ಬಿಜೆಪಿ ತೊರೆದು ‘ಕೈ’ಹಿಡಿದಿದ್ದ ಮಹಿಳೆ ಒಂದೇ ವಾರದಲ್ಲಿ ಕಾಂಗ್ರೆಸ್ ಗೆ ಡೈವೋರ್ಸ್ !

ಬಿಜೆಪಿ ತೊರೆದು ‘ಕೈ’ಹಿಡಿದಿದ್ದ ಮಹಿಳೆ ಒಂದೇ ವಾರದಲ್ಲಿ ಕಾಂಗ್ರೆಸ್ ಗೆ ಡೈವೋರ್ಸ್ !

Share

ಬೆಳ್ತಂಗಡಿ : ಇತ್ತೀಚೆಗೆ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದ ನೆರಿಯಾ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯೆ ಮರಿಯಮ್ಮ ಅವರು ಶಾಸಕರಾದ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಇದೀಗ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು ಸ್ವಾರಸ್ಯಕರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

IMG-20260615-WA0021-42 ಬಿಜೆಪಿ ತೊರೆದು 'ಕೈ'ಹಿಡಿದಿದ್ದ ಮಹಿಳೆ  ಒಂದೇ ವಾರದಲ್ಲಿ ಕಾಂಗ್ರೆಸ್ ಗೆ ಡೈವೋರ್ಸ್ !

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಮತ್ತು ಇದೀಗ ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಿರುವುದು
“ಕೆರೆ ದಡ… ದಡ ಕೆರೆ” ಎಂಬತಾಗಿದೆ.

ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಬಿಜೆಪಿ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್, ಮಂಡಲ ಕೋಶಾಧಿಕಾರಿ ಜಯಂತ್ ಗೌಡ ಗುರಿಪಳ್ಳ, ನೆರಿಯ ಶಕ್ತಿ ಕೇಂದ್ರ ಅಧ್ಯಕ್ಷರಾದ ವಿಶ್ವನಾಥ್, ಮುಖಂಡರಾದ ಬಾಬು ಗೌಡ ಮತ್ತಿತರರು ಉಪಸ್ಥಿತರಿದ್ದರು.

IMG-20260615-WA0005-25-1024x1024 ಬಿಜೆಪಿ ತೊರೆದು 'ಕೈ'ಹಿಡಿದಿದ್ದ ಮಹಿಳೆ  ಒಂದೇ ವಾರದಲ್ಲಿ ಕಾಂಗ್ರೆಸ್ ಗೆ ಡೈವೋರ್ಸ್ !

Post Comment

ಟ್ರೆಂಡಿಂಗ್‌

error: Content is protected !!