ಡೆಂಘೀ ಸೋಂಕಿತರ ಪರೀಕ್ಷೆಗೆ ಎಲ್ಲಾ ಆಸ್ಪತ್ರೆಗಳಿಗೂ ಒಂದೇ ದರ : ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಹೆಚ್ಚಿದ ಡೆಂಘೀ ಸೋಂಕಿತರ ಸಂಖ್ಯೆ ! ಮಹಾಮಾರಿ ಮಣಿಸಲು ಎಚ್ಚೆತ್ತ ರಾಜ್ಯ ಸರ್ಕಾರ
ಬೆಳ್ತಂಗಡಿ : ರಾಜ್ಯದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಹೆಚ್ಚಳ 1,700ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು ಮಹಾಮಾರಿ ಮಣಿಸಲು ಎಚ್ಚೆತ್ತ ರಾಜ್ಯ ಸರ್ಕಾರ ಡೆಂಘೀ ವಿರುದ್ಧ ಆರೋಗ್ಯ ಇಲಾಖೆಯ ಮೂಲಕ ಸಮರ ಆರಂಭಿಸಿದೆ. ಈ ಬಗ್ಗೆ ಡೆಂಘೀ ಸೋಂಕಿತರ ಪರೀಕ್ಷೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಒಂದೇ ದರ ನಿಗದಿಗೊಳಿಸಿದೆ. ಇಂದು ಸಂಜೆ ಅಥವಾ ನಾಳೆ ಸುತ್ತೋಲೆ ಹೊರಡಿಸುವುದಾಗಿ ಆರೋಗ್ಯ ಸಚಿವ ಗುಂಡೂರಾವ್ ಹೇಳಿದ್ದಾರೆ.
ಡೆಂಘೀ ತೊಲಗಿಸಲು ನೀರು ನಿಲ್ಲದಂತೆ ಚರಂಡಿ ನಿರ್ವಹಣೆ,ನಗರಗಳಲ್ಲಿ ಔಷಧಿ ಸಿಂಪಡಣೆ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟ ಇಲಾಖೆ ಮತ್ತು ಆಡಳಿತಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಸೊಳ್ಳೆ ನಿಯಂತ್ರಣದ ಮೂಲಕ ಡೆಂಘೀ ಒದ್ದೋಡಿಸಲು ಆರೋಗ್ಯ ಸಚಿವರು ಕರೆ ನೀಡಿದ್ದಾರೆ.
ರಾಜ್ಯ ರಾಜಧಾನಿಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೇಗದಲ್ಲಿ ಭಯಾನಕ ಡೆಂಘೀ ಜ್ವರ ಪ್ರಕರಣಗಳು ಸರಣಿಯಾಗಿ ಪತ್ತೆಯಾಗುತ್ತಿದ್ದು ಜನರು ಆತಂಕಗೊಳ್ಳುವಂತಾಗಿದೆ. ಸ್ಥಳೀಯ ಆಡಳಿತಗಳು ನಗರಗಳಲ್ಲಿ ಮಳೆಗಾಲ ಪೂರ್ವದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ನೀರು ನಿಂತ ಚರಂಡಿ, ಕೊಳಚೆ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳದಿರುವುದೇ ಡೆಂಘೀ ಸೋಂಕು ಜನರನ್ನು ಪೀಡಿಸಲು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ರತೀ ವರ್ಷ ಮಳೆಗಾಲ ಪ್ರಾರಂಭದಲ್ಲಿ ಡೆಂಘೀ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದು ಆರೋಗ್ಯ ಇಲಾಖೆ ನಗರ ಪ್ರದೇಶಗಳಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯೂ ಸೇರಿದಂತೆ ಗ್ರಾಮಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಪಾಲಿಕೆಗಳಂಥ ಸ್ಥಳೀಯ ಆಡಳಿತಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಡೆಂಘೀ ಮಾರಿ ಜನರ ನೆಮ್ಮದಿ ಕೆಡಿಸುವುದು ಖಂಡಿತಾ ಎಂಬ ಆತಂಕ ಜನರನ್ನು ಕಾಡುತ್ತಿದೆ.
Post Comment