ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ; ಸಾಮಾಜಿಕ ನ್ಯಾಯಕ್ಕಾಗಿ ಎಸಿ, ತಹಶೀಲ್ದಾರ್ ಗೆ ನೊಂದವರ ದೂರು

ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ; ಸಾಮಾಜಿಕ ನ್ಯಾಯಕ್ಕಾಗಿ ಎಸಿ, ತಹಶೀಲ್ದಾರ್ ಗೆ ನೊಂದವರ ದೂರು

Share
IMG-20241128-WA0001-1024x461 ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ;              ಸಾಮಾಜಿಕ ನ್ಯಾಯಕ್ಕಾಗಿ      ಎಸಿ, ತಹಶೀಲ್ದಾರ್ ಗೆ ನೊಂದವರ ದೂರು
IMG-20241128-WA0000-1024x461 ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ;              ಸಾಮಾಜಿಕ ನ್ಯಾಯಕ್ಕಾಗಿ      ಎಸಿ, ತಹಶೀಲ್ದಾರ್ ಗೆ ನೊಂದವರ ದೂರು

ಬೆಳ್ತಂಗಡಿ : ಅನೇಕ ವರ್ಷಗಳಿಂದ ಇದ್ದ ಖಾಯಂ ಕಾಲು ದಾರಿಯೊಂದನ್ನು ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ನೀಡದೆ ಪರ್ಯಾಯ ದಾರಿ ಕಲ್ಪಿಸದೆ ತಂತಿ ಬೇಲಿ ಹಾಕಿ ಬಂದ್ ಮಾಡಿರುವ ಘಟನೆಯೊಂದು ಕಳಿಯ ಗ್ರಾಮಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ನಾಳ ಎಂಬಲ್ಲಿ ವಿವಾದಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ನಾಳ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿಜಯ ಎಂಬ ಮಹಿಳೆ ಹಾಗೂ ನಾಳ ಕಲೆಂಜುಕ್ಕು ಎಂಬಲ್ಲಿನ ನಿವಾಸಿ ಚಂದ್ರಶೇಖರ್ ಎಂಬ ಎರಡು ದಲಿತ ಕುಟುಂಬಗಳು ಸೇರಿದಂತೆ 4-5 ಪರಿಶಿಷ್ಟ ಜಾತಿ , ಪಂಗಡದ ಕುಟುಂಬಗಳು ಸುಮಾರು 45 ವರ್ಷಗಳಿಂದ ಉಪಯೋಗಿಸುತ್ತಾ ಬಂದಿರುವ ಕಾಲ್ದಾರಿಯನ್ನು ಅಂಗನವಾಡಿಯ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಬಂದ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇದೀಗ ದಾರಿಯನ್ನು ಬಂದ್ ಮಾಡಿರುವ ಅಕ್ರಮ ಕಲ್ಲು ಕಂಬದ ತಂತಿ ಬೇಲಿಯನ್ನು ತೆರವುಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವಂತೆ ನೊಂದ ಬಡ ಕುಟುಂಬಗಳು ಪುತ್ತೂರು ಸಹಾಯಕ ಕಮಿಷನರು ಹಾಗೂ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯವರಿಗೆ ದೂರು ನೀಡಿ‌ದ್ದಾರೆ.
ಇಲ್ಲಿನ ನಿವಾಸಿಗಳು ಪರಿಶಿಷ್ಟ ಜಾತಿ, ಪಂಗಡಗಳ ಸಣ್ಣ ರೈತರಾಗಿದ್ದು ಕೃಷಿ, ಹೈನುಗಾರಿಕೆ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ದೂರುದಾರರ ಪಟ್ಟಾ ಸ್ಥಳದ ಕುಮ್ಮಿ ಜಮೀನಿನ ಮೂಲಕ ಕಾಲು ದಾರಿ ಇದೆ. ದೇವಸ್ಥಾನ, ಶಾಲಾ ಕಾಲೇಜು, ಅಂಚೆ ಕಛೇರಿ, ಅಂಗನವಾಡಿ, ಅಂಗಡಿ ಮತ್ತಿತರ ಉದ್ದೇಶಗಳಿಗೆ ನಿತ್ಯ ಹೋಗಲು ಇದೇ ಕಾಲುದಾರಿಯನ್ನು ಅವಲಂಬಿಸಿದ್ದಾರೆ.
ಅಂಗನವಾಡಿ ಬಳಿಯಿಂದ ಹಾದು ಹೋಗುವ ಈ ಕಾಲು ದಾರಿಗೆ ದುರುದ್ದೇಶದಿಂದ ಕಲ್ಲು ಕಂಬ ತಂತಿ ಬೇಲಿ ಹಾಕಿ ಅಡ್ಡಿಪಡಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ಭಂಗಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಖಾಸಗಿ ವ್ಯಕ್ತಿಗಳು
ಅಂಗನವಾಡಿಯ ನೆಪ ಮುಂದಿಟ್ಟು ಕಾಲು ದಾರಿಗೆ ಅಡ್ಡಿಪಡಿಸುತ್ತಿರುವುದು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ.
ದೂರುದಾರರು ಮನೆ ಗೇಟಿನವರೆಗೆ ಸುತ್ತಲೂ ತಂತಿ ಬೇಲಿ ಹಾಕಿ ಬಂದ್ ಮಾಡಲಾಗಿದ್ದು ಈ ಬಗ್ಗೆ ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ತಾತ್ಕಾಲಿಕವಾಗಿ ಬಂದ್ ಮಾಡಿದ್ದು ಬಳಿಕ ಬೇಲಿ ತೆರವು ಮಾಡುತ್ತೇವೆ ಎಂಬ ಹೇಳುತ್ತಾ ಸಮಯ ಮುಂದೂಡುತ್ತಾ ದಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬುದು ಆರೋಪ.
ಈ ಮಧ್ಯೆ ಕಳಿಯ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿಗೆ ದೂರು ನೀಡಲಾಗಿದ್ದು ಪಂಚಾಯತ್ ನೋಟೀಸ್ ನೀಡಲಾಗಿದ್ದರೂ ಇದುವರೆಗೂ ಕಾಲು ದಾರಿ ತೆರವಾಗಿಲ್ಲ ಎಂದು ತಿಳಿದು ಬಂದಿದೆ.
ಅಂಗನವಾಡಿ ಮತ್ತು ಉಪ ಆರೋಗ್ಯ ಕೇಂದ್ರ ಮಂಜೂರುಗೊಂಡ ಆದೇಶದಲ್ಲಿ ದಾರಿ ಹಕ್ಕನ್ನು ಊರ್ಜಿತದಲ್ಲಿಡುವಂತೆಯೂ ದಾರಿಗೆ ಅಡ್ಡಿಪಡಿಸದಂತೆಯೂ ಉಲ್ಲೇಖವಿದ್ದು ಇದನ್ನು ಉಲ್ಲಂಘಿಸಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸಿರುವುದು ಬೆಳಕಿಗೆ ಬಂದಿದೆ.
ಕಾಲು ದಾರಿಯನ್ನು ಬಂದ್ ಮಾಡಿರುವ ಅಕ್ರಮ ಕಲ್ಲು ಕಂಬದ ತಂತಿ ಬೇಲಿಯನ್ನು ತೆರವುಗೊಳಿಸಿ ಸಾಮಾಜಿಕ ನ್ಯಾಯ ನೀಡುವಂತೆ ಪುತ್ತೂರು ಎ ಸಿ ಹಾಗೂ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

IMG-20241128-WA0002-672x1024 ನಾಳ : ಸಾರ್ವಜನಿಕ ಕಾಲ್ದಾರಿಗೆ ಅಕ್ರಮ ತಂತಿ ಬೇಲಿ ;              ಸಾಮಾಜಿಕ ನ್ಯಾಯಕ್ಕಾಗಿ      ಎಸಿ, ತಹಶೀಲ್ದಾರ್ ಗೆ ನೊಂದವರ ದೂರು

Post Comment

ಟ್ರೆಂಡಿಂಗ್‌