ಮನೆ ತೊರೆದಿದ್ದ ವ್ಯಕ್ತಿಯ ಕಳೆಬರ ಅರಣ್ಯದಲ್ಲಿ ಪತ್ತೆ

ಬೆಳ್ತಂಗಡಿ : ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದು ಮೂರು ವರ್ಷದ ಹಿಂದೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆಂದು ಮನೆ ತೊರೆದು ಹೋಗಿದ್ದ ವ್ಯಕ್ತಿಯೋರ್ವರ ಕಳೆಬರವು ಧರ್ಮಸ್ಥಳ ಸಮೀಪದ ಪುದುವೆಟ್ಟು ಪದವು ಪ್ರದೇಶದ ಕಾಡಿನಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ನಿವಾಸಿ ಟೋನಿ (24) ಎಂಬವರ ತಂದೆ ರಾಜು ಜೊಸೇಫ್ ಎಂಬವರ ಕಳೆಬರ ಪುದುವೆಟ್ಟು ಗ್ರಾಮದ ಕಾಡಿನಲ್ಲಿ ಪತ್ತೆಯಾಗಿದೆ.ರಾಜು ಜೋಸೆಫ್ ಅವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಮನೆಗೆ ಬಾರದೆ ದೂರದ ಊರಿಗೆ ಹೋಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡು ಕೆಲವೆಡೆ ಬಸ್ಸು ನಿಲ್ದಾಣದ ಬಳಿ ಮಲಗುತ್ತಿದ್ದವರು.ಮೂರು ವರ್ಷದ ಹಿಂದೊಮ್ಮೆ ಮನೆಗೆ ಬಂದು ಹೋದವರು ವಾಪಾಸು ಮನೆಗೆ ಬಂದಿರಲಿಲ್ಲ. ಹೀಗಿರುವಾಗ ಬುಧವಾರ ಸಂಜೆ, ರಾಜು ಜೊಸೇಫ್ ರವರ ಕಳೆಬರವು ಪುದುವೆಟ್ಟು ಗ್ರಾಮದ ಪದವು ಎಂಬಲ್ಲಿರುವ ಅರಣ್ಯ ಪ್ರದೇಶದ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು ಪುತ್ರ ಟೋನಿ ಎಂಬವರ ತಂದೆ ರಾಜು ಜೋಸೆಫ್ ಅವರ ಕಳೆಬರವನ್ನು ಗುರುತಿಸಿ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment