ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮೀಸಲಾತಿ ಸಮಾಲೋಚನಾ ಸಭೆ; ಸಂವಾದ

ಬೆಳ್ತಂಗಡಿ : ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಮಾಲೋಚನಾ ಸಭೆಯು ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ಆಗಸ್ಟ್
31ರಂದು ನಡೆಯಿತು.
ಸಮಿತಿಯ ಅಧ್ಯಕ್ಷರಾದ ಸುಂದರ್ ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಿಕ್ಷಕ ಸುಕೇಶ್ ಕೆ ಮಾತನಾಡಿ ಉದ್ದೇಶ ಹಾಗೂ ಮೀಸಲಾತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ವಿವಿಧ ಗ್ರಾಮಗಳಿಂದ ಭಾಗವಹಿಸಿದ್ದ ಯುವ ಮುಖಂಡರುಗಳು ಪ್ರಶ್ನೆ ಸಲಹೆ, ಸೂಚನೆಗಳೊಂದಿಗೆ ಅಭಿಪ್ರಾಯ ಮಂಡಿಸಿದರು.

ಸಂವಿಧಾನ ರಕ್ಷಣಾ ಸಮಿತಿಯ ಗೌರವ ಸಲಹೆಗಾರರಾಗಿರುವ ಶೇಖರ್ ಕುಕ್ಕೇಡಿ ಇವರು ಸಂವಾದದಲ್ಲಿ ಬಂದ ಚರ್ಚೆ ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಶಿವಾನಂದ ಪಡಂಗಡಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಜಿರೆ, ಗೌರವ ಸಲಹೆಗಾರರಾದ ಓಬಯ್ಯ ಆರಂಬೋಡಿ, ಶೇಖರ್ ವಿ ಧರ್ಮಸ್ಥಳ, ಬಾಬಿ ಮಾಲಾಡಿ, ನಾರಾಯಣ ಪುದುವೆಟ್ಟು, ಆದಿದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ದಿನೇಶ್ ಕೊಕ್ಕಡ, ಯುವ ವಕೀಲೆ
ಕು. ಸವಿತಾ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಯಿತು. ವಿನಯ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಮಾಲಾಡಿ ಸ್ವಾಗತಿಸಿ, ಮಾನ್ಯ ಉಜಿರೆ ವಂದಿಸಿದರು.














Post Comment