“ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಬಹುಶ: ತಡವಾಯಿತು,”
ಬೆಳ್ತಂಗಡಿ : “ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಬಹುಶ: ತಡವಾಯಿತು, ಇದು ಮೊನ್ನೆಯೇ ಆಗಬೇಕಿತ್ತು” ಎಂದು ಹೇಳುವ ಮೂಲಕ ಐವನ್ ಡಿಸೋಜಾರಿಗಿಂತ ನಾನೇನು ಕಡಿಮೆ ಇಲ್ಲ ಎಂಬಂತೆ ಪ್ರಚೋದನಾಕಾರಿ ಹೇಳಿಕೆಯೊಂದನ್ನು ಗುರುವಾರ ನೀಡಿದ್ದಾರೆ.
ವಿಶ್ವಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ ನೇತೃತ್ವದಲ್ಲಿ
ಸೆಪ್ಟೆಂಬರ್ 1ಕ್ಕೆ
ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನದ ಪ್ರಯುಕ್ತ ಬೆಳ್ತಂಗಡಿಯಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾವೇಶ
ಮತ್ತು ಬೃಹತ್ ಶೋಭಾಯಾತ್ರೆ ಬಗ್ಗೆ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯ ಕೊನೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರ ‘ಬಾಂಗ್ಲಾ’ ಮಾದರಿ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ
ಐವನ್ ಡಿಸೋಜಾ ಅವರ ದೇಶ ದ್ರೋಹಿ ಹೇಳಿಕೆ ಬಗ್ಗೆ ಪೊಲೀಸರು ಸುಮೋಟೋ ಕೇಸು ದಾಖಲಿಸಿಕೊಳ್ಳಬೇಕಿತ್ತು
ದೂರು ಕೊಟ್ಟರೂ ಪ್ರಕರಣ ದಾಖಲಿಸಿಲ್ಲ ಅವರಿಗೊಂದು ಕಾನೂನು ಬೇರೆಯವರಿಗೊಂದು ಕಾನೂನು ಎಂದು ಟೀಕಿಸಿದರು.
ಇದೇ ಸಂದರ್ಭ
“ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟದ ಬಗ್ಗೆ ಹಿಂದೂ ಸಂಘಟನೆಗಳ ಮೇಲೆ ಆರೋಪವಿದೆ ಇದರ ಬಗ್ಗೆ ಏನು ಹೇಳುತ್ತಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ
“ಐವನ್ ಮನೆಗೆ ಕಲ್ಲೆಸೆದದ್ದು ಬಹುಶ: ತಡವಾಯಿತು, ಇದು ಮೊನ್ನೆಯೇ ಆಗಬೇಕಿತ್ತು, ಐವನ್ ಡಿಸೋಜಾ ವಿರುದ್ಧ ಪೊಲೀಸರು ಕೇಸು ದಾಖಲಿಸುತ್ತಿದ್ದರೆ ಇಂಥ ಘಟನೆ
ಆಗ್ತಿರಲಿಲ್ಲ, ಯಾರೋ ಮಾಡಿದ್ದಾರೆ, ಇದು ಯಾಕೆ ಆಯಿತು ?
ಅವರೇ ಕಾರಣ ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ಇದೀಗ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶರಣ್ ಪಂಪ್ವೆಲ್
ವಿಶ್ವಹಿಂದೂ ಪರಿಷದ್, ಬೆಳ್ತಂಗಡಿ ಪ್ರಖಂಡದ ನೇತೃತ್ವದಲ್ಲಿ
ಸೆಪ್ಟೆಂಬರ್ 1ಕ್ಕೆ
ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ
ಷಷ್ಠಿಪೂರ್ತಿ ಸಮಾರೋಪ ಸಂಭ್ರಮ, ಬೃಹತ್ ಹಿಂದೂ ಸಮಾವೇಶ
ಮತ್ತು ಬೃಹತ್ ಶೋಭಾಯಾತ್ರೆ
ನಡೆಯಲಿದೆ ಎಂದರು.
ದೇಶದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಪ್ರಖಂಡಗಳಲ್ಲಿ
ಕರ್ನಾಟಕದ ದಕ್ಷಿಣ ಪ್ರಾಂತದಲ್ಲಿ ಸುಮಾರು
250 ಪ್ರಖಂಡಗಳಲ್ಲಿ
ಪ್ರಖಂಡ ಸಮ್ಮೇಳನ ಮಾಡಬೇಕೆಂದು ವಿಶ್ವಹಿಂದೂ ಪರಿಷದ್ ಯೋಚನೆ ಮಾಡಿದ್ದು
ಬೆಳ್ತಂಗಡಿ ಪ್ರಖಂಡದಲ್ಲಿ 1ನೇ ತಾರೀಖಿನಂದು ಬೃಹತ್ ಹಿಂದೂ ಸಮಾವೇಶ, ಬೃಹತ್ ಶೋಭಾ ಯಾತ್ರೆ ಜರಗಲಿದೆ ಎಂದು ತಿಳಿಸಿದರು.
ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ,ದೌರ್ಜನ್ಯ ನಡೆಯುತ್ತಾ ಇದೆ.
ಸಮ್ಮೇಳನದ ಮುಖಾಂತರ
ಇಡೀ ನಮ್ಮ ದೇಶದಲ್ಲಿ ಸಮಾಜದಲ್ಲಿ ಪರಿವರ್ತನೆ ತರುವಂತಹ ಕಾರ್ಯವನ್ನು ಯೋಚನೆ ಮಾಡಿದ್ದೇವೆ.
ಸಾಮರಸ್ಯದ ದೃಷ್ಠಿಯಿಂದ
ಸಾಕಷ್ಟು ಗ್ರಾಮಗಳಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷಗಳು, ಮೇಲು ಕೀಳುಗಳು ವಿಪರೀತವಾಗಿ ನಡೆಯುತ್ತಾ ಇದೆ. ಯಾವುದೋ ಒಂದು ದೇವಸ್ಥಾನದ ಒಳಗಡೆ ಪ್ರವೇಶವಿಲ್ಲ , ಜಾತಿಯ ಹೆಸರಲ್ಲಿ ಬಾವಿಯಿಂದ ನೀರು ತೆಗೆಯಲು ಬಿಡವುದಿಲ್ಲ, ತಮ್ಮವರು
ಸತ್ತಾಗ ಜಾತಿ ಹೆಸರಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲು ಬಿಡುವುದಿಲ್ಲ , ಈ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಾ ಇದೆ.
ಮುಂದಿನ ದಿನಗಳಲ್ಲಿ
ಇದೆಲ್ಲ ಆಗಬಾರದು
ನಾವೆಲ್ಲರೂ ಒಂದೇ ನಾವೆಲ್ಲರೂ ಹಿಂದೂಗಳು ಎಂಬ ಭಾವನೆ ಮೂಡಿಸಬೇಕೆಂಬ ದೃಷ್ಠಿಯಲ್ಲಿ
ಈ ಕಾರ್ಯಕ್ರಮದಲ್ಲಿ
ಒಟ್ಟು ಸಮಾನತೆಯನ್ನು ತರಬೇಕೆಂಬ ದೃಷ್ಟಿಯಿಂದ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದ ಶರಣ್ ಪಂಪ್ವೆಲ್ , ಪರಿಸರ ಸಂರಕ್ಷಣೆ ಆಗಬೇಕಾಗಿದೆ,
ಮರಗಳನ್ನು ಕಡಿಯುವ ಸಂಖ್ಯೆ ಜಾಸ್ತಿಯಾಗುತ್ತಿದೆ,
ಪ್ಲಾಸ್ಟಿಕ್ ಮುಕ್ತ, ಆರೋಗ್ಯದ ದೃಷ್ಟಿಯಿಂದ ಡ್ರಗ್ಸ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ದೃಷ್ಟಿಯಿಂದ ಸಮ್ಮೇಳನದ ಮುಖಾಂತರ ಅಭಿಯಾನವನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕೊಂಡೊಯ್ಯುತ್ತಿದ್ದೇವೆ ಎಂದು ವಿವರಿಸಿದರು.
Post Comment