ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದಿಂದ ಬೆಸ್ಟ್ ಎಂ.ಎಲ್.ಎ. ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ ಅವರಿಗೆ ಸನ್ಮಾನ

ಬೆಳ್ತಂಗಡಿ : ಕರ್ನಾಟಕದ ಖಾಸಗಿ ವಾಹಿನಿ ಕೊಡಮಾಡಿದ “ಬೆಸ್ಟ್ ಎಂ.ಎಲ್.ಎ” ಪ್ರಶಸ್ತಿ ಪುರಸ್ಕೃತರಾದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ಅವರನ್ನು ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘ ಮತ್ತು ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇವರ ಸಹಯೋಗದಲ್ಲಿ ‘ಮಿಥಿಲಾ’ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಪೇಟಾ ಧರಿಸಿ, ಶಾಲು ಹೊದಿಸಿ ಹಾಗೂ ಸನ್ಮಾನ ಪತ್ರ ನೀಡಿ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ನಲಿಕೆ ಸಮಾಜ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸೇಸಪ್ಪ ನಲಿಕೆ, ದೈವಾರಾಧನೆ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಗೋಪಾಲ ನಲಿಕೆ ಕಾಶಿಪಟ್ಣ, ನಲಿಕೆ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾದ ರಾಮು ಶಿಶಿಲ ಕಾನೂನು ಸಲಹೆಗಾರ್ತಿ ವಿನಿತಾ ಪೆರ್ಮುಡ, ಸಮಾಜದ ಪ್ರಮುಖರಾದ ತಿಮ್ಮಪ್ಪ ವೇಣೂರು, ರಂಜಿನಿ ಮುಂಡಾಜೆ, ಅನಂತ್ ಮುಂಡಾಜೆ, ಲಕ್ಷ್ಮಣ ಬೊಳ್ಳುರು, ಸುಂದರ ಮುಂಡಾಜೆ, ಗಣೇಶ್ ಕೋಟ್ಯಾನ್ ಚಾರ್ಮಾಡಿ, ಕಿರಣ್ ಅರ್ವ, ಹಿರಿಯರಾದ ಗೋಪಿ ನಲಿಕೆ ಮತ್ತಿತರರು ಉಪಸ್ಥಿತರಿದ್ದರು.














Post Comment