ಧರ್ಮಸ್ಥಳ ಸೌಜನ್ಯ ಪ್ರಕರಣ; ಮರುತನಿಖೆಗೆ‌ ಎಸ್ಐಟಿ ಪೂರ್ವಸಿದ್ಧತೆ ಪೂರ್ಣ

ಧರ್ಮಸ್ಥಳ ಸೌಜನ್ಯ ಪ್ರಕರಣ; ಮರುತನಿಖೆಗೆ‌ ಎಸ್ಐಟಿ ಪೂರ್ವಸಿದ್ಧತೆ ಪೂರ್ಣ

Share
InShot_20261022_122754504-1024x1024 ಧರ್ಮಸ್ಥಳ ಸೌಜನ್ಯ ಪ್ರಕರಣ; ಮರುತನಿಖೆಗೆ‌ ಎಸ್ಐಟಿ ಪೂರ್ವಸಿದ್ಧತೆ ಪೂರ್ಣ

ಯಾವ ಕ್ಷಣದಲ್ಲೂ ಧರ್ಮಸ್ಥಳದಿಂದ ಮರುತನಿಖೆ ಆರಂಭ ಸಾಧ್ಯತೆ

ಮಂಗಳೂರು : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಮರು ತನಿಖೆಗೆ ಸೆಪ್ಟೆಂಬರ್ 21ರಂದು
ಸುಪ್ರೀಂಕೋರ್ಟ್ ಆದೇಶ ನೀಡಿ ರಾಜ್ಯ ಸರಕಾರ ಎಸ್ ಐ ಟಿ ರಚಿಸಿ ಆದೇಶ ಹೊರಡಿಸಿ ಮೂರು ತಿಂಗಳಲ್ಲಿ ತನಿಖೆ ಮುಗಿಸಬೇಕೆಂದು ಸೂಚಿಸಿ ಭರ್ತಿ ಒಂದು ತಿಂಗಳು ತುಂಬಿದ್ದು ಮಂಗಳೂರಿಗೆ ಆಗಮಿಸಿದ ಎಸ್ ಐ ಟಿ ಏನು ಮಾಡುತ್ತಿದೆ? ತನಿಖೆಗೆ ಯಾವ ರೀತಿಯ ಪೂರ್ವ ತಯಾರಿ ನಡೆಸುತ್ತಿದೆ? ತನಿಖೆ ಪ್ರಾರಂಭವಾಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬರುತ್ತಿರುವಾಗಲೇ ಸದ್ಯದಲ್ಲೇ ಅಥವಾ ಎರಡೇ ದಿನಗಳಲ್ಲಿ ಧರ್ಮಸ್ಥಳದಿಂದ ಎಸ್ ಐ ಟಿ ಮರುತನಿಖೆಯನ್ನು ಆರಂಭಿಸಲು ಸಂಪೂರ್ಣ ಪೂರ್ವಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.‌
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಚಾಲನೆ ನೀಡಲಿದೆ. ಎರಡು ಅಥವಾ ಮೂರು ದಿನಗಳ ಒಳಗೆ ತನಿಖಾಧಿಕಾರಿಗಳ ತಂಡ ಸೌಜನ್ಯಳ ಅತ್ಯಾಚಾರ ನಡೆದ ಅಥವಾ ಮೃತಹೇಹ ಪತ್ರೆಯಾದ ಸ್ಥಳವಾದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕ ಎಂಬಲ್ಲಿ ಭೇಟಿ ನೀಡಿ ತನಿಖೆ ಆರಂಭಿಸುವ ನಿರೀಕ್ಷೆ ಇದೆ.

IMG-20260615-WA0021-12 ಧರ್ಮಸ್ಥಳ ಸೌಜನ್ಯ ಪ್ರಕರಣ; ಮರುತನಿಖೆಗೆ‌ ಎಸ್ಐಟಿ ಪೂರ್ವಸಿದ್ಧತೆ ಪೂರ್ಣ

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಈಗಾಗಲೇ ಮುಗಿಸಿಕೊಂಡಿದೆ ಎಂಬ ಮಾಹಿತಿ ಇದೆ.

ಎಸ್‌ ಐಟಿ ತಂಡ ಅಧಿಕೃತವಾಗಿ ಇನ್ನೆರಡು ದಿನಗಳಲ್ಲಿ ಕ್ಷೇತ್ರ ತನಿಖೆ ಆರಂಭಿಸಲು ಸಿದ್ಧತೆ ನಡೆಸಿಕೊಂಡಿದ್ದು
ಸೌಜನ್ಯ ಪ್ರಕರಣವನ್ನು 2012ರಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಬಳಿಕ‌ ತನಿಖೆ ನಡೆಸಿದ್ದ ಸಿಬಿಐ, ಸಂಬಂಧಪಟ್ಟ ನ್ಯಾಯಾಲಯಗಳ ಕಡತಗಳು ಮತ್ತು ಪಡೆದ ತನಿಖಾ ವರದಿಗಳನ್ನೊಳಗೊಂಡ ದಾಖಲೆಗಳನ್ನು ಎಸ್‌ಐಟಿ ಸಂಪೂರ್ಣವಾಗಿ ಪರಿಶೀಲಿಸಿದೆ ಎನ್ನಲಾಗಿದೆ.

ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ಎಸ್ ಐ ಟಿ ತಂಡವು ಮುಂದಿನ ಹಂತದಲ್ಲಿ ಅಪರಾಧ ಸ್ಥಳಕ್ಕೆ ಭೇಟಿ ನೀಡಲಿದೆ. ಇದರ ಜೊತೆಗೆ ಸೌಜನ್ಯ ಕುಟುಂಬದ ಸದಸ್ಯರು, ಪಿಎಸ್‌ಐ ಹಾಗೂ ಇತರೆ ಸಿಬ್ಬಂದಿಯ ವಿಚಾರಣೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮರುತನಿಖೆಯ ಆದೇಶದಂತೆ, ಎಸ್‌ಐಟಿ ತಂಡವು ಇನ್ನೆರಡು ದಿನಗಳಲ್ಲಿ ಸಕ್ರಿಯವಾಗಿ ಕಣಕ್ಕಿಳಿಯಲಿದೆ.
ದ.ಕ. ಜಿಲ್ಲಾ ಕೇಂದ್ರದಲ್ಲಿ ಮಂಗಳೂರು ಮತ್ತು ಬೆಳ್ತಂಗಡಿ/ಧರ್ಮಸ್ಥಳ ಠಾಣಾ ವ್ಯಾಪ್ತಿ ಸೂಕ್ತ ಸ್ಥಳದಲ್ಲಿ ಈಗಾಗಲೇ ತನಿಖಾತಂಡಕ್ಕೆ ಪ್ರತ್ಯೇಕ ಕಚೇರಿಯನ್ನೂ ಮಾಡಿಕೊಂಡಿದೆ.

IMG-20260921-WA0003-12-1024x1024 ಧರ್ಮಸ್ಥಳ ಸೌಜನ್ಯ ಪ್ರಕರಣ; ಮರುತನಿಖೆಗೆ‌ ಎಸ್ಐಟಿ ಪೂರ್ವಸಿದ್ಧತೆ ಪೂರ್ಣ

ಎಸ್ ಐ ಟಿ‌ ಅಧಿಕಾರಿಗಳು ಪ್ರಕರಣದ ಸಾಕ್ಷಿಗಳನ್ನು ನೋಟೀಸ್ ನೀಡಿ ಕಚೇರಿಗೆ ಕರೆಸಿ ಬಹುತೇಕ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜೊತೆಗೆ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಾಗಲೀ, ಬಲವಂತಪಡಿಸಿ ಹೇಳಿಕೆ ದಾಖಲಿಸಿಕೊಳ್ಳುವುದಾಗಲೀ ಮಾಡದಂತೆ ಸುಪ್ರೀಂಕೋರ್ಟ್ ಕೂಡಾ ಖಡಕ್ನಿ ರ್ದೇಶನ ನೀಡಿದ್ದು ಮರು ತನಿಖೆಯ ಪ್ರಾರಂಭ ಹಂತ ಯಾವ ರೀತಿಯಲ್ಲಿ ನಡೆಯಲಿದೆ ಎಂಬ‌ ಕುತೂಹಲ ನಾಗರೀಕರಲ್ಲಿ ಮೂಡಿದೆ.

Post Comment

ಟ್ರೆಂಡಿಂಗ್‌

error: Content is protected !!