ಹರಿದ ರೀತಿ ಡಿಸೈನ್ ಪ್ಯಾಂಟ್ ಧರಿಸಿ ಬಂದ ಯುವಕನ ಮೇಲೆ ವಿಕೃತಿ ಮೆರೆದ ‘ಚಾಲಿಪೋಲಿ’ಗಳು : ಮನ ನೊಂದ ಯುವಕ ಆತ್ಮಹತ್ಯೆ ಯತ್ನ!

ಹರಿದ ರೀತಿ ಡಿಸೈನ್ ಪ್ಯಾಂಟ್ ಧರಿಸಿ ಬಂದ ಯುವಕನ ಮೇಲೆ ವಿಕೃತಿ ಮೆರೆದ ‘ಚಾಲಿಪೋಲಿ’ಗಳು : ಮನ ನೊಂದ ಯುವಕ ಆತ್ಮಹತ್ಯೆ ಯತ್ನ!

Share
IMG-20241122-WA0000-714x1024 ಹರಿದ ರೀತಿ ಡಿಸೈನ್ ಪ್ಯಾಂಟ್ ಧರಿಸಿ ಬಂದ ಯುವಕನ ಮೇಲೆ ವಿಕೃತಿ ಮೆರೆದ 'ಚಾಲಿಪೋಲಿ'ಗಳು :           ಮನ ನೊಂದ ಯುವಕ ಆತ್ಮಹತ್ಯೆ ಯತ್ನ!

ಬೆಳ್ತಂಗಡಿ : ಯುವಕನೊಬ್ಬ ಹರಿದ ರೀತಿಯ ವಿಶೇಷ ಡಿಸೈನ್ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದ ವೇಳೆ ಗುರುವಾರ ಸಂಜೆ ಮೂರು ಜನರ ಗುಂಪು ಆತನನ್ನು ತಡೆದು ನಿಲ್ಲಿಸಿ ಯುವಕನ ಎರಡೂ ಕೈಗಳನ್ನು ಹಿಡಿದುಕೊಂಡು ಪ್ಯಾಂಟ್ ಗೆ ಗೋಣಿ ಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪರಿಣಾಮ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಎಂಬ ಯುವಕನೇ ಹರಿದಂತೆ ಕಾಣುವ ಲೇಟೆಸ್ಟ್ ಡಿಸೈನ್ ನ ಪ್ಯಾಂಟ್ ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದು ಈ ಸಂದರ್ಭ ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ಗುಂಪೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಬಳಿಕ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು. ಕೃತ್ಯದಿಂದ ಅವಮಾನಗೊಂಡು ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವಕನಿಗೆ ಅವಮಾನಿಸಿ ವಿಕೃತಿ ಮೆರೆದ ಪುಂಡ ಯುವಕರನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್ (ಜೈಭಾರತ್) , ಅನೀಶ್ ಪಣಕಜೆ, ಲಾಯಿಲಾ ಗ್ರಾಮದ ಆದರ್ಶ ನಗರ ನಿವಾಸಿ ಬಾಬ್ ಜಾನ್ ಸಾಹೇಬ್ ಎಂಬವರೆಂದು ಗುರುತಿಸಲಾಗಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಯುವಕ ಶಾಹಿಲ್ ನ.21 ರಂದು (ಇಂದು) ಸಂಜೆ ಮನೆಯಲ್ಲಿ ಯಾವುದೊ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಮನೆಯವರು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು ಈ ಘಟನೆ ಬಗ್ಗೆ ಸಾರ್ವಜನಿಕರು ಮೂವರು ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ.

Previous post

ನಕ್ಸಲ್ ನಾಯಕ ವಿಕ್ರಮ ಗೌಡ ಸಂಶಯಾಸ್ಪದ ಎನ್ ಕೌಂಟರ್ ನ್ಯಾಯಾಂಗ ತನಿಖೆ ನಡೆಯಲಿ : ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಒತ್ತಾಯ

Next post

ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ

Post Comment

ಟ್ರೆಂಡಿಂಗ್‌

error: Content is protected !!