ಬಾಗಿಲ ಚೌಕಟ್ಟು ಬಿದ್ದು 6 ವರ್ಷದ ಬಾಲಕಿ ಸಾವು

ಬಾಗಿಲ ಚೌಕಟ್ಟು ಬಿದ್ದು 6 ವರ್ಷದ ಬಾಲಕಿ ಸಾವು

Share

ಬೆಳ್ತಂಗಡಿ : ಮನೆಯಲ್ಲಿ ತಂದಿಟ್ಟಿದ್ದ ಮರದ ಹೊಸ್ತಿಲಿನ ಚೌಕಟ್ಟು ಬಿದ್ದು ಗಂಭೀರ ಗಾಯಗೊಂಡ 6 ವರ್ಷದ ಬಾಲಕಿ ಮೃತಪಟ್ಟ ಘಟನೆ
ಪುತ್ತಿಲ‌ ಗ್ರಾಮ ಕುಂಡಡ್ಕ ಎಂಬಲ್ಲಿ ಬುಧವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕುಂಡಡ್ಕ ಕೊನಲೆ ಹಾರಿಸ್ ಮುಸ್ಲಿಯಾರ್ ಎಂಬವರ ಮೂರನೇ ಪುತ್ರಿ ಅಲ್ಫೀಯಾ (6) ಅವಘಡದಲ್ಲಿ ಮೃತಪಟ್ಟ ಬಾಲಕಿ.
ಅಲ್ಫೀಯಾ ಸರಕಾರಿ ಕಿರಿಯ ಪ್ರಾರ್ಥಮಿಕ‌ ಶಾಲೆ ಕೇರ್ಯ ಹಾಗೂ ಸಂಶುಲ್ ಹುದಾ ಜುಮಾ ಅರಬಿಕ್ ಮದ್ರಸಾದಲ್ಲಿ 1 ನೇ ತರಗತಿ‌ ವಿದ್ಯಾರ್ಥಿ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG-20241003-WA0000-696x1024 ಬಾಗಿಲ ಚೌಕಟ್ಟು ಬಿದ್ದು             6 ವರ್ಷದ ಬಾಲಕಿ ಸಾವು

Post Comment

ಟ್ರೆಂಡಿಂಗ್‌

error: Content is protected !!