ಕಕ್ಷಿದಾರಳಾಗಿ ಬಂದ ಮಹಿಳೆಗೆ ಬೆಳ್ತಂಗಡಿಯ ವಕೀಲನಿಂದ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ

ಕಕ್ಷಿದಾರಳಾಗಿ ಬಂದ ಮಹಿಳೆಗೆ ಬೆಳ್ತಂಗಡಿಯ ವಕೀಲನಿಂದ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ

Share
IMG-20260906-WA0026 ಕಕ್ಷಿದಾರಳಾಗಿ ಬಂದ ಮಹಿಳೆಗೆ ಬೆಳ್ತಂಗಡಿಯ ವಕೀಲನಿಂದ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ

ಬೆಂಗಳೂರು : ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಕಕ್ಷಿದಾರರ ನ್ಯಾಯಕ್ಕಾಗಿ ವಾದ ಮಂಡಿಸುವ ಮೂಲಕ ಸಮಾಜಕ್ಕೆ ಕಾನೂನು ಸಂದೇ ನೀಡಬೇಕಾದ ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳ ಪರವಾಗಿ ವಾದ ಮಂಡಿಸಿ ನ್ಯಾಯ ಕೊಡಿಸಬೇಕಾದ ನ್ಯಾಯವಾದಿಯೊಬ್ಬರು ದಾಂಪತ್ಯ ಕಲಹದಲ್ಲಿ ಕಕ್ಷಿದಾರಳಾಗಿ ಪರಿಚಯವಾದ ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಬ್ಬಂಟಿ ಇರುವಾಗ ಬಾಡಿಗೆ ಮನೆಗೆ ಆಗಾಗ ಬಂದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಕೆಲವು ಸಯಯದ ಬಳಿಕ ಮದುವೆಗೆ ನಿರಾಕರಿಸಿ ಚಿತ್ರಹಿಂಸೆ ನೀಡಿ ಕೊಲೆಗೆ ಯತ್ನಿಸಿದ ಬಗ್ಗೆ ಆರೋಪಿ‌ ವಿರುದ್ಧ ಬೆಂಗಳೂರಿನ ಯಶವಂತಪುರ ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಮೂಲದ ನ್ಯಾಯವಾದಿ ಬೆಂಗಳೂರಿನ ಯಲಹಂಕ ನಿವಾಸಿಯಾಗಿರುವ ಜಿತಿನ್ ಜಿಜೊ ಎಂಬವರೇ ಕಕ್ಷಿದಾರಳಾಗಿ ಪರಿಚಯವಾದ ವಿವಾಹಿತ ಮಹಿಳೆಯನ್ನು ಪೀಡಿಸಿ ಬೆನ್ನು ಬಿದ್ದು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಮದುವೆಯಾಗಲು ನಿರಾಕರಿಸಿದ್ದಲ್ಲದೆ ಇವರಿಬ್ಬರ ಖಾಸಗಿ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಸಂಭಾಷಣೆ ಮತ್ತಿತರ ಸಾಕ್ಷ್ಯಗಳನ್ನು ನಾಶ ಮಾಡಿದ್ದು ಈ ಬಗ್ಗೆ ಪ್ರಶ್ನಿಸಿದ ಮಹಿಳೆಯ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗಿ ಕೊಲೆಗೆ ಯತ್ನಿಸಿದ್ದಾನೆ.
ಜಿತಿನ್ ಜಿಜೋ ಎಂಬಾತನಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಎನ್ ಆರ್ ಆರ್ ಆಸ್ಪತ್ರೆಗೆ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ‌ ಜಿತಿನ್ ಜಿಜೋ ವಿರುದ್ಧ ಯಶವಂತಪುರ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG-20260615-WA0021-11 ಕಕ್ಷಿದಾರಳಾಗಿ ಬಂದ ಮಹಿಳೆಗೆ ಬೆಳ್ತಂಗಡಿಯ ವಕೀಲನಿಂದ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ

ಪ್ರಕರಣದ ಹಿನ್ನೆಲೆ :
ದೂರುದಾರರಾದ ವಿವಾಹಿತ ಮಹಿಳೆಗೆ 2021ನೇ ಸಾಲಿನಲ್ಲಿ ಮದುವೆಯಾಗಿದ್ದು ಪತಿಯ ವರ್ತನೆಯಿಂದ ಬೇಸತ್ತು ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಗಂಡನ ವಿರುದ್ಧ Domestic Violence ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ದಾವೇ ಹೂಡಿದ್ದರು.
ಈ ಸಮಯದಲ್ಲಿ 2025ರ ಫೆಬ್ರವರಿ ತಿಂಗಳಲ್ಲಿ ಯಲಹಂಕದಲ್ಲಿ ವಾಸವಿರುವ ಜಿತಿನ್ ಜಿಜೊ ಎಂಬವರಿಗೆ ಕಕ್ಷಿದಾರಳಾಗಿ ಮಹಿಳೆ ಪರಿಚಯವಾಗಿದ್ದರು. Domestic Violence ಪ್ರಕರಣವನ್ನು ನಡೆಸುತ್ತಿದ್ದ ಕಾರಣ ಮಹಿಳೆ ಜಿತಿನ್ ಜಿಜೊ ಅವರನ್ನು ವಕೀಲರಾಗಿ ನೇಮಿಸಿಕೊಂಡಿದ್ದು
ಇದೇ ಸಮಯದಲ್ಲಿ ಕೇಸಿನ ವಿಚಾರವಾಗಿ‌ ಒಬ್ಬರಿಗೊಬ್ಬರು ಭೇಟಿಯಾಗಿ ಅಥವಾ ಫೋನ್ ಮೂಲಕ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆ ಮೇಲೆ ಪ್ರೀತಿ ಹುಟ್ಟಿದ್ದರಿಂದ ಜಿತೀನ್ ಜಿಜೊ “ನನಗೆ ನಿನ್ನ ಮೇಲೆ ಪ್ರೀತಿ ಇದೆ, ನಾನು ನಿನ್ನ ಪ್ರಕರಣವನ್ನು ಬಗೆಹರಿಸಿ ನಿನ್ನ ಗಂಡನಿಂದ ನಿನಗೆ ಮುಕ್ತಿ ನೀಡಿ ಬಳಿಕ ನಿನ್ನನ್ನು ಮದುವೆಯಾಗುತ್ತೇನೆ. ನಾನು ನಿನ್ನನ್ನು ಬಿಟ್ಟು ಇರಲು ಆಗುತ್ತಿಲ್ಲಾ ನಾನು ನಿನ್ನನ್ನು ಮದುವೆಯಾಗುತ್ತೇನೆ..” ಎಂದು ಹೇಳಿದ್ದಲ್ಲದೆ “ನಾನು ಸಹ ನೀನು ವಾಸವಾಗಿರುವ ಏರಿಯಾದಲ್ಲಿ ವಾಸವಾಗಿರುತ್ತೇನೆಂದು ತಿಳಿಸಿ ಮಹಿಳೆ ವಾಸವಾಗಿರುವ ಮನೆಯ 3ನೇ ಮಹಡಿಯ ಮನೆಯನ್ನು ಬಾಡಿಗೆ ಪಡೆದುಕೊಂಡು ಜಿತಿನ್ ಜಿಜೋ ವಾಸವಾಗಿರುತ್ತಾರೆ.
ಬಳಿಕ‌ ಮನೆಯಲ್ಲಿರುವಾಗ ಅವರು ಸಹ ಅವರ ಕೆಲಸವನ್ನು ಮುಗಿಸಿಕೊಂಡು ಆಗಾಗ್ಗೆ ಮಹಿಳೆ ವಾಸವಿರುವ ಮನೆಗೆ ಬರುತ್ತಿದ್ದು ಬಲವಂತವಾಗಿ ಮಹಿಳೆ ಜೊತೆ ಹಲವಾರು ಬಾರಿ ದೈಹಿಕವಾಗಿ ಲೈಂಗಿಕ ಸಂಪರ್ಕ ಬೆಳೆಸಿ ನಂತರ 2026ನೇ ಸಾಲಿನಲ್ಲಿ ಕ್ರಮೇಣವಾಗಿ ದೂರುದಾರರ ಮೇಲೆ ಅನುಮಾನ ಪಟ್ಟು ನೀನು ಅವರ ಜೊತೆ ಸಂಬಂಧ ಇಟ್ಟು ಕೊಂಡಿದ್ದೀಯಾ ಅವರ ಜೊತೆ ಇದ್ದೀಯಾ, ಎಂದು ಅನುಮಾನ ಪಟ್ಟು ಕೆಟ್ಟಪದಗಳಿಂದ ನಿಂದಿಸಿರುತ್ತಿದ್ದರು. ಹೀಗಿರುವಾಗ ಇದೇ ಸೆಪ್ಟಂಬರ್ 2-2026ರಂದು ಮೊದಲಿನಂತೆ ಮಹಿಳೆಯ ಮನೆಗೆ ಬಂದಿದ್ದು ಮಹಿಳೆಯ ಆರೋಗ್ಯ ಸರಿ ಇರದ ಕಾರಣ ಜಿತಿನ್ ಜಿಜೋ ಜೊತೆ ಎನ್.ಆರ್.ಆರ್ ಆಸ್ಪತ್ರೆಗೆ ಹೋಗಿ ವೈದ್ಯರಿಂದ ಪರೀಕ್ಷೆ ನಡೆಸಿ ಔಷಧಿ ಪಡೆದು ಮನೆಗೆ ವಾಪಾಸು ಬಂದಿದ್ದರು.

ಆ ಸಮಯದಲ್ಲಿ ಮಹಿಳೆಯ ಮೊಬೈಲ್ ತೆಗೆದುಕೊಂಡು Signal App ನಲ್ಲಿದ್ದ ಮಹಿಳೆ ಮತ್ತು ಜಿತಿನ್ ಜಿಜೊ ಮಧ್ಯೆ ನಡೆದಿರುವ ಎಲ್ಲಾ ವೈಯಕ್ತಿಕ ಸಂಭಾಷಣೆಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕಿದ್ದರು.
ಅಳಿಸಿದ ಸಂಭಾಷಣೆಗಳಲ್ಲಿ ಜಿತಿನ್ ನೀಡಿದ್ದ ಮದುವೆಯ ಭರವಸೆಗಳು, ವೈಯಕ್ತಿಕ ಮಾತುಕತೆಗಳು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳು ಇದ್ದವು.
“ಆ ಸಂದೇಶಗಳನ್ನು ಏಕೆ ಅಳಿಸಿದ್ದೀರಿ..” ಎಂದು ಪ್ರಶ್ನಿಸಿದಾಗ, ಜಿತಿನ್ ಜಿಜೊ “ನಿನ್ನನ್ನು ಮದುವೆಯಾಗುವುದಿಲ್ಲ, ನಮ್ಮಿಬ್ಬರ ಮದುವೆಯಿಂದ
ನನ್ನ ವಕೀಲ ವೃತ್ತಿಗೆ ಧಕ್ಕೆಯಾಗಬಹುದು ಹಾಗೂ ಆ ಸಂದೇಶಗಳು ತಮ್ಮ ವಿರುದ್ಧ ಸಾಕ್ಷ್ಯವಾಗಬಹುದು ಎಂಬ ಭಯದಿಂದ ಅವುಗಳನ್ನು ಅಳಿಸಿದ್ದಾಗಿ ಹೇಳಿದರು. “ಹಾಗದಾರೆ ನೀವು ನನ್ನನ್ನು ಮದುವೆಯಾಗುವುದಿಲ್ಲಾ ಎಂದರೆ ನನ್ನ ಜೊತೆ ಈ ರೀತಿಯಾಗಿ ವರ್ತಿಸಿದ್ದಿರಿ..” ಎಂದು ಕೇಳಿದಕ್ಕೆ ಅವರು ಏನೂ ಮಾತನಾಡದೇ ಏಕಾಏಕಿ ಅತ್ಯಂತ ಹಿಂಸಾತ್ಮಕವಾಗಿ “ನೀನು ಈಗ ಸಾಯಲೇ ಬೇಕು ಇಲ್ಲದಿದ್ದರೆ, ನನ್ನ ವಕೀಲ ವೃತ್ತಿಗೆ ಅವಮಾನ ಆಗುತ್ತದೆ, ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ.. ” ಇತ್ಯಾದಿ
ಅವಾಚ್ಯ ಪದಗಳಿಂದ ಬೈಯ್ದು ಮಹಿಳೆ ಮನೆಯಿಂದ ಹೊರಗೆ ಹೊಗಲು ಪ್ರಯತ್ನಿಸಿದಾಗ ಹೊರಗೆ ಹೋಗಲು ಬಿಡದೇ ಹಿಡಿದುಕೊಂಡು ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿ, ಎದೆ, ಬೆನ್ನು ಹಾಗೂ ದೇಹದ ವಿವಿಧ ಭಾಗಗಳಿಗೆ ಕೈಯಿಂದ ನಿರಂತರವಾಗಿ ಅಮಾನುಷವಾಗಿ ಹೊಡೆದಿದ್ದಾನೆ. ಅಲ್ಲದೆ ಬಾಯಿಂದ ಮೈ ಕೈಗೆಲ್ಲಾ ಕಚ್ಚಿ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ ,
ಗಂಡ ಬಿಟ್ಟವಳು ನೀನು, ನಾನು ನಿನ್ನನು ಮದುವೆಯಾಗಬೇಕಾ.. ” ಎಂದು ಹೇಳುತ್ತಾ ಅಲ್ಲಿಯೇ ಇದ್ದ ಸ್ಟಾಂಡ್ ಫ್ಯಾನ್ ಅನ್ನು ತೆಗೆದುಕೊಂಡು ಹೊಡೆದು ನಂತರ ವೇಲ್ ಒಂದನ್ನು ತೆಗೆದುಕೊಂಡು ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ.
ಈ ಸಂದರ್ಭ ತಪ್ಪಿಸಿಕೊಂಡು ಅಲ್ಲಿಂದ ಹೊರಗೆ ಬಂದ ಮಹಿಳೆ ಸ್ಥಳೀಯ ಎನ್.ಆರ್. ಆರ್ ಆಸ್ಪತ್ರೆಗೆ ಹೋಗಿ ಚಿಕೆತ್ಸೆಯನ್ನು ಪಡೆದುಕೊಂಡು ಬಂದಿದ್ದಾರೆ.

IMG-20260615-WA0005-9-1024x1024 ಕಕ್ಷಿದಾರಳಾಗಿ ಬಂದ ಮಹಿಳೆಗೆ ಬೆಳ್ತಂಗಡಿಯ ವಕೀಲನಿಂದ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ


“ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ನಂತರ ಮದುವೆಯಾಗುವುದಿಲ್ಲ ಎಂದು ಮೊಬೈಲ್ ನಲ್ಲಿದ್ದ ಸಾಕ್ಷಿಗಳನ್ನು ನಾಶಪಡಿಸಿ ಕೈಗಳಿಂದ ಮತ್ತು ಸ್ಟ್ಯಾಂಡ್ ಫ್ಯಾನ್ ನಿಂದ ಮೇಲೆ ಹಲ್ಲೆಗೈದು ಬಾಯಿಂದ ಕಚ್ಚಿ ಜೀವ ಬೆದರಿಕೆಯೊಡ್ಡಿ ಅವಾಚ್ಯ ಪದಗಳಿಂದ ನಿಂದಿಸಿ ಸಾಕ್ಷ್ಯ ನಾಶಪಡಿಸಿರುವ ಜಿತಿನ್ ಜಿಜೊ ಎಂಬವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ಜಿತಿನ್ ಜಿಜೊ ಎಂಬಾತನ ವಿರುದ್ಧ ಬೆಂಗಳೂರಿನ ಯಶವಂತಪುರ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ (Crim No:394/2026) BNS 2023 U/S 69,126(2), 115(2), 118(1), 74,351(2), 352,238 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!