ಕೋಮು ಭಾವನೆ ಪ್ರಚೋದನೆ, ಸೌಹಾರ್ದತೆಗೆ ಧಕ್ಕೆ ಆರೋಪ : ಏಳು ವೆಬ್ ನ್ಯೂಸ್ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲು

ಕೋಮು ಭಾವನೆ ಪ್ರಚೋದನೆ, ಸೌಹಾರ್ದತೆಗೆ ಧಕ್ಕೆ ಆರೋಪ : ಏಳು ವೆಬ್ ನ್ಯೂಸ್ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲು

Share
Screenshot_20260710_065423_Google ಕೋಮು ಭಾವನೆ ಪ್ರಚೋದನೆ, ಸೌಹಾರ್ದತೆಗೆ ಧಕ್ಕೆ ಆರೋಪ : ಏಳು ವೆಬ್ ನ್ಯೂಸ್ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲು

ಮಂಗಳೂರು :ಪುತ್ತೂರಿನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಕೋಮು ಭಾವನೆಗಳನ್ನು ಪ್ರಚೋದಿಸುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಂದೇಶಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ನಾಡಿನ ಎರಡು ಪ್ರಮುಖ ಕನ್ನಡ ದೈನಿಕಗಳ ವೆಬ್ ನ್ಯೂಸ್ ಸೇರಿದಂತೆ ಏಳು ಸಾಮಾಜಿಕ ಮಾಧ್ಯಮಗಳ ವಿರುದ್ಧ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

1) ‘ಪುತ್ತೂರು ಚಾವಡಿ’ ಇನ್ಸ್ಟಾಗ್ರಾಮ್ ವಿರುದ್ಧ Cr. No: 82/2026 U/S: 353(2)BNS-2023 ಅಡಿಯಲ್ಲಿ
2) ‘ಹೊಸ ದಿಗಂತ’ ವಿರುದ್ಧ Cr. No: 83/2026 U/S: 353(2)BNS ಅಡಿಯಲ್ಲಿ,ವ3) ‘Zoomin tv’ ವಿರುದ್ಧ
Cr. No: 84/2026 U/S: 353(2)BNS ಅಡಿಯಲ್ಲಿ
4) ‘News focuskannada.com’ ವಿರುದ್ಧ Cr.No: 85/2026 U/S: 353(2)BNS ಅಡಿಯಲ್ಲಿ 5)’ಉದಯವಾಣಿ’ ವಿರುದ್ಧ Cr. No: 86/2026 U/S: 353(2)BNS-2023 ಅಡಿಯಲ್ಲಿ , 6) ‘Prakhara News.com’ ವಿರುದ್ಧ Cr. No: 87/2026 U/S: 353(2)BNS ಅಡಿಯಲ್ಲಿ, 7) Karnataka portfolio@karnatakaportf ಟ್ವಿಟ್ಟರ್ ಪೇಜ್’ ವಿರುದ್ಧ Cr. No: 88/2026 U/S: 353 (2)BNS ಅಡಿಯಲ್ಲಿ ಪುತ್ತೂರು ನಗರ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಜುಲೈ 08-2026 ರಂದು ಪುತ್ತೂರು ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಮೇಲ್ಕಾಂಡ ವೆಬ್ ನ್ಯೂಸ್ ಗಳು ಸತ್ಯ ಘಟನೆಯನ್ನು ಪ್ರಸಾರ ಮಾಡದೇ ಹಿಂದೂ-ಮುಸ್ಲಿಂ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದ ಬಗ್ಗೆ ನೊಂದ ವ್ಯಕ್ತಿಗಳು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಹಾಗೂ ಕೋಮು ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!