ಬೆಳ್ತಂಗಡಿ; ಖೋಟಾ ನೋಟ್ ಪ್ರಿಂಟಿಂಗ್ ಪ್ರೆಸ್ ಗೆ ಪೊಲೀಸ್ ದಾಳಿ : ಏಳ್ವರ ಬಂಧನ


ಬೆಳ್ತಂಗಡಿ : ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಮಹಮ್ಮದ್ ಇದ್ರೀಸ್ ಎಂಬವರ ಹೊಸ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನಕಲಿ ಖೋಟಾ ನೋಟು ಪ್ರಿಂಟ್ ಮಾಡಿ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದ ಬೃಹತ್ ಅಡ್ಡೆಯೊಂದಕ್ಕೆ ಜುಲೈ 15ನೇ ಬುಧವಾರ ಸುಮಾರು ಮಧ್ಯರಾತ್ರಿ 1 ಗಂಟೆಗೆ ಉಪ್ಪಿನಂಗಡಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಟ್ಟಡದೊಳಗೆ 500 ಮುಖಬೆಲೆಯ ನೋಟು -1 ಮತ್ತು A-4 ಸೈಜ್ ಹಾಳೆಯಲ್ಲಿ ಪ್ರಿಂಟ್ ಮಾಡಲಾದ 500 ರೂ ಮುಖ ಬೆಲೆಯ ನೋಟುಗಳಂತೆ ಕಾಣುವ A-4 ಸೈಜ್ ಹಾಳೆಗಳು-21, 1) BENQ ಕಂಪನಿಯ ಮಾನಿಟರ್ ಒಂದು, 2) LAPCARE ಕಂಪನಿಯ ಸಿಪಿಯು ಮತ್ತು ಮೌಸ್ , ಕೀ ಬೋರ್ಡ, 3 ) ಪೇಪರ್ ಬ್ಲೇಡ್ ಕಟರ್ಸ್ಸ್ –ಎರಡು, 4) ಸ್ಕೇಲ್ –ಎರಡು, 5) SKY LAMP 380 SECURITY THREAD MIMIC MACHINE –ಒಂದು 6) KYOCERA ಕಂಪನಿಯ ಕಲರ್ ಝೆರಾಕ್ಸ್ /ಪ್ರಿಂಟರ್ / ಸ್ಕಾನರ್ –ಒಂದು, 7) ಗಾಂಧೀಜಿರವರ ಮುಖ ಚಹರೆ ಸೀಲ್ -1, RBI ಹೆಸರಿನ SECURITY THREAD ಹೊಂದಿರುವ 5 ಬಾಕ್ಸ್ ಪೇಪರಗಳು, (RBI) ಭದ್ರತಾ ದಾರವನ್ನು ಹೋಲುವ ವಿಶೇಷ ಹಸಿರು ಪ್ಲಾಸ್ಟಕ್ ರೋಲಗಳು, 920 PVC ಗ್ಲಾಸ್ ವೈಟ್-1, REFINIX RC 55 HARDNER -1, ಅಲ್ಟೋ ಕಾರು ಒಂದು ಮತ್ತಿತರ ಸೊತ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದು ದಂಧೆಯಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜು.16 ರಂದು BNS-2023 – ಕಲಂ 178 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.
ಬಂಧಿತ ಆರೋಪಿಗಳನ್ನು ಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿನ್ನಿಕಲ್ಲು ನಿವಾಸ ಅಬ್ದುಲ್ ಖಾದರ್ ಮಗ ಸಿರಾಜುದ್ದೀನ್(34), ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಉಸ್ಮಾನ್ ಪಿಎ ಮಗ ಇರ್ಷಾದ್(31), ಪುತ್ತೂರು ಕಸಬ ಗ್ರಾಮದ ಬಪ್ಪಳಿಗೆ ನಿವಾಸಿ ಹಸನ್ ಕುಂಙ ಮಗ ಇಬ್ರಾಹಿಂ(60), ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಎಂ.ಎ.ಆರ್ಕೇಡ್ ಬಿಲ್ಡಿಂಗ್ ನಿವಾಸಿ ಮಹಮ್ಮದ್ ಮಗ ಸಲ್ಮಾನ್ ಪಾರೀಸ್(25), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಚೆನ್ನಡ್ಕ್ ಕ್ವಾಟ್ರಸ್ ನಿವಾಸಿ ಮಹಮ್ಮದ್ ಮಗ ಶರೀಫ್(51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮರಕವಾಡ ಗ್ರಾಮದ ಪುಂಡಲೀಕ ಮಗ ಸಂದೀಪ್ ಪುಂಡಲೀಕ ಶೋಳಂಬಿ(30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ಪೊರ್ಕಡ ನಿವಾಸಿ ಅಬ್ದುಲ ಮಗ ಮಹಮ್ಮದ್ ನಬಾಸ್(37) ಎಂಬವರೆಂದು ಗುರುತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಇನ್ಸ್‌ಪೆಕ್ಟರ್ ನಾಗರಾಜ್. ಟಿ.ಡಿ ಮತ್ತು ಸಬ್ ಇನ್ಸ್‌ಪೆಕ್ಟರ್ ಸುತೇಶ್.ಕೆ.ಪಿ ನೇತೃತ್ವದ ತಂಡದ ಎಎಸ್ಐ ದಾಮೋದರ,ಚರಣ್, ಗಾಜೇಂದ್ರ ನಾಯ್ಕ್, ಮೋಹನ, ನಂಜುಂಡ, ಸಂಗಪ್ಪ ಮತ್ತಿತರರು ಭಾಗವಹಿಸಿದ್ದರು. ಪ್ರಕರಣದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.















Post Comment