ದೆಹಲಿ ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೌರ್ಜನ್ಯ ವಿರೋಧಿಸಿ ಸಿ.ಪಿ.(ಐ)ಎಂ. ಪ್ರತಿಭಟನೆ

ದೆಹಲಿ ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೌರ್ಜನ್ಯ ವಿರೋಧಿಸಿ ಸಿ.ಪಿ.(ಐ)ಎಂ. ಪ್ರತಿಭಟನೆ

Share
20260723_110317-1024x768 ದೆಹಲಿ ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೌರ್ಜನ್ಯ ವಿರೋಧಿಸಿ ಸಿ.ಪಿ.(ಐ)ಎಂ. ಪ್ರತಿಭಟನೆ

ಬೆಳ್ತಂಗಡಿ : ಮಹಾತ್ಮಾ ಗಾಂಧೀಜಿಯವರು ಬ್ರಿಟೀಷರ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ, ಸೋನಂ ವಾಂಗ್ಹುಕ್ ಅವರು ಬ್ರಿಟೀಷರಿಗಿಂತಲೂ ಕೆಟ್ಟದಾದ ಮೋದಿ ಸರಕಾರದ ವಿರುದ್ಧ 26 ದಿವಸ ಉಪವಾಸ ಕುಳಿತಿದ್ದಾರೆ, ಬ್ರಿಟೀಷರಿಗಿಂತ ಕೆಟ್ಟದಾದ ಸರಕಾರದ ವಿರುದ್ಧ ಪ್ರತಿಭಟನೆ, ಹಬ್ಉಪವಾಸ ಮಾಡಬಾರದ ಎಂದು ನ್ಯಾಯವಾದಿ ಸಿ.ಪಿ.(ಐ).ಎಂ. ಮುಖಂಡ ಬಿ.ಎಂ‌. ಭಟ್ ಪ್ರಶ್ನಿಸಿದರು.
ಅವರು ಕೇಂದ್ರ ಸರ್ಕಾರ ದೆಹಲಿ ಜಂತ‌ರ್ ಮಂತ್ರರ್ ನಲ್ಲಿ ಶಾಂತಿಯುತ ಹೋರಾಟದಲ್ಲಿ ನಿರತರಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮೂಲಕ ಎಸಗಿದ ಅಮಾನವೀಯ ದೌರ್ಜನ್ಯದ ವಿರುದ್ಧ
ಬೆಳ್ತಂಗಡಿ ತಾಲೂಕು ಆಡಳಿತ ಸೌಧ ಆವರಣದಲ್ಲಿ
ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಅನ್ಯಾಯದ ವಿರುದ್ದ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳದಿದ್ದರೆ ಈ ದೇಶವನ್ನು ಉಳಿಸಲು ಸಾಧ್ಯವಿಲ್ಲ, ಬಿಜೆಪಿ, ದೇಶವನ್ನು ಸರ್ವ ನಾಶ ಮಾಡಿದೆ, ಬಿಜೆಪಿಯಂಥ ಕೆಟ್ಟ ಪಕ್ಷ ಈ ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ಟೀಕಿಸಿದರು.

IMG-20260615-WA0021-17 ದೆಹಲಿ ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೌರ್ಜನ್ಯ ವಿರೋಧಿಸಿ ಸಿ.ಪಿ.(ಐ)ಎಂ. ಪ್ರತಿಭಟನೆ

ಕೇಂದ್ರ ಸರಕಾರ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಟ ಆಡಿದ ಹಾಗೂ ನ್ಯಾಯುತವಾಗಿ ಶಾಂತಿಯುತವಾಗಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಯೋಗ್ಯತೆ ಇಲ್ಲದೆ ವಿದ್ಯಾರ್ಥಿಗಳ ಮೇಲಿನ ಕೇಂದ್ರ ಸರಕಾರದ ಗೂಂಡಾಗಿರಿಯನ್ನು ನಾವು ಎಂದಿಗೂ ಸಹಿಸಲಾರೆವು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.
ನೀಟ್ ಪರಿಕ್ಷೆಯ ಅವ್ಯವಹಾರ, ಪ್ರಶ್ನೆ ಪತ್ರಿಕೆ ಬಹಿರಂಗ, ಇತ್ಯಾದಿಗಳಿಂದ ಹತಾಶರಾದ ಮಕ್ಕಳ ಆತ್ಮಹತ್ಯೆ ಪ್ರಕರಣ ಮೊದಲಾದ ವಿಚಾರಗಳಿಗೆ ಕಾರಣರಾದ ಮಾನವ ಸಂಪನ್ಮೂಲ ಸಚಿವರಾದ ಧರ್ಮೇಂದ್ರ ಪ್ರಧಾನ ಮತ್ತು ಪ್ರಧಾನಿ ನರೇಂದ್ರ ಮೋದಿ ಸರಕಾರ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಶ್ಯಾಮರಾಜ್ ಪಟ್ರಮೆ ಮಾತನಾಡಿ ಮೋದಿ ಸರಕಾರ ಕೊಂದ 21 ಅಮಾಯಕ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಅವರು ದೇಶದ ಮುಂದಿನ ಭವಿಷ್ಯಗಳಾದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಕೇಂದ್ರ ಸರಕಾರವು ನಮ್ಮ ದೇಶನ್ನು ಆಳುವ ಅರ್ಹತೆಯನ್ನು ಕಳಕೊಂಡಿದೆ ಟೀಕಿಸಿದರು.
ನಿಮ್ಮ ಲಾಠಿ ಗುಂಡಿಗೆ ಹೆದರುವುದಿಲ್ಲ ಎಂದ ಅವರು ನೀವು ನಮ್ಮ ಮೇಲೆ ಹಲ್ಲೆ ನಡೆಸಬಹುದು, ಕೈ ಕಾಲು ಮುರಿಯಬಹುದು, ಜೈಲಿಗೆ ಹಾಕಬಹುದು, ಕೊಲೆ ಮಾಡಬಹುದು ಅದಕ್ಕಿಂತ ಹೆಚ್ಚು ನಿಮಗೇನುಮಾಡಲು ಸಾದ್ಯವಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತಾಡಿದ ಸಿಪಿ(ಐ)ಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಅವರು ಮಕ್ಕಳ ಮೇಲೆ ಹಲ್ಲೆ ನಡೆಸಲು ಪೋಲೀಸರ ಹೆಸರಲ್ಲಿ ಬಿಜೆಪಿಯ ಗೂಂಡಾಗಳನ್ನು ಕಳುಹಿಸಿದ ಸರಕಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.

ಲಾಠಿ ಹಿಡಿದುಕೊಂಡು ಗೂಂಡಾಗಳಾಗಿ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿ ಜೈಲಿಗೆ ತಳ್ಳುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಹಿರಿಯ ರೈತ ಮುಖಂಡರಾದ ಲಕ್ಷ್ಮಣ ಗೌಡ, ಮಾತಾಡಿದರು. ತರುವಾಯ ಕೇಂದ್ರ ಸರಕಾರವನ್ನು ವಜಾಗೋಳಿಸಲು ಆಗ್ರಹಿಸಿ ರಾಷ್ಟ್ರಪತಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಪಕ್ಷದ ತಾಲೂಕು ಸಮಿತಿ ಸದಸ್ಯೆ ಜಯಶ್ರೀ ಮನವಿ ವಾಚಿಸಿದರು. ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ಹೋರಾಟದ ನಾಯಕತ್ವವನ್ನು‌ ಧನಂಜಯ, ಜಯರಾಮ ಮಯ್ಯ, ಸುಕುಮಾರ್, ಜನವಾದಿ ಮಹಿಳಾಸಂಘಟನೆಯ ಜಿಲ್ಲಾಧ್ಯಕ್ಷರಾದ ಕಿರಣಪ್ರಭ, ಕುಮಾರಿ, ಅಪ್ಪಿ ಕೊಯ್ಯೂರು ಮತ್ತಿತರ ನಾಯಕರುಗಳು ಇದ್ದರು.

IMG-20260615-WA0005-13-1024x1024 ದೆಹಲಿ ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೌರ್ಜನ್ಯ ವಿರೋಧಿಸಿ ಸಿ.ಪಿ.(ಐ)ಎಂ. ಪ್ರತಿಭಟನೆ

Post Comment

ಟ್ರೆಂಡಿಂಗ್‌

error: Content is protected !!