ಮುಂಡೂರು ; ಎಸ್.ಐ.ಆರ್. ಮಾಹಿತಿ ಕೇಂದ್ರ ಉದ್ಘಾಟನೆ

ಮುಂಡೂರು ; ಎಸ್.ಐ.ಆರ್. ಮಾಹಿತಿ ಕೇಂದ್ರ ಉದ್ಘಾಟನೆ

Share
IMG-20260709-WA0003 ಮುಂಡೂರು ; ಎಸ್.ಐ.ಆರ್. ಮಾಹಿತಿ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ : ವಿಧಾನಸಭಾ ಕ್ಷೇತ್ರದ ಮೆಲಂತಬೆಟ್ಟು ಕಾಂಗ್ರೆಸ್ ಗ್ರಾಮಪಂಚಾಯತ್ ಸಮಿತಿ, ಮುಂಡೂರು, ಕಾಂಗ್ರೆಸ್ ಗ್ರಾಮ ಸಮಿತಿ ಆಶ್ರಯದಲ್ಲಿ ಮುಂಡೂರು ಶ್ರೀ ಶಾರದಾಂಬ ಯುವಕ ಮಂಡಲ ಸಭಾಂಗಣದಲ್ಲಿ ಎಸ್.ಐ.ಆರ್. ಮಾಹಿತಿ ಕೇಂದ್ರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ರಕ್ಷಿತ್ ಶಿವರಾಮ್ ಎಸ್.ಐ.ಆರ್. ಮಾಹಿತಿ ಕೇಂದ್ರವು ಕೇವಲ ಒಂದು ಕಚೇರಿ ಅಲ್ಲ; ಇದು ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಜನಸೇವಾ ಕೇಂದ್ರವಾಗಿದೆ. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡಿದ್ದು ಆ ಹಕ್ಕು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

IMG-20260615-WA0021-4 ಮುಂಡೂರು ; ಎಸ್.ಐ.ಆರ್. ಮಾಹಿತಿ ಕೇಂದ್ರ ಉದ್ಘಾಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿರುವ
ಈ ಸಂದರ್ಭದಲ್ಲಿ ಅನೇಕ ಜನರಿಗೆ ದಾಖಲೆಗಳ ಬಗ್ಗೆ, ಅರ್ಜಿ ಸಲ್ಲಿಸುವ ವಿಧಾನ, ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವರ್ಗಾವಣೆಯ ಬಗ್ಗೆ ಗೊಂದಲಗಳಿವೆ. ಅಂತಹ ಎಲ್ಲರಿಗೂ ಸರಿಯಾದ ಮಾಹಿತಿ, ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡುವ ಉದ್ದೇಶದಿಂದ ಈ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದ್ದು ಯಾವುದೇ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬುದೇ ನಮ್ಮ ಆಶಯವಾಗಿದೆ ಎಂದ ರಕ್ಷಿತ್ ಶಿವರಾಮ್ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ಯಾವುದೇ ತಪ್ಪುಗಳಿದ್ದರೆ, ಅದನ್ನು ಸರಿಪಡಿಸಲು ಈ ಕೇಂದ್ರದಲ್ಲಿ ಅಗತ್ಯ ಸಹಾಯ ಒದಗಿಸಲಾಗುತ್ತದೆ.
ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ, ಎಸ್ಐಆರ್ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಉಸ್ತುವಾರಿ ರಮಾನಂದ ಸಾಲಿಯನ್, ಮುಂಡೂರು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಜೈನ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಕೊಡಕಲ್, ಪಕ್ಷದ ಪ್ರಮುಖರಾದ ನಾರಾಯಣ ಪೂಜಾರಿ ಮೇಲಂತೆಬೆಟ್ಟು, ಜಯಾನಂದ ಪಿಲಿಕಲ, ನೀತಾ ಮಹೇಶ್ ಕುಮಾರ್ ನಡಕರ, ಶ್ರೀಧರ್ ಅಂಚನ್, ಕಾರ್ಯಕರ್ತರಾದ, ಅಬ್ದುಲ್ ಹಕೀಮ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ನವೀನ್ ಗೌಡ ಸವಣಾಲು, ಹರಿಶ್ಚಂದ್ರ ಹೆಗಡೆ, ಇಸುಬು ಬಡಕಿಲ್ಲ , ಆದಂ ದುರ್ಗಾ ನಗರ, ರಾಜೇಶ್ ಭಟ್ ಸವಣಾಲು, ಫ್ರಾನ್ಸಿಸ್ ಫೆರ್ನಾಂಡಿಸ್, ವಿನೋದ್ ಬದ್ಯಾರ್ , ಪ್ರಮೋದ್ ಮೇಲಂತಬೆಟ್ಟು, ಚಂದ್ರಶೇಖರ ಸವಣಾಲು, ಚಿದಾನಂದ ಶೆಟ್ಟಿ ಸವಣಾಲು, ಸುನಿತಾ ಆನಂದ ಸಾಲಿಯಾನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

IMG-20260615-WA0005-4-1024x1024 ಮುಂಡೂರು ; ಎಸ್.ಐ.ಆರ್. ಮಾಹಿತಿ ಕೇಂದ್ರ ಉದ್ಘಾಟನೆ

Previous post

ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

Next post

ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ- ಹಳೆಕೋಟೆ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ ಬಿಡುಗಡೆ: ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ

Post Comment

ಟ್ರೆಂಡಿಂಗ್‌

error: Content is protected !!