ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

Share
WhatsApp-Image-2024-03-21-at-11.01.44-AM-678x1024 ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

ಬೆಳ್ತಂಗಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪಿಗೆ ಬರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಯಕ್ಷಗಾನ ಕಲಾ ಪೋಷಕ, ಸಂಘಟಕ, ಅರ್ಥದಾರಿ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಅವರು ನೇಮಕಗೊಂಡಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತರ ಪದವಿ ಹಾಗೂ ಬಿ.ಇಡಿ ಪದವಿಯನ್ನು ಗಳಿಸಿರುವ ಇವರು ಸರಕಾರಿ ಸೇವೆಯಿಂದ ನಿವೃತ್ತಿ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ, ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. 500ಕ್ಕೂ ಮಿಕ್ಕಿ ಶೈಕ್ಷಣಿಕ ಕಾರ್ಯಾಗಾರಗಳು ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. ಅಲ್ಲದೆ 500ಕ್ಕೂ ಮಿಕ್ಕಿ ಧಾರ್ಮಿಕ ಉಪನ್ಯಾಸಗಳನ್ನು ನೀಡಿದವರು.

ಲೇಖಕರಾಗಿಯೂ ಗುರುತಿಸಿಕೊಂಡಿದ್ದಲ್ಲದೆ ಮಂಗಳೂರು ಆಕಾಶವಾಣಿಯಲ್ಲಿ ಚಿಂತನ ಕಾರ್ಯಕ್ರಮಗಳು ಮತ್ತು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ಅನೇಕ ಯಕ್ಷಗಾನ ಗೋಷ್ಠಿಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.

50ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶನ ಮಾಡಿದ್ದಾರೆ.ಶರವೂರು ಶ್ರೀ ದುರ್ಗಾಂಬಾ ಕಲಾ ಸಂಗಮದ ಸ್ಥಾಪಕ ಸದಸ್ಯರಾಗಿ ಯಕ್ಷಗಾನ ಕಲಾ ಪೋಷಕರಾಗಿದ್ದ ಇವರು ತನ್ನ ಹುಟ್ಟೂರಿನಲ್ಲಿ ರಾಮಕುಂಜೇಶ್ವರ ಯಕ್ಷಗಾನ ಸಭಾ ಎಂಬ ಯಕ್ಷಗಾನ ಸಂಘಟನೆಯ ಸ್ಥಾಪಕರಾಗಿ ಸಂಚಾಲಕರಾಗಿ, ನಿರಂತರವಾಗಿ ಸುಮಾರು 20 ವರ್ಷಗಳಲ್ಲಿ ಯಕ್ಷಗಾನವನ್ನು ಆಡಿಸಿದ ಯಕ್ಷಗಾನ ಪ್ರೇಮಿ.
ಯಕ್ಷಗಾನ ತಾಳಮದ್ದಲೆಗಳಲ್ಲಿ ಪ್ರಮುಖ ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು.
ಯಕ್ಷಗಾನ ಕಲಾ ಪೋಷಕರಾಗಿ, ಸಂಘಟಕರಾಗಿ ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ ಇದೀಗ ಸರಕಾರ ಯಕ್ಷಗಾನ ಅಕಾಡೆಮಿಗೆ ಇವರನ್ನು ಪರಿಗಣಿಸಿರುವುದು ಅರ್ಥಪೂರ್ಣ ಆಯ್ಕೆಯಾಗಿದೆ.
ಬೆಳ್ತಂಗಡಿಯಲ್ಲಿ ಇತ್ತಿಚೇಗೆ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮ್ಮೇಳನದ ಯಶಸ್ವಿಗೆ ಪ್ರಮುಖ ಪಾತ್ರವಹಿಸಿದ್ದರು ಎನ್ನುವುದು ಗಮನಾರ್ಹ

Post Comment

ಟ್ರೆಂಡಿಂಗ್‌

error: Content is protected !!