ಬಳೆ ಲೈನ್ ಸೇಲ್ ಮಾಡುತ್ತಿದ್ದ ಮಹಿಳೆ ನಾಪತ್ತೆ

ಜನವರಿ 19ರಂದು ಕಾಣೆಯಾದ ಸಂಧ್ಯಾ ಇದುವರೆಗೂ ಪತ್ತೆ ಇಲ್ಲ!
ಬೆಳ್ತಂಗಡಿ : ಜಾತ್ರೆ ಮತ್ತಿತರ ಕಾರ್ಯಗಳಲ್ಲಿ ಬಳೆ ಮಾರುವ ಮೂಲಕ ಚಿರಪರಿಚಿತರಾಗಿ ಗುರುತಿಸಿಕೊಂಡಿದ್ದ ಮಹಿಳೆಯೊಬ್ಬರು ಬಳೆ ಲೈನ್ ಸೇಲ್ ಗೆ ಹೋಗುವುದಾಗಿ ಹೇಳಿ ಹೋದಾಕೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಗುತ್ತಿಗೆಗುಡ್ಡೆ
ಕನ್ನಡಿಕಟ್ಟೆ ನಿವಾಸಿ ಬಸವರಾಜು ಎಂಬವರ ಪತ್ನಿ
ಸಂಧ್ಯಾ (55) ಎಂಬಾಕೆ ನಾಪತ್ತೆಯಾದ ಮಹಿಳೆ.
ಸಂಧ್ಯಾ ಅವರು ಪತಿ ಬಸವರಾಜು, ಮಕ್ಕಳಾದ ದೀಪಿಕಾ, ಲೋಹಿತ್, ಸೊಸೆ ಸುಧಾರಾಣಿ, ಮತ್ತು ಅಜ್ಜ, ಅಜ್ಜಿ ಜೊತೆ ಪಡಂಗಡಿ ಗ್ರಾಮದ
ಕನ್ನಡಿಕಟ್ಟೆಯ ಗುತ್ತಿಗೆಗುಡ್ಡೆ ಎಂಬಲ್ಲಿ ವಾಸವಾಗಿದ್ದರು.
ಬಳೆ ವ್ಯಾಪಾರಿಯಾಗಿರುವ ಸಂಧ್ಯಾ ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಗ್ಗೆ, 09.00 ಗಂಟೆಯಿಂದ 6ಗಂಟೆಯವರೆಗೆ ಲೈನ್ ಸೇಲ್ ಬಳೆ ವ್ಯಾಪಾರ ಮಾಡಿಕೊಂಡಿದ್ದು ಜಾತ್ರೆಗಳಲ್ಲಿ ಪತಿ ಬಸವರಾಜು ಸೇರಿ ಬಳೆ ವ್ಯಾಪಾರ ಮಾಡುತ್ತಿದ್ದರು.
ದೂರು ನೀಡಿದ ದಿನದಿಂದ ಸುಮಾರು 1 ವಾರದ ಹಿಂದೆ ಸಂಧ್ಯಾ ಅವರ ಅಣ್ಣ ನರಸಿಂಹ ಎಂಬುವವರು ಮನೆಗೆ ನೆಂಟರಾಗಿ ಬಂದಿದ್ದು ಅವರು ಲೈನ್ ಸೇಲ್ ಕತ್ತಿ ವ್ಯಾಪಾರದವರಾಗಿದ್ದರು. ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವುದರಿಂದ ಮಗಳು ದೀಪಿಕಾ ತವರು ಮನೆಗೆ ಜನವರಿ 19 -2026ರಂದು ಮದ್ಯಾಹ್ನ 03.00 ಗಂಟೆ ಹೊತ್ತಿಗೆ ಬಂದಿದ್ದು ತಾಯಿಯ ಬಗ್ಗೆ ವಿಚಾರಿಸಿದಾಗ ಬೆಳಗೆ,, 06.00 ಗಂಟೆಗೆ ಲೈನ್ ಸೇಲ್ ಬಳೆ ವ್ಯಾಪಾರಕ್ಕಾಗಿ ಮನೆಯಿಂದ ಹೋಗಿದ್ದು ಜೊತೆಗೆ ಸಹೋದರ ಕೂಡ ಕತ್ತಿ ಲೈನ್ ಸೇಲ್ ಗೆ ಹೋಗಿರುವುದಾಗಿ ಕುಟುಂಬದವರು ಹೇಳುತ್ತಾರೆ.
ಎಂದಿನಂತೆ ಸಂಜೆ 6.00 ಗಂಟೆಗೆ ಕೆಲಸ ಮುಗಿಸಿ ವಾಪಾಸು ಬರುತ್ತಿದ್ದ ಸಂಧ್ಯಾ ಅಂದು ಸಂಜೆ 6.20 ಗಂಟೆ ಆದರೂ ಬಾರದಿದ್ದಾಗ ಮಗಳು ಮೊಬೈಲ್ ಗೆ ಕರೆ ಮಾಡಿ “ಎಲ್ಲಿದ್ದೀರಿ ಎಂಬುದಾಗಿ ವಿಚಾರಿಸಿದಾಗ ” ನಾನು ಗುರುವಾಯನಕೆರೆ ಬಳಿ ಬರುತ್ತಿರುವುದಾಗಿ ನೀನು ಯಾವಾಗ ಮನೆಗೆ ಬಂದೆ ಎಂಬುದಾಗಿ ವಿಚಾರಿಸಿದ್ದು ಅದಕ್ಕೆ ನಾನು ” ಮಧ್ಯಾಹ್ನ ಬಂದೆ..” ಎಂದು ಹೇಳಿದಾಗ “ಸರಿ ಆಯ್ತು” ಎಂದು ಹೇಳಿ ಕಾಲ್ ಕಟ್ ಮಾಡಿದ್ದರು. ತಡವಾದರೂ ಬಾರದಿದ್ದಾಗ ಈಕೆಯ ಮಗಳು , ಸೊಸೆ ಸುಧಾರಾಣಿ ಅವರಲ್ಲಿ ಬಗ್ಗೆ
ವಿಚಾರಿಸಿದಾಗ “ನಾನು ಬೆಳಗ್ಗೆ, ವಿಕಾಸ ಬ್ಯಾಂಕ್ ಗೆ ಹೋಗಿ ಹಣ ಕಟ್ಟಿ ಆಮೇಲೆ ಹೋಗುತ್ತೇನೆ..” ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಬಳಿಕ ಅಂದು ರಾತ್ರಿ ಸುಮಾರು 8ಗಂಟೆಯಾದರೂ ಸಂಧ್ಯಾ ಅವರು ಮನೆಗೆ ಬಾರದಿದ್ದಾಗ ಮಗಳು ಮಾವನಲ್ಲಿ ದೂರವಾಣಿ ಮೂಲಕ ತಾಯಿಯ ಬಗ್ಗೆ ವಿಚಾರಿಸಿದಾಗ “ಸಂಧ್ಯಾ ನನ್ನ ಬಳಿ ವೇಣೂರು ಕಡೆ ಲೈನ್ ಸೇಲ್ ಗೆ ಹೋಗುತ್ತೇನೆ..”ಎಂದು ಹೇಳಿರುವುದಾಗಿ ತಿಳಿಸಿದ್ದರು.
ನಂತರ ಈ ವಿಚಾರವನ್ನು ಮಗಳಾದ ದೀಪಿಕಾ ಅಣ್ಣನಾದ ಲೋಹಿತ್ ಗೆ ತಿಳಿಸಿದ್ದು ಊರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಮಗಳಾದ ದೀಪಿಕಾ ಎಂಬವರು ತಮ್ನ ತಾಯಿಯ ಹುಡುಕಿ ಪತ್ತೆಹಚ್ಚಲು ಕೋರಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಕಾಣೆಯಾದ ಸಂಧ್ಯಾ ಅವರ ಚಹರೆ: ಎತ್ತರ: 6 ಅಡಿ ಉದ್ದ, ಗೋದಿ ಮೈಬಣ್ಣ, ಸಾದಾರಣ ಶರೀರ, ದುಂಡು ಮುಖ, ಹೊಟ್ಟೆಯ ಎಡ ಭಾಗದಲ್ಲಿ ಎಳ್ಳಿನಾಕಾರದ ಕಪ್ಪು ಮಚ್ಚೆ ಇರುತ್ತದೆ. ಭಾಷೆ: ತೆಲುಗು, ಮಲಯಾಳಂ, ಬ್ಯಾರಿ, ತುಳು, ಭಾಷೆ ಬಲ್ಲವರಾಗಿದ್ದು ಹೋಗುವ ದಿನ ನೀಲಿ ಬಣ್ಣದ ಸೀರೆ ಹಾಗೂ ನೇರಳೆ ಬಣ್ಣದ ರವಿಕೆ ಧರಿಸಿಕೊಂಡು ಹೋಗಿರುವ ಸಾದ್ಯತೆ ಇರುತ್ತದೆ ಎಂಬಿತ್ಯಾದಿಯಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ
ಬಳೆ ವ್ಯಾಪಾರಿಯಾಗಿದ್ದ ಸಂಧ್ಯಾ ಜನವರಿ 19ರಿಂದ ಮನೆಯಿಂದ ಕಾಣೆಯಾಗಿರುವ ಬಗ್ಗೆ ಜ: 20ರಂದು ಮೂಡಬಿದ್ರೆ ಶಿರ್ತಾಡಿ ಗ್ರಾಮದ ವಿದ್ಯಾನಗರದ ನಿವಾಸಿಯಾಗಿರುವ ಸಂಧ್ಯಾ ಅವರ ಮಗಳಾದ
ದೀಪಿಕಾ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು
ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯ ಮೊಬೈಲ್ ನಂಬರ್ ಗೆ ಕರೆ ಮಾಡಿದ್ರೆ ಸ್ವಿಚ್ಡ್ ಆಫ್ ಬರುತ್ತಿದ್ದು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.















Post Comment