ಬೆಳ್ತಂಗಡಿ ರೆಂಕೆದಗುತ್ತುವಿನಲ್ಲಿ‌ ಭಾನುವಾರ ಗಮನಸೆಳೆದ ಪುಟಾಣಿ ಮೆಟ್ರಿಕ್ ಮೇಳ

ಬೆಳ್ತಂಗಡಿ ರೆಂಕೆದಗುತ್ತುವಿನಲ್ಲಿ‌ ಭಾನುವಾರ ಗಮನಸೆಳೆದ ಪುಟಾಣಿ ಮೆಟ್ರಿಕ್ ಮೇಳ

Share
IMG-20260907-WA0006 ಬೆಳ್ತಂಗಡಿ ರೆಂಕೆದಗುತ್ತುವಿನಲ್ಲಿ‌ ಭಾನುವಾರ ಗಮನಸೆಳೆದ ಪುಟಾಣಿ ಮೆಟ್ರಿಕ್ ಮೇಳ

ಬೆಳ್ತಂಗಡಿ : ಸರಕಾರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸುವ ‘ಮೆಟ್ರಿಕ್ ಮೇಳ’ ಪರಿಕಲ್ಪನೆಯಿಂದ ಪ್ರೇರೇಪಣೆಗೊಂಡ ಪುಟಾಣಿ ಮಕ್ಕಳೇ ‘ಬೆಂಕಿ ಇಲ್ಲದ ಅಡುಗೆ’ ಎಂಬ ಪರಿಕಲ್ಪನೆಯೊಂದಿಗೆ ಭಾನುವಾರ ಸಂಜೆ ಹೊತ್ತು ಆಯೋಜಿಸಿದ ಪುಟ್ಟ ಮೆಟ್ರಿಕ್ ಮೇಳವೊಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತುವಿನ ಸಾಮ್ರಾಟ್ ಆಶೋಕ ರಂಗಮಂದಿರದಲ್ಲಿ ಸ್ಥಳೀಯರ ಗಮನ ಸೆಳೆಯಿತು.

IMG-20260615-WA0021-12 ಬೆಳ್ತಂಗಡಿ ರೆಂಕೆದಗುತ್ತುವಿನಲ್ಲಿ‌ ಭಾನುವಾರ ಗಮನಸೆಳೆದ ಪುಟಾಣಿ ಮೆಟ್ರಿಕ್ ಮೇಳ

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಪರಿಸರದ ಶಾಲಾ ಪುಟಾಣಿ ಮಕ್ಕಳ ತಂಡವೊಂದು
ತಮ್ಮದೇ ಅಭಿರುಚಿಯಲ್ಲಿ ‘ಬೆಂಕಿ ಇಲ್ಲದ ಅಡುಗೆ’ ಎಂಬ ಪರಿಕಲ್ಪನೆಯೊಂದಿಗೆ ಕೆಲವೊಂದು ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಸರಳವಾಗಿ ತಯಾರಿಸಿ ಭಾನುವಾರದ ‘ಮೆಟ್ರಿಕ್ ಮೇಳ’ವನ್ನು ಆಯೋಜಿಸಿದ್ದು ಪುಟಾಣಿ ಮಕ್ಕಳ
ಈ ಶೈಕ್ಷಣಿಕೇತರ ಚಟುವಟಿಕೆಗೆ ಪೋಷಕರು ವ್ಯಾಪಾರದ ಮೂಲಕ ಸಾಥ್ ನೀಡಿದ್ದಾರೆ.
ನಿಮ್ಮ ಇಂಥ ಚಟುವಟಿಕೆಗೆ ಯಾರು ಮಾರ್ಗದರ್ಶನ ಮಾಡಿದ್ರು ಎಂದು ವಿಚಾರಿಸಿದರೆ “ಸುಂದರಿ ಆಂಟಿ” ಎಂದು ಉತ್ತರಿಸಿದರು. ತಿಂಡಿ ತಿನಿಸುಗಳನ್ನು ಮತ್ತು ಪಾನೀಯಗಳನ್ನು ತಾವೇ ತಯಾರಿಸಿಕೊಂಡಿರುವುದು ಮಕ್ಕಳ ಕಲಿಕೆಯ ಉತ್ಸಾಹ ಮತ್ತು ಅಭಿರುಚಿಗೆ ಸಾಕ್ಷಿಯಾಗಿತ್ತು. ರಂಗಮಂದಿರವನ್ನೇ ಪುಟ್ಟ ಸಂತೆಯಾಗಿ ಪರಿವರ್ತಿಸಿದ ಮಕ್ಕಳ ಸೃಜನಶೀಲತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಪುಟ್ಟ ಮಕ್ಕಳ‌ ಪುಟಾಣಿ ಸಂತೆಗೆ ಪೋಷಕರೇ ಗ್ರಾಹಕರಾಗಿ ಬಂದಾಗ ಮಕ್ಕಳು ಅಂಗಡಿ ಮಾಲಕರಂತೆ ಎದ್ದು ನಿಂತು ನಗು ನಗುತ್ತಾ ಸ್ವಾಗತಿಸುತ್ತಿದ್ದ ದೃಶ್ಯ ಮುದ್ದಾಗಿ ಮುಗ್ಧವಾಗಿತ್ತು‌.
ಮಕ್ಕಳ ಈ ಚಟುವಟಿಕೆ ಶಾಲಾ ತರಗತಿ ಚಟುವಟಿಕೆಗಳಿಗೆ ಪೂರಕವೂ ಪ್ರೇರಕವೂ ಆಗಬಹುದು ಎನ್ನುವುದು ಗಮನಾರ್ಹ.
ರೆಂಕೆದಗುತ್ತು ಭಾನುವಾರದ ಸಂಜೆ ಸಂತೆಯಲ್ಲಿ ವಿದ್ಯಾರ್ಥಿಗಳಾದ ತನುಶ್ರೀ 9th, ಅನುಶ್ರೀ 8th, ಜ್ಯೋತಿ ರಕ್ಷಾ 7th, ಸೌಮ್ಯ 6th, ಧನ್ಯ 5th, ಶಿವರಾಜ್ 2ನೇ ಇವರು ಮಾಲಕರಾಗಿ ತಮ್ಮ ಪುಟ್ಟ ಅಂಗಡಿಗಳಿಗೆ ಲಾಭ ಅಥವಾ ನ್ಯಾಯ ಒದಗಿಸಲು ಮುಗ್ಧವಾಗಿ ನಗು ನಗುತ್ತಾ ಚೌಕಾಶಿ ಮಾಡುತ್ತಿದ್ದರು.

IMG-20260615-WA0005-10-1024x1024 ಬೆಳ್ತಂಗಡಿ ರೆಂಕೆದಗುತ್ತುವಿನಲ್ಲಿ‌ ಭಾನುವಾರ ಗಮನಸೆಳೆದ ಪುಟಾಣಿ ಮೆಟ್ರಿಕ್ ಮೇಳ

Post Comment

ಟ್ರೆಂಡಿಂಗ್‌

error: Content is protected !!