‘ಎಬಿಕೆ ಸಾಂತ್ವನ ಕಾರುಣ್ಯ ಗಲ್ಫ್ ಕಮಿಟಿ’ಯ ಸಾಂತ್ವನ ಸೇವೆಗೆ ಚಾಲನೆ

‘ಎಬಿಕೆ ಸಾಂತ್ವನ ಕಾರುಣ್ಯ ಗಲ್ಫ್ ಕಮಿಟಿ’ಯ ಸಾಂತ್ವನ ಸೇವೆಗೆ ಚಾಲನೆ

Share

1.5 ಲಕ್ಷ ವೆಚ್ಚದ ರಂಝಾನ್ ಕಿಟ್ ವಿತರಣೆ

ಬೆಳ್ತಂಗಡಿ : ಅನಿವಾಸಿ ಸಹೋದರರು ಕುದ್ರಡ್ಕ ಎಬಿಕೆ ಗಲ್ಫ್ ಕಮಿಟಿ ವತಿಯಿಂದ ಸಾಂತ್ವನ ಸೇವೆಗೆ ಚಾಲನೆ ಮತ್ತು ಬಡ ನಿರ್ಗತಿಕ ಕುಟುಂಬಗಳಿಗೆ 1.5 ಲಕ್ಷ ಮೌಲ್ಯದ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಕುದ್ರಡ್ಕ ಜಂಕ್ಷನ್ ನಲ್ಲಿ ರವಿವಾರ ನಡೆಯಿತು.
ಅನಿವಾಸಿ ಬ್ರದರ್ಸ್ ಎಬಿಕೆ ಸಾಂತ್ವನ ಕಾರುಣ್ಯ ಗಲ್ಫ್ ಸಮಿತಿ ಕುದ್ರಡ್ಕ ಇದರ ಜೀವ ಕಾರುಣ್ಯ ಮತ್ತು ಸಾಂತ್ವನ ಸೇವೆಯ ಮೊದಲ ಹೆಜ್ಜೆಯ ಭಾಗವಾಗಿ 2026 ನೇ ಸಾಲಿನ ರಂಝಾನ್ ಕಿಟ್ ವಿತರಣಾ ಯೋಜನೆಯನ್ನು ಹಮ್ಮಿಕೊಂಡಿದ್ದು ಸುಮಾರು 1.5 ಲಕ್ಷ‌‌ ಮೌಲ್ಯದ ರಂಝಾನ್ ಕಿಟ್ ಗಳನ್ನು ಬಡ ನಿರ್ಗತಿಕ ಕುಟುಂಬಗಳಿಗೆ ವಿತರಿಸಲಾಯಿತು.
ಎಬಿಕೆ ಗಲ್ಫ್ ಕಮಿಟಿ ಅಧ್ಯಕ್ಷ ಇಮ್ತಿಯಾಝ್ ಟಿ.ಹೆಚ್. ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಪಿ.ಎಮ್. ವಹಿಸಿಕೊಂಡಿದ್ದರು. ಸಭೆಯಲ್ಲಿ ದುವಾ ಮತ್ತು ಉದ್ಘಾಟನೆಯನ್ನು ಕುದ್ರಡ್ಕ ಮಸ್ಜಿದ್ ಖತೀಬರ್ ಎ.ಕೆ ಇಬ್ರಾಹಿಂ ಸಅದಿ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸದಾನಂದ ಶೆಟ್ಟಿ ಮಡಪ್ಪಾಡಿ, ನಿಸಾರ್ ಟಿ.ಹೆಚ್. ಕುದ್ರಡ್ಕ, ಶರಫುದ್ದೀನ್ ಬಿಗ್ ಬೇಕ್ಸ್, ಜಬ್ಬಾರ್ ಕುದ್ರಡ್ಕ, ಅಬ್ಬೋನು ಕುದ್ರಡ್ಕ, ಶೇಕುಞಿ ಕುದ್ರಡ್ಕ, ಅದ್ದು ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.
ಎಬಿಕೆ ಗಲ್ಫ್ ಕಮಿಟಿ‌ ಕುದ್ರಡ್ಕ ಇದರ ಪಧಾಧಿಕಾರಿಗಳಾದ ಇಮ್ತಿಯಾಝ್, ಶಂಸುದ್ದೀನ್, ನಿಝಾರ್ ಕೆಎಸ್, ಶಮೀರ್ ಎಮ್, ಇರ್ಶಾದ್ ಕೆ.ಎಮ್ ಹಾಗೂ ಸದಸ್ಯರಾದ ಸಲೀಮ್ ಎಂ,ಅನ್ವರ್ ಪಿ.ಎಮ್, ಆಶಿಕ್ ಹೆಚ್, ಸಿದ್ದೀಕ್ ಬಿ.ಎಸ್, ಆಶಿರ್, ನಿಝಾಮ್, ಮುಸ್ತಫಾ, ತ್ವಾಹಿರ್, ಅನ್ಸಾಫ್, ಆಶಿಕ್ ಕೆ, ಇರ್ಶಾದ್ ಅಬ್ಬು ಶುಭ ಹಾರೈಸಿದರು.
ಗಲ್ಫ್ ಕಮಿಟಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆಎಮ್ ಸ್ವಾಗತಿಸಿದರು. ರಿಯಾಝ್ ಕುದ್ರಡ್ಕ‌ ನಿರೂಪಿಸಿದರು. ನವಾಝ್ ಕುದ್ರಡ್ಕ ಮತ್ತು ಎಬಿಕೆ ಸದಸ್ಯ ಮುಸ್ತಫಾ ಬಿ.ಎಸ್ ಉಸ್ತುವಾರಿ ವಹಿಸಿಕೊಂಡಿದ್ದರು. ಕುದ್ರಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಿಸಾರ್ ಧನ್ಯವಾದ ಸಲ್ಲಿಸಿದರು.

Post Comment

ಟ್ರೆಂಡಿಂಗ್‌

error: Content is protected !!