ಎನ್.ಎಸ್.ಟಿ. ಟ್ರಸ್ಟಿ ದಯಾನಂದ ಪೂಜಾರಿ ನಿಧನ

ಎನ್.ಎಸ್.ಟಿ. ಟ್ರಸ್ಟಿ ದಯಾನಂದ ಪೂಜಾರಿ ನಿಧನ

Share
IMG-20260916-WA0001-707x1024 ಎನ್.ಎಸ್.ಟಿ. ಟ್ರಸ್ಟಿ ದಯಾನಂದ ಪೂಜಾರಿ ನಿಧನ

ಬೆಳ್ತಂಗಡಿ : ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ನ ಅಜೀವ ಟ್ರಸ್ಟಿ ಹಾಗೂ ಪಾಂಡುರಂಗ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿದ್ದ ದಯಾನಂದ ಪೂಜಾರಿ (69 ವ) ದೀರ್ಘ ಕಾಲದ ಅನಾರೋಗ್ಯದ ಬಳಿಕ ಸೆಪ್ಟೆಂಬರ್ 15ರ ರಾತ್ರಿ ನಿಧನರಾದರು. ನಾಗರಿಕ ಸೇವಾ ಟ್ರಸ್ಟ್ ನ ಅಜೀವ ಟ್ರಸ್ಟಿಯಾಗಿ, ಶ್ರೀ ಪಾಂಡುರಂಗ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಅವರು ಅಪಾರ ಸೇವೆ ಸಲ್ಲಿಸಿದ್ದ ಅವರು‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದರು.

IMG-20260615-WA0021-19 ಎನ್.ಎಸ್.ಟಿ. ಟ್ರಸ್ಟಿ ದಯಾನಂದ ಪೂಜಾರಿ ನಿಧನ


ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಸೋಮನಾಥ ನಾಯಕ್, ಕಾರ್ಯದರ್ಶಿ ನಾರಾಯಣ ಕಿಲಂಗೋಡಿ, ಉಪಾಧ್ಯಕ್ಷೆ ವಿದ್ಯಾ ನಾಯಕ್, ಸ್ಥಾಪಕ ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಮೆನೇಜರ್ ಬಾಬು ಎ.ಮತ್ತು ಟ್ರಸ್ಟಿಗಳು ಹಾಗೂ ಹಿಂದೂ ಹಿತಚಿಂತನ‌ ವೇದಿಕೆಯ ಪದಾಧಿಕಾರಿಗಳು ಸರ್ವ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!