ನದಿಗೆ ಸ್ನಾನಕ್ಕೆ ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ನದಿಗೆ ಸ್ನಾನಕ್ಕೆ ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

Share
IMG-20241127-WA0003-768x1024 ನದಿಗೆ ಸ್ನಾನಕ್ಕೆ ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು
IMG-20241127-WA0004-576x1024 ನದಿಗೆ ಸ್ನಾನಕ್ಕೆ ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಬೆಳ್ತಂಗಡಿ :  ಹಬ್ಬಕ್ಕೆಂದು ಬಂದಿದ್ದ  ಯುವಕರು ಊಟದ ಬಳಿಕ ನದಿಗೆ ಸ್ನಾನಕ್ಕೆಂದು  ಹೋದ ವೇಳೆ   ನೀರು ಪಾಲಾದ ದುರ್ಘಟನೆ ವೇಣೂರು ಸಮೀಪದ ನಡ್ತಿಕಲ್ಲು ಎಂಬಲ್ಲಿ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ವೇಣೂರು ಚರ್ಚ್ ನ ವಾರ್ಷಿಕ ಹಬ್ಬಕ್ಕೆಂದು   ಕುಪ್ಪಪೆದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಸವನಗುಡಿ ನಿವಾಸಿ ಸೂರಜ್ ಸಿ.ಎಸ್. (19) , ಬಂಟ್ವಾಳ ಗ್ರಾಮದ ವಗ್ಗ ನಿವಾಸಿ ಜೈಸನ್(19) ಎಂಬವರು ಬಂದಿದ್ದರು.
ಬುಧವಾರ ನ.27ರಂದು ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು  ಬರ್ಕಜೆ ಡ್ಯಾಂ ಬಳಿಯ ಎರುಗುಂಡಿ ಬಳಿ  ಸ್ನಾನ ಮಾಡಲು ನದಿಗೆ ಇಳಿದಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳೆಂದು ಎಂದು ತಿಳಿದು ಬಂದಿದೆ.

Previous post

ಕುವೆಟ್ಟು ಗ್ರಾ.ಪಂ. ‌ ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ : ಪಿಲಿಚಂಡಿಕಲ್ಲು-ಪೊಟ್ಟುಕೆರೆ ಹದಗೆಟ್ಟ ರಸ್ತೆ ಬಗ್ಗೆ ಮತದಾರರ ಆಕ್ರೋಶ

Next post

ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ; ಸಾಮಾಜಿಕ ನ್ಯಾಯಕ್ಕಾಗಿ ಎಸಿ, ತಹಶೀಲ್ದಾರ್ ಗೆ ನೊಂದವರ ದೂರು

Post Comment

ಟ್ರೆಂಡಿಂಗ್‌