ಜು.6ಕ್ಕೆ ಬೆಳ್ತಂಗಡಿ ತಾ. ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ-2024
ಬೆಳ್ತಂಗಡಿ : ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ 2024ನೇ ಸಾಲಿನ
ಪತ್ರಿಕಾ ದಿನಾಚರಣೆಯು ಜುಲೆ.6ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ಚೈತೇಶ್ ಇಳಂತಿಲ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಇಸ್ರೋ ಬೆಂಗಳೂರು ಇದರ ಹಿರಿಯ ವಿಜ್ಞಾನಿ ಪಿ.ವಾಸುದೇವ ರಾವ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾವ ಸಿಂಹ ನಾಯಕ್ , ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ
‘ಸುಧಾ’ ವಾರಪತ್ರಿಕೆಯ ಮುಖ್ಯ ಉಪ ಸಂಪಾದಕಿ ಉಮಾ ಅನಂತ್ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಎನ್.ಎಸ್.ಎಲ್ .ಸಿ ವರೀಕ್ಷೆಯಲಿ : ಪಡೆದ ಕಲ್ಮಂಜ ಸರ್ಕಾರಿ ಪ್ರೌಢ ಶಾಲೆಯ ತನುಶ್ರೀ ಕಾಯರ್ತಡ್ಕ ಸರ್ಕಾರಿ ಪ್ರೌಢ ಶಾಲೆಯ ಮೇಘನಾ ಹಾಗೂ ಮಚ್ಚಿನ ಸರ್ಕಾರಿ ಪ್ರೌಢ ಶಾಲೆಯ ಮಹಮ್ಮದ್ ಜಿಯಾದ್ ಇವರಿಗೆ ಗೌರವಾರ್ಪಣೆ, ಪತ್ರಕರ್ತ ಮನೋಹರ್ ಬಳಂಜ ದಂಪತಿಯಿಂದ 6 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ‘ದಿತಿ’
ಸಾಂತ್ವನ ನಿಧಿ ವಿತರಣೆ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
Post Comment