ಮಲವಂತಿಗೆ ಅಕ್ರಮ ಗೋಸಾಗಾಟದಲ್ಲಿ ಎಂಥಾ ‘ಕೋಮುಸೌಹಾರ್ದತೆ’.!

ಮಲವಂತಿಗೆ ಅಕ್ರಮ ಗೋಸಾಗಾಟದಲ್ಲಿ ಎಂಥಾ ‘ಕೋಮುಸೌಹಾರ್ದತೆ’.!

Share
IMG-20241004-WA0007-769x1024 ಮಲವಂತಿಗೆ                  ಅಕ್ರಮ ಗೋಸಾಗಾಟದಲ್ಲಿ ಎಂಥಾ 'ಕೋಮುಸೌಹಾರ್ದತೆ'.!

ಬೆಳ್ತಂಗಡಿ : ಅಕ್ರಮ ಗೋಸಾಗಾಟದಲ್ಲಿ ಬಿಜೆಪಿ ಕಾರ್ಯಕರ್ತರನ್ನೊಳಗೊಂಡು ಹಿಂದೂ-ಮುಸ್ಲೀಮ್ ಗೋಕಳ್ಳರು ಸೌಹಾರ್ದತೆ ಮೆರೆದ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದಲ್ಲಿ ನಾಲ್ವರು ಹಿಂದೂ ಮತ್ತು ಮುಸ್ಲೀಮ್ ಯುವಕರಿಂದ ನಡೆಯುತ್ತಿದ್ದ ಅಕ್ರಮ ಗೋಸಾಗಾಟವನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ (36) ಹಾಗೂ ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿ ಎರಡು ಪಿಕಪ್ ವಾಹನಗಳು ಹಾಗೂ ಅಕ್ರಮ ಸಾಗಾಟಕ್ಕೆ ಸಿಲುಕಿದ್ದ ಐದು ದನಗಳನ್ನು ಪೊಲೀಸರು ವಶಪಡಿಸಿಕೊಂಡು ರಕ್ಷಿಸಿದ್ದಾರೆ. ಮಲವಂತಿಗೆ ಗ್ರಾಮದ ಎಳನೀರು ಸಮೀಪದ ದಿಡುಪೆ ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಗೋವುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

Post Comment

ಟ್ರೆಂಡಿಂಗ್‌