ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ವಿಶೇಷ ಪರಿಣತ ಮೂಳೆ ತಜ್ಞರ 24×7 ಸೇವೆ

ಬೆಳ್ತಂಗಡಿ : ಉಜಿರೆಯ ಜನಪ್ರಿಯ ಆಸ್ಪತ್ರೆಯಾಗಿರುವ ಬೆನಕ ಹೆಲ್ತ್ ಸೆಂಟರ್ ನ ಉಜಿರೆಯ ಮೂಳೆ ತಜ್ಞರಾದ ಡಾ.ರೋಹಿತ್ ಜಿ. ಭಟ್ ಅವರು ತಮ್ಮ ವೈದ್ಯಕೀಯ ಕ್ಷೇತ್ರದ ಪರಿಣತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮುಂಬೈನಲ್ಲಿ ಪಡೆದ ಉನ್ನತ ವಿಶೇಷ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇದೀಗ ಮತ್ತೆ ಉಜಿರೆಗೆ ಆಗಮಿಸಿದ್ದು ಸೇವೆಗೆ ಲಭ್ಯವಿದ್ದಾರೆ.
ಭುಜದ ಆರ್ತ್ರೋಸ್ಕೋಪಿ ಮತ್ತು ಆರ್ತ್ರೋಪ್ಲಾಸ್ಟಿ
(Shoulder Arthroscopy & Arthroplasty )
ಕ್ಷೇತ್ರದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದ್ದು, ಜೊತೆಗೆ ಮಸ್ಕ್ಯುಲೋಸ್ಕೆಲೆಟಲ್ ಅಲ್ಟ್ರಾಸೌಂಡ್
(Musculoskeletal Ultrasound) ವಿಷಯದಲ್ಲಿಯೂ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಈ ತರಬೇತಿಯನ್ನು ಮುಂಬೈನ ಖ್ಯಾತ ಭುಜ ತಜ್ಞರಾದ ಡಾ. ಚಿಂತನ್ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿರುವ ಡಾ. ರೋಹಿತ್ ಜಿ. ಭಟ್ ಅವರು, ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗಳಾದ ನಿರ್ಮಲಾ ಆಸ್ಪತ್ರೆ (Nirmala Hospital), ಬ್ರೀಚ್ ಕ್ಯಾಂಡಿ ಆಸ್ಪತ್ರೆ (Breach Candy Hospital), ಎಚ್.ಎನ್. ರಿಲಯನ್ಸ್ ಆಸ್ಪತ್ರೆ (H.N. Reliance Hospital) ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಆಧುನಿಕ ಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳ ಕುರಿತು ಅಮೂಲ್ಯ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ.
ಭುಜದ ಸಮಸ್ಯೆಗಳು, ಕೀಲು ಸಂಬಂಧಿತ ಚಿಕಿತ್ಸೆಗಳು ಮತ್ತು ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಗಳ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಂಡಿರುವ ಡಾ.ರೋಹಿತ್ ಜಿ. ಭಟ್ ಅವರು ಇದೀಗ ಈ ಅನುಭವದೊಂದಿಗೆ ಮತ್ತೆ ಬೆನಕ ಹೆಲ್ತ್ ಸೆಂಟರ್, ಉಜಿರೆಯಲ್ಲಿ ರೋಗಿಗಳಿಗೆ ಸೇವೆ ನೀಡಲಿದ್ದಾರೆ.

ಮುಂಬೈನಲ್ಲಿ ಪಡೆದ ಉನ್ನತ ತರಬೇತಿ ಮತ್ತು ಅನುಭವವು
ಡಾ. ರೋಹಿತ್ ಜಿ. ಭಟ್ ಅವರ ವೈದ್ಯಕೀಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದ್ದು, ಬೆನಕ ಹೆಲ್ತ್ ಸೆಂಟರ್‌ನ ಗುಣಮಟ್ಟದ ಆರೋಗ್ಯ ಸೇವೆಗೆ ಮತ್ತಷ್ಟು ಉತ್ಸಾಹ ಮತ್ತು ನವ ಚೈತನ್ಯ ನೀಡಲಿದೆ.
ಡಾ.ರೋಹಿತ್ ಜಿ ಭಟ್ ಅವರು ತಮ್ಮ MBBS ಪದವಿಯನ್ನು ಮೈಸೂರಿನ ಪ್ರಖ್ಯಾತ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿ, MS(Ortho) ವೈದ್ಯಕೀಯ ಪದವಿಯನ್ನು ರಾಜಸ್ಥಾನದ ಕೋಟಾದಲ್ಲಿ ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿರುತ್ತಾರೆ. ಬೆಂಗಳೂರಿನ ಖ್ಯಾತ ವೈದ್ಯಕೀಯ ಸಂಸ್ಥೆ ಅಪೋಲೋ ಮತ್ತು ಭಗವಾನ್ ಮಹಾವೀರ ಜೈನ್ ಇಲ್ಲಿ Upper Limb with Hand and Micro-Surgery ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಅವರು ಡಾ.ರೋಹಿತ್ ಜಿ ಭಟ್ ಅವರನ್ನು ಈ ಸಾಧನೆಗಾಗಿ ಹೂಗುಚ್ಛ ನೀಡಿ ಸ್ವಾಗತಿಸಿ ಅಭಿನಂದಿಸಿ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ನಗರ ಪ್ರದೇಶಗಳಲ್ಲಿ ಸಿಗುವಂತಹ ವಿಶೇಷ ವೈದ್ಯಕೀಯ ಸೇವೆ ಲಭಿಸುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಡಾ.ಭಾರತಿ ಜಿ.ಕೆ , ಡಾ.ಆದಿತ್ಯ ರಾವ್ , ಡಾ. ಅಂಕಿತ ಜಿ ಭಟ್ , ಡಾ.ನವ್ಯಮತ್ತಿತರರು ಉಪಸ್ಥಿತರಿದ್ದರು.
















Post Comment