ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ

ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ

Share
IMG-20241123-WA0000-1024x576 ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ
IMG-20241123-WA0001-1024x569 ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ

ಕಡಬ : ಕೌಕ್ರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿ ವಾಸವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ವಾಸದ ಮನೆಯನ್ನು ಕಡಬ ತಹಸೀಲ್ದಾ‌ರ್ ನೇತೃತ್ವದಲ್ಲಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ಇಡೀ ಜಿಲ್ಲೆಯ ಗಮನ ಸೆಳೆದಿದೆ.
ವಾಸದ ಮನೆಯನ್ನೇ ಸರಕಾರಿ ದೌರ್ಜನ್ಯದಿಂದ ಧ್ವಂಸಗೊಳಿಸಿದ
ಪರಿಣಾಮ ವೃದ್ಧ ದಂಪತಿ ಬೀದಿಗೆ ಬಿದ್ದಿದೆ.
ತಹಶೀಲ್ದಾರ್ ಮನೆ ಧ್ವಂಸ ಮಾಡಿದ ಜಾಗದಲ್ಲೇ ಕುಳಿತು ಸಂತ್ರಸ್ತ ಕುಟುಂಬ ಮೊನ್ನೆಯಿಂದಲೂ ರಾತ್ರಿಹಗಲೂ ಪ್ರತಿಭಟನೆಯಲ್ಲಿ ತೊಡಗಿದ್ದು ಕಂದಾಯ ಇಲಾಖಾಧಿಕಾರಿಗಳ ನಿದ್ದೆಗೆಡಿಸಿದೆ.
ಸೆರಗಿಗೆ ಕೈಹಾಕಿ ಮುಖಭಂಗಕ್ಕೊಳಗಾದ ಕಚ್ಚೆ ಹರುಕ ‘ಹೇಸಿ’ (ಗೆ) ‘ಕ್ರೂರಿಯನ್’ ಹತಾಶ ಸೇಡಿಗೆ ನತದೃಷ್ಟ ಕುಟುಂಬವೊಂದು ಬೀದಿಗೆ ಬಿದ್ದಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಏಕೆಂದರೆ; ಬಡ ವೃದ್ಧ ದಂಪತಿಯ ಮನೆ ಧ್ವಂಸ ಪ್ರಕರಣದ ಹಿಂದೆ ಮೇಲ್ನೋಟಕ್ಕೆ ಭೂವಿವಾದವಿರುವಂತೆ ಕಂಡರೂ ಅಸಲಿಗೆ
ದುಷ್ಯಾಸನ ವಂಶಸ್ಥನಂತಿರುವ ಉದ್ಯಮಿ, ಪ್ರಭಾವಿ ರಾಜಕೀಯ ಪುಡಾರಿಯ ‘ಮೈಚಟ’ದಾಟಕ್ಕೆ ಮನೆಗೆಲಸದ ಮಹಿಳೆ ಒಪ್ಪದೆ ಮನೆಗೆಲಸ ಬಿಟ್ಟು ಬಂದಿದ್ದೇ ಈ ದ್ವೇಷಕ್ಕೆ ಕಾರಣವಾಗಿದೆ ಎಂಬುದೀಗ ಬಯಲಾದ ವಿಚಾರ.
ಮನೆ ಧ್ವಂಸ ಪ್ರಕರಣದ ಮೂಲಕ ಈ ಉದ್ಯಮಿಯ ಹಳೆ ಚಾಳಿ ಮತ್ತೊಮ್ಮೆ ಬಯಲಾಗಿದ್ದು ಮನೆ ಧ್ವಂಸಗೈದ ಬೆನ್ನಲ್ಲೇ ಉದ್ಯಮಿ ಎ.ಸಿ.ಕುರಿಯನ್ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸು ದಾಖಲಾಗಿದ್ದೇ ಇದಕ್ಕೆ ಸಾಕ್ಷಿ. ಇನ್ನೊಂದೆಡೆ
“ಎರಡು ಮನೆಗಳನ್ನು ತೆಗೆಯದೆ ಬಿಟ್ಟಿದ್ದೇವಲ್ಲ, ಅದು ತಪ್ಪಾಯಿತು,
ಅದನ್ನು ತೆಗೆಸುತ್ತೇವೆ ” ಎಂದು ಎ.ಸಿ.ಕುರಿಯನ್ ಆಪ್ತ
ರಾಯ್ ಅಬ್ರಹಾಂ ಎಂಬಾತ ಸಾರ್ವಜನಿಕವಾಗಿ ಗೂಂಡಾ ದನಿಯಲ್ಲಿ ಬೆದರಿಕೆ ಹಾಕಿದ್ದು ಇಡೀ ಮನೆ ಧ್ವಂಸ ದೌರ್ಜನ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿಕೊಟ್ಟಂತಾಗಿದೆ.

ಕಡಬ ತಾಲೂಕು ಕೌಕ್ರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿ ವಾಸವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ವಾಸದ ಮನೆಯನ್ನು ಕಡಬ ತಹಸೀಲ್ದಾ‌ರ್ ನೇತೃತ್ವದಲ್ಲಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಪ್ರಕರಣ ಖಂಡಿಸಿ ಕಡಬ ತಹಶೀಲ್ದಾರ್ ಅಮಾನತಿಗೆ ಒತ್ತಾಯಿಸಿ
ಇಲ್ಲಿನ ತಾಲೂಕು ಕಚೇರಿ ರಸ್ತೆಯಲ್ಲಿ ನೀತಿ ಸಂಘಟನೆಯ ರಾಜ್ಯಾಧ್ಯಕ್ಷ ಜಯಂತ್ ಟಿ. ನೇತೃತ್ವದಲ್ಲಿ ನ:20ರಂದು ಪ್ರತಿಭಟನೆ ನಡೆದಿತ್ತು.
ಜಯಂತ್ ಟಿ. ಅವರ ನೇತೃತ್ವದ ಪ್ರತಿಭಟನೆಯಲ್ಲಿ ವೃದ್ಧ ದಂಪತಿ ಹಾಗೂ ಅವರ ಸಹವರ್ತಿಗಳು ಭಾಗಿಯಾಗಿದ್ದರು.
ಮನೆ ಕಳೆದುಕೊಂಡ ಸಂತ್ರಸ್ತ ವೃದ್ಧ ದಂಪತಿ ನುಜ್ಜುಗುಜ್ಜುಗೊಂಡ ಪಾತ್ರೆ , ಸೊತ್ತುಗಳು ಹಾಗೂ ಇತರ ಸಾಮಾಗ್ರಿಗಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ಜಯಂತ್ ಟಿ.
“ಕೌಕ್ರಾಡಿ ಗ್ರಾಮದ ಸ.ನಂ.123ರಲ್ಲಿ 29 ಸೆಂಟ್ಸ್ ಸ್ವಾಧೀನದಲ್ಲಿರುವ ರಾಧಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಅವರು ವಾಸವಿರುವ ಸುಮಾರು ಹತ್ತು ವರ್ಷ ಹಳೆಯದಾದ ಮನೆಯನ್ನು ವಿನಾಕಾರಣ ಕಾನೂನು ಬಾಹಿರವಾಗಿ, ಅಕ್ರಮವಾಗಿ ಯಾವುದೇ ಮುಂಗಡ ನೋಟೀಸ್ ನೀಡದೆ, ಯಾವುದೇ ಆದೇಶವೂ ಇಲ್ಲದೆ ಕಡಬ ತಹಸೀಲ್ದಾರ್ ಇಲಾಖಾಧಿಕಾರಿಗಳ ಜೊತೆ ಬಂದು ಪೊಲೀಸ್ ಸಹಕಾರದಲ್ಲಿ ಧ್ವಂಸಗೊಳಿಸಿದ್ದಾರೆ.
ಘಟನೆಯ ಸಂದರ್ಭ ದೌರ್ಜನ್ಯವನ್ನು ಆಕ್ಷೇಪಿಸಿದ್ದಕ್ಕೆ ರೇಣುಕಾ ಎಂಬವರ ಹೆಸರಲ್ಲಿ ಮನೆ ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ, ಆದ್ದರಿಂದ ಈ ಮನೆಯನ್ನು ತೆರವುಗೊಳಿಸುತ್ತಿದ್ದೇವೆ ಎಂಬ ನೆಪ ಹೇಳಿ ಜಾರಿಕೊಂಡಿದ್ದರು. ಈ ಮನೆ ರೇಣುಕಾ ಅವರಿಗೆ ಸೇರಿದ್ದೆನ್ನುವುದಕ್ಕೆ ದಾಖಲೆ ಕೇಳಿದ್ದರೂ ಯಾವುದೇ ದಾಖಲೆ ನೀಡದೆ
ಅಮಾನುಷವಾಗಿ ಮನೆ ಧ್ವಂಸಗೊಳಿಸಿದ ಪರಿಣಾಮ ಬಡ ವೃದ್ದ ದಂಪತಿ ಬೀದಿಪಾಲಾಗಿದ್ದಾರೆ.
ಈ ದೌರ್ಜನ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ
ರಾಧಮ್ಮ ಅವರಿಗೆ ರೂ.25 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ,
ಮನೆ ನಿರ್ಮಿಸಿಕೊಡುವ ತನಕ ಅವರಿಗೆ ವಾಸಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು, ವಿನಾಕಾರಣ ಮನೆ ಧ್ವಂಸ ಮಾಡಿರುವ ತಹಸೀಲ್ದಾರ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕು, ರಾಧಮ್ಮ ಅವರ ಅಕ್ರಮ ಸಕ್ರಮ ಅರ್ಜಿಯನ್ನು ವಿಲೇವಾರಿ ಮಾಡಿ ಕೂಡಲೇ ಹಕ್ಕು ಪತ್ರ ನೀಡಬೇಕು….” ಎಂದು ಆಗ್ರಹಿಸಿದ್ದಾರೆ.
ಸಿ.ಪಿ.ಎಂ. ಮುಖಂಡ ಬಿ.ಎಂ.ಭಟ್ ಕ್ರಿಮಿನಲ್‌ ಆರೋಪಿ ಕಡಬ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿ.ಪಿ.ಎಂ. ಮುಖಂಡ ಬಿ.ಎಂ. ಭಟ್ ಒತ್ತಾಯಿಸಿದ್ದರು.
ಜನ ಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳ ಪಡೆದು ಜನಸಾಮಾನ್ಯರ ವಿರುದ್ದವೇ ದೌರ್ಜನ್ಯ ಮಾಡುತ್ತಿದ್ದಿರಲ್ವ ನಿಮಗೆ ನಾಚಿಕೆ ಆಗಲ್ವ,
ರಾಧಾ ಅವರ ಮನೆಯನ್ನು ಧ್ವಂಸ ಮಾಡಿ ನಾವು ರೇಣುಕಾ ಅವರ ಮನೆಯನ್ನು ಧ್ವಂಸ ಮಾಡಿದ್ದೇವೆ ಎಂದು ಸುಳ್ಳು ವರದಿ ಕೊಡುತ್ತಿರುವ ಕಡಬ ತಹಸೀಲ್ದಾರ್ ವಿರುದ್ಧ ನಾವು ಪ್ರತಿಭಟನೆ ಮಾಡಿಯೇ ಮಾಡುತ್ತೇವೆ, ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಇಲ್ಲದಿದ್ದರೆ ಅವರ ಸ್ವಂತ ಖರ್ಚಿನಲ್ಲಿ ವೃದ್ದ ದಂಪತಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ್ದರು.
ಪ್ರತಿಭಟನೆಯಲ್ಲಿ ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಯುವ ಘಟಕದ ಗ್ರಾಮೀಣ ಅಧ್ಯಕ್ಷ ಎಸ್.ಕೆ.ಹಕೀಂ, ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್, ದಲಿತ ಹಕ್ಕುಗಳ ಸಮಿತಿಗಳ ಅಧ್ಯಕ್ಷೆ ಈಶ್ವರಿಶಂಕರ್, ದಲಿತ ಮುಖಂಡ ಬಾಬು, ಹಿರಿಯ ದಲಿತ ಮುಖಂಡ ಪೊಡಿಯ ಎನ್ ಮುಂತಾದವರು ಭಾಗಿಯಾಗಿ ಧ್ವನಿಗೂಡಿಸಿದ್ದರು.
ಇನ್ನೊಂದೆಡೆ ಬಿ.ಎಂ.ಭಟ್ ಸೇರಿದಂತೆ ಹಲವರ ನಿಯೋಗ ಸುಬ್ರಹ್ಮಣ್ಯಕ್ಕೆ ಆಗಮಿಸಿ ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ವೇಳೆ ಎ.ಸಿ.ಯವರು ಒಂದು ವಾರದೊಳಗೆ ಮನೆ ಧ್ವಂಸ ಪ್ರಕರಣವನ್ನು ತನಿಖೆ ನಡೆಸುತ್ತೇನೆ, ನಮ್ಮ ಕಡೆಯಿಂದ ತಪ್ಪು ಆಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ, ಅಲ್ಲದೆ 94ಸಿಯಡಿಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಕಡಬದಲ್ಲಿ ಜಯಂತ್ ಟಿ. ಅವರು ಮಾಧ್ಯಮದವರಿಗೆ ತಿಳಿಸಿದ್ದು ಒಂದು ವೇಳೆ ಎ.ಸಿ. ಯವರು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಪ್ರತಿಭಟನೆ ಎಸಿ ಕಛೇರಿಯ ಮುಂದೆ ಎಂದು ಜಯಂತ್ ಎಚ್ಚರಿಕೆ ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.
ಇದೀಗ ನೊಂದ ಕುಟುಂಬ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಕೊಟ್ಟ ಭರವಸೆಯನ್ನು ನಂಬಿ ನ್ಯಾಯಕ್ಕಾಗಿ ಕಾದು ಕುಳಿತಿದ್ದು ಇನ್ನೊಂದೆಡೆ ನಿರೀಕ್ಷೆಯಂತೆ ನ್ಯಾಯ ದೊರೆಯದೆ ಇದ್ದಲ್ಲಿ ಹೋರಾಟ ತೀವ್ರಗೊಳಿಸುವ ಚಿಂತನೆಯೂ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳು ಕಂದಾಯ ಇಲಾಖಾಧಿಕಾರಿಗಳ ಗಮನದಲ್ಲಿದ್ದು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿ ಈ ವಿವಾದವನ್ನು ಯಾವ ರೀತಿ ಸುಖಾಂತ್ಯಗೊಳಿಸುತ್ತಾರೆ ಎಂಬ ಕುತೂಹಲ ಹೋರಾಟಗಾರರಲ್ಲಿ ಮತ್ತು ಗ್ರಾಮಸ್ಥರಲ್ಲಿ ಇದೀಗ ಮೂಡಿದೆ.

IMG-20241123-WA0002-1024x576 ಕೌಕ್ರಾಡಿ ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ : ಎ.ಸಿ.ಆದೇಶಕ್ಕೆ ಕಾಯುತ್ತಿರುವ ಸಂತ್ರಸ್ತ ದಂಪತಿ
Previous post

ಹರಿದ ರೀತಿ ಡಿಸೈನ್ ಪ್ಯಾಂಟ್ ಧರಿಸಿ ಬಂದ ಯುವಕನ ಮೇಲೆ ವಿಕೃತಿ ಮೆರೆದ ‘ಚಾಲಿಪೋಲಿ’ಗಳು : ಮನ ನೊಂದ ಯುವಕ ಆತ್ಮಹತ್ಯೆ ಯತ್ನ!

Next post

ಕುವೆಟ್ಟು ಗ್ರಾ.ಪಂ. ‌ ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ : ಪಿಲಿಚಂಡಿಕಲ್ಲು-ಪೊಟ್ಟುಕೆರೆ ಹದಗೆಟ್ಟ ರಸ್ತೆ ಬಗ್ಗೆ ಮತದಾರರ ಆಕ್ರೋಶ

Post Comment

ಟ್ರೆಂಡಿಂಗ್‌