ಶಿಬಾಜೆ:  ವಿದ್ಯುತ್‌ ಅವಘಡಕ್ಕೆ ಯುವತಿ ಬಲಿ

ಶಿಬಾಜೆ:  ವಿದ್ಯುತ್‌ ಅವಘಡಕ್ಕೆ ಯುವತಿ ಬಲಿ

Share
28-1 ಶಿಬಾಜೆ:  ವಿದ್ಯುತ್‌ ಅವಘಡಕ್ಕೆ ಯುವತಿ ಬಲಿ

ಬೆಳ್ತಂಗಡಿ :  ಆಕಸ್ಮಿಕವಾಗಿ ಯುವತಿಯೊಬ್ಬಳು ವಿದ್ಯುತ್ ಆಘಾತದ  ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಬರ್ಗುಲಾ ಎಂಬಲ್ಲಿನ ಗಣೇಶ್ ಶೆಟ್ಟಿ ಮತ್ತು ರೋಹಿನಿ ಪುತ್ರಿ ಪ್ರತೀಕ್ಷಾ ಶೆಟ್ಟಿ (20) ಎಂಬವರು  ಸಂಜೆ ಮನೆಯ ರಸ್ತೆ ಸಮೀಪ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಾಗ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿದೆ. ಸ್ಟೇ ವೈಯರ್ ಗೆ ವಿದ್ಯುತ್ ಸ್ಪರ್ಶಿಸಿದ್ದು  ಈ ವೇಳೆ ನೀರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಆಘಾತದಿಂದ  ಪ್ರತೀಕ್ಷಾ ಶೆಟ್ಟಿ ಮೃತಪಟ್ಟಿದ್ದಾರೆ. ವಿದ್ಯುತ್ ಅವಘಡಕ್ಕೆ ಬಲಿಯಾದ ಯುವತಿಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Previous post

ದ.ಕ. ರೆಡ್ ಅಲರ್ಟ್, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜೂ.27ರಂದು ರಜೆ; ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಆದೇಶ 

Next post

                                                                                             ಬಂದಾರು;ವಿವಿಧೆಡೆ ಗುಡ್ಡ ಕುಸಿತ:                                                                                             ಕೊಟ್ಟೆಗೆಗೆ ಹಾನಿ, ವಾಹನ ಸಂಚಾರಕ್ಕೆ ಅಡಚಣೆ

Post Comment

ಟ್ರೆಂಡಿಂಗ್‌