ಉಜಿರೆ; ದಂತ ವೈದ್ಯ ಡಾ.ಎಂ.ಎಂ. ದಯಾಕರ್ ಅವರಿಗೆ ಏಷ್ಯಾನೆಟ್’ ‘ಆರೋಗ್ಯ ರಕ್ಷಣಾ ಶ್ರೇಷ್ಠತಾ ಪ್ರಶಸ್ತಿ-2026

ಬೆಳ್ತಂಗಡಿ : ಉಜಿರೆಯ ಎಂ.ಡಿ.ಎಸ್. ಡೆಂಟಲ್ ಕ್ಲಿನಿಕ್ ನ ದಂತ ವೈದ್ಯರಾದ ಡಾ. ಎಂ.ಎಂ. ದಯಾಕರ್ ಅವರ ಆರೋಗ್ಯ ಸೇವೆ ಮತ್ತು ಕೊಡುಗೆಯನ್ನು ಗುರುತಿಸಿ
ಕನ್ನಡ ಪ್ರಭ ಮತ್ತು ಏಷ್ಯಾನೆಟ್ ವತಿಯಿಂದ ‘ಆರೋಗ್ಯ ರಕ್ಷಣಾ ಶ್ರೇಷ್ಠತಾ ಪ್ರಶಸ್ತಿ-2026’ಗೆ ಆಯ್ಕೆಯಾಗಿದ್ದಾರೆ.
“ಆರೋಗ್ಯ ಸೇವಾ ಕ್ಷೇತ್ರಕ್ಕೆ ಕನ್ನಡ ಪ್ರಭಾ ಮತ್ತು ಏಷ್ಯಾನೆಟ್ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವೈದ್ಯರ ಕೊಡುಗೆ ಮತ್ತು ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

‘ಆರೋಗ್ಯ ರಕ್ಷಣಾ ಶ್ರೇಷ್ಠತಾ ಪ್ರಶಸ್ತಿ – 2026’ ಗೆ ನಾಮನಿರ್ದೇಶನ ಮಾಡಿರುವ ಕನ್ನಡ ಪ್ರಭ ಏಷ್ಯಾನೆಟ್ 2926ನೇ ಆಗಸ್ಟ್ 2ನೇ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಡಾ.ಎಂ.ಎಂ. ದಯಾಕರ್ ಅವರಿಗೆ ಆಹ್ವಾನಪತ್ರವನ್ನು ಕಳುಹಿಸಿದ್ದು ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ “ನಿಮ್ಮ ಉಪಸ್ಥಿತಿಯು ಅದರ ಮಹತ್ವವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ಅರ್ಥಪೂರ್ಣ ಪರಿಣಾಮ ಬೀರಲು ಬಯಸುವ ಇತರರಿಗೆ ಸ್ಫೂರ್ತಿ ನೀಡುತ್ತದೆ. ಎಂದು ಕೆಪಿಪಿಎಲ್ ಉಪಾಧ್ಯಕ್ಷರಾದ
ರಾಘವೇಂದ್ರ ಬಿ.ಸಿ ಆಹ್ವಾನ ಪತ್ರದಲ್ಲಿ ಉಲ್ಲೇಖಿಸಿದೆ.
ಪ್ರಶಸ್ತಿ ಪ್ರದಾನ ಈವೆಂಟ್ ಅನ್ನು ಏಷ್ಯಾನೆಟ್ ನ್ಯೂಸ್ ಮೀಡಿಯಾ & ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುತ್ತಿದೆ.















Post Comment