಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಹೋದ್ಯೋಗಿ ವೃಂದ, ಇತರ ಇಲಾಖಾಧಿಕಾರಿಗಳು, ಸಹೋದ್ಯೋಗಿ ಸಿಬ್ಬಂದಿಗಳು, ಸಾಮಾಜಿಕ ಪ್ರಮುಖರು, ಕುಟುಂಬ ವರ್ಗ, ಕಾರ್ಯಕ್ರಮದಲ್ಲಿ‌ ಪಾಲ್ಗೊಂಡರು.
ತಾ.ಪಂ. ಸಿಬ್ಬಂದಿ ಜಯಾನಂದ ಲಾಯಿಲಾ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಸಹಾಯಕ ಇಂಜಿನಿಯರ್ವ ವರ್ಷಾ ಪ್ರಾರ್ಥಿಸಿದರು.

Post Comment

ಟ್ರೆಂಡಿಂಗ್‌

error: Content is protected !!