ಬಂದಾರು;ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

ಬಂದಾರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇವರ ವತಿಯಿಂದ “ವ್ಯಸನಮುಕ್ತ ಮತ್ತು ಕ್ಷಯ ಮುಕ್ತ ಯುವ ಜನತೆ” ಎಂಬ ಆಶಯದೊಂದಿದೆ
ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಅ:18ರಿಂದ 24ರವರೆಗೆ ನಡೆಯಲಿರುವ
ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ನೆರವೇರಿತು.
ಎಸ್ ಡಿಎಂ ಸಿ ಅಧ್ಯಕ್ಷ ಉಮೇಶ್ ಪೊಯ್ಯೋಲೆ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಇಲ್ಲಿನ
ಪ್ರಾಂಶುಪಾಲರಾದ ಪ್ರೊ. ಪದ್ಮನಾಭ ಕೆ ಅವರು ಮಾತನಾಡಿ ಶಿಬಿರದ ಉದ್ದೇಶ, ಶಿಬಿರಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿ ಶುಭಹಾರೈಸಿದರು.
ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಇಲ್ಲಿನ ರಕ್ಷಕ ಶಿಕ್ಷಕ ಸಂಘ ಸಂಘದ ಅಧ್ಯಕ್ಷೆ ವಾಹಿಲೆಟ್ ಮೊರಾಸ್, ಸ್ಥಳೀಯ
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ,
ಮುಖ್ಯ ಶಿಕ್ಷಕ ವಿಶ್ವನಾಥ ಎಂ.ಯು. ಸಂದರ್ಭೋಚಿತವಾಗಿ
ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಶಿಬಿರಾಧಿಕಾರಿಗಳಾದ ಡಾ. ಕುಶಾಲಪ್ಪ ಎಸ್ , ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ದಿವ್ಯ ಪ್ರಭು, ಸುಮನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕು.ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಯಕ್ಷ ಸ್ವಾಗತಿಸಿದರು.

















Post Comment