ಬೆಳ್ತಂಗಡಿ ಬಸ್ ನಿಲ್ದಾಣ ಸೈಟ್ ಮಬ್ಬುಗತ್ತಲ ಮರೆಯಲ್ಲಿ ಗುಸುಗುಸು ಪಿಸುಪಿಸು!

ಅರ್ಧ ‘ಕಾಮ’ಗಾರಿಯಲ್ಲಿ
ಸಿಕ್ಕಿಬಿದ್ದ ಅರೆನಗ್ನ ಜೋಡಿ!
ಬೆಳ್ತಂಗಡಿ : ನಗರದ ಹಳೆ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದ ಬಸ್ ನಿಲ್ದಾಣ ಕಾಮಗಾರಿಯ ಗುಂಡಿಯಲ್ಲಿ ಅರೆನಗ್ನವಾಗಿ ಅಪ್ರಾಪ್ತ ಜೋಡಿ ಪತ್ತೆಯಾದ ಘಟನೆ ರಾತ್ರಿ ಜನರು ಓಡಾಡುವ ಸಮಯದಲ್ಲೇ ನಡೆದಿದೆ.
ಬೆಳ್ತಂಗಡಿ ನಗರದ ಹಳೆ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದ ಬಸ್ ನಿಲ್ದಾಣ ಕಾಮಗಾರಿಯ ಐದಾರು ಅಡಿ ಆಳದ ಗುಂಡಿಯಲ್ಲಿ ವಿದ್ಯಾರ್ಥಿ ಜೋಡಿಯೊಂದು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಪೊಲೀಸ್ ವಶವಾದ ಸ್ವಾರಸ್ಯಕರ ಸಂಗತಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ರಾತ್ರಿ ಸುಮಾರು 8.45ರಿಂದ 9ಗಂಟೆಯ ಹೊತ್ತು ಹುಡುಗಿಯೊಬ್ಬಳು ಕೆಎಸ್ ಆರ್ ಟಿ ಸಿ ಕಚೇರಿ (ಟಿ.ಸಿ) ಪಾಯಿಂಟ್ ಬಳಿಯಿಂದ ನಿರ್ಮಾಣ ಹಂತದಲ್ಲಿರುವ ಹೊಸ ಬಸ್ ನಿಲ್ದಾಣದ
ತಗಡು ಶೀಟ್ ಆವರಣದೊಳಗೆ ಕತ್ತಲಿರುವ ಸ್ಥಳದ ಕಡೆ
ಚಿಕ್ಕ ಸಂದಿನಲ್ಲಿ ಇಳಿದು ಹೋಗಿರುವುದನ್ನು ಟಿ.ಸಿ. ಪಾಯಿಂಟ್ ಮೇಲಿನ ರೂಮ್ ನಲ್ಲಿರುವ ರೈಟರ್ ಮತ್ತು ಬಸ್ ನಿಲ್ದಾಣದಲ್ಲಿದ್ದ ಕೆಲವರು
ಗಮನಿಸಿದ್ದು ಶೌಚಾಲಯ ಸಿಗದೆ ಕೆಳಗೆ ಮೂತ್ರಕ್ಕೆ ಹೋಗುತ್ತಿರಬಹುದೆಂದು ಸುಮ್ಮನಾಗಿದ್ದರು. ಅಪಾಯಕಾರಿ ಗುಂಡಿಗಳಿರುವ ನಿರ್ಮಾಣ ಹಂತದ ಬಸ್ ನಿಲ್ದಾಣದ
ಕತ್ತಲಿನ ಕಡೆ ಇಳಿದು ಹೋದ ಹುಡುಗಿ ಸುಮಾರು ಅರ್ಧ ಗಂಟೆಯಾದರೂ ವಾಪಾಸು ಬಾರದಿದ್ದಾಗ ಸಂಶಯಗೊಂಡು ಅಲ್ಲಿದ್ದವರು ಹುಡುಗಿ ಇಳಿದು ಹೋದ ಕಡೆ ಮೊಬೈಲ್ ಟಾರ್ಚ್ ಹಾಕಿಕೊಂಡು ಹೋಗಿ ಹುಡುಕಾಡಿದಾಗ ಐದಾರು ಅಡಿ ಆಳದ ಗುಂಡಿಯಲ್ಲಿ ಹುಡುಗಿಜೊತೆ ಮತ್ತು ಹುಡುಗನೂ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು.
ಹುಡುಗಿ ಆ ಕಡೆ ಇಳಿದು ಹೋಗಿರುವುದನ್ನು ಗಮನಿಸಿದ್ದರು ಆದರೆ ಆ ಹುಡುಗ ಮೊದಲೇ ಸಾರ್ವಜನಿಕರ ಕಣ್ಣು ತಪ್ಪಿಸಿ ಹೋಗಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಅರೆ ನಗ್ನವಾಗಿ ಗುಂಡಿಯಲ್ಲಿ ಸಿಕ್ಕಿ ಬಿದ್ದ ಅಪರಿಚಿತ ಜೋಡಿ ಕೊಟ್ಟಿಗೆಹಾರದ ವಿದ್ಯಾರ್ಥಿಗಳು ಎಂಬ ಸಂಗತಿ ವಿಚಾರಿಸಿದಾಗ ಬಯಲಾಗಿದೆ.
ವಿದ್ಯಾರ್ಥಿ ಅಪ್ರಾಪ್ತ ಜೋಡಿ ವಿದ್ಯಾರ್ಥಿಗಳು ಎಂಬ ವಿಷಯ ತಿಳಿದುಕೊಂಡ ಸಾರ್ವಜನಿಕರು ಮತ್ತು ಶೌಚಾಲಯದ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಜೋಡಿಯನ್ನು ವಿಚಾರಿಸಿದಾಗ ಇದೇ ರೀತಿ ಇನ್ನೊಂದು ಜೋಡಿ ಬೆಳ್ತಂಗಡಿಗೆ ಜೊತೆಗೆ ಬಂದಿರುವ ವಿಚಾರ ತಿಳಿದು ಬಂದಿದೆ. ಎರಡು ಜೋಡಿಯ ಪೈಕಿ ಒಂದು ಜೋಡಿ ಗುಂಡಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಪೊಲೀಸರು ಜಮಾಯಿಸಿದಾಗ ಒಬ್ಬಳು ಹುಡುಗಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಹುಡುಗ ಬಸ್ ಹತ್ತಿ ಪರಾರಿಯಾಗಿದ್ದು ಇಬ್ಬರು ಹುಡುಗಿಯರನ್ನು ಮತ್ತು ಒಬ್ಬ ಹುಡುಗನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಹೆತ್ತವರಿಗೆ ಮಾಹಿತಿ ನೀಡಿ ಮುಚ್ಚಳಿಕೆ ಪಡೆದುಕೊಂಡು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣದ ಕಾಮಗಾರಿ ಸ್ಥಳದಲ್ಲಿ ಸಮರ್ಪಕವಾದ ಬೇಲಿ ಮತ್ತು ಸೂಕ್ತ ಕಾವಲುಗಾರರನ್ನು ನೇಮಿಸದೆ ನಿರ್ಲಕ್ಷ್ಯವಹಿಸಿದ್ದೇ ಇಂಥ ಕೃತ್ಯಗಳಿಗೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ನಾಗರಿಕರಿಂದ ಕೇಳಿ ಬಂದಿದೆ.















Post Comment