ಪುದುವೆಟ್ಟು : ಮರದಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು
ಬೆಳ್ತಂಗಡಿ : ಮರದ ಗೆಲ್ಲು ಕಡಿಯುವ ಕೆಲಸ ಮಾಡುತ್ತಿದ್ದ ವೇಳೆ ಮರದಿಂದ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಪುದುವೆಟ್ಟು ಗ್ರಾಮದ
ಮಿಯಾರು ಮೇರ್ಲ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ನಡೆದಿದೆ.
ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕಾರೆಗುಡ್ಡೆ ನಿವಾಸಿ ಚಲ್ಲ ಮುಗೇರ ಎಃಬವರ
ಪುತ್ರ,, ವಿಮಲ ಎಂಬವರ ಪತಿ ಪ್ರವೀಣ (35) ಎಂಬವರು ಮೃತಪಟ್ಟವರು.
ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದ ಮೇಲೆ ಇರುವಾಗಲೇ ಹೃದಯಾಘಾತಗೊಂಡು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment