ದ.ಕ. ಹಾಲು ಒಕ್ಕೂಟದಲ್ಲಿ 3.5 ಲಕ್ಷ ಲೀ ಹಾಲು ಸಂಗ್ರಹ ಉತ್ಪಾದಕರ ಪರಿಶ್ರಮದ ಫಲವಾಗಿದೆ : ಸುಚರಿತ ಶೆಟ್ಟಿ

ದ.ಕ. ಹಾಲು ಒಕ್ಕೂಟದಲ್ಲಿ 3.5 ಲಕ್ಷ ಲೀ ಹಾಲು ಸಂಗ್ರಹ ಉತ್ಪಾದಕರ ಪರಿಶ್ರಮದ ಫಲವಾಗಿದೆ : ಸುಚರಿತ ಶೆಟ್ಟಿ

Share
20241129_112116-1024x461 ದ.ಕ. ಹಾಲು ಒಕ್ಕೂಟದಲ್ಲಿ     3.5 ಲಕ್ಷ ಲೀ ಹಾಲು ಸಂಗ್ರಹ ಉತ್ಪಾದಕರ ಪರಿಶ್ರಮದ ಫಲವಾಗಿದೆ : ಸುಚರಿತ ಶೆಟ್ಟಿ
20241129_110907-1024x461 ದ.ಕ. ಹಾಲು ಒಕ್ಕೂಟದಲ್ಲಿ     3.5 ಲಕ್ಷ ಲೀ ಹಾಲು ಸಂಗ್ರಹ ಉತ್ಪಾದಕರ ಪರಿಶ್ರಮದ ಫಲವಾಗಿದೆ : ಸುಚರಿತ ಶೆಟ್ಟಿ

ಬೆಳ್ತಂಗಡಿ : ದ.ಕ.ಹಾಲು ಒಕ್ಕೂಟದ ಯೋಜನೆಗಳನ್ನು 25 ವರ್ಷಗಳಿಂದ ನಿರಂತರವಾಗಿ ಮಹಿಳಾಪರವಾದ ಆರ್ಥಿಕ ಸಬಲೀಕರಣ ಮಾಡಿಕೊಂಡು ಊರಿನ, ಸಮುದಾಯದ ಆಸ್ತಿಯಾಗಿ ಬೆಳೆದ ಈ ಸಂಸ್ಥೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ದ.ಕ.ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ 3.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವುದು ಉತ್ಪಾದಕರ ಪರಿಶ್ರಮ ಹಾಗೂ ದಕ್ಷತೆಯ ಫಲವಾಗಿದೆ ಎಂದು ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಅವರು ನ.29ರಂದು ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಾ
ಈ ಸಂಘವು ದ.ಕ.ಹಾಲು ಒಕ್ಕೂಟದ ಯೋಜನೆಗಳನ್ನು ಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಸ್ಟೆಪ್, ಕೇಂದ್ರ ಸರಕಾರದ ಯೋಜನೆ, ಕೆ.ಎಂ.ಎಫ್. ಯೋಜನೆಗಳಿಂದ ಬೆಳೆದು ನಿಂತಿದೆ, ಎರಡು ಜಿಲ್ಲೆಗಳಲ್ಲಿ 5.5 ಲಕ್ಷ ಲೀಟರ್ ಹಾಲಿಗೆ ಮಾರುಕಟ್ಟೆ ಒದಗಿಸಿದ ಕಾರಣ ಮಾರಾಟದ ಶಕ್ತಿ ದ.ಕ.ಹಾಲು ಒಕ್ಕೂಟಕ್ಕಿದೆ ಇದರ ಹಿಂದೆ ದಕ್ಷವಾದ ಸಹಕಾರಿ ಕ್ಷೇತ್ರದ ಹಾಲು ಉದ್ಪಾದಕರ ಸಾಧನೆಯೂ ಇದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಊರವರ ಸಹಕಾರದಿಂದ ಇಂಥ ಸಹಕಾರಿ ಸಂಸ್ಥೆ ಬೆಳೆದರೆ ಸಶಕ್ತ,ಸಧೃಡ ಭವ್ಯ ಭಾರತ , ಉಳಿಯುತ್ತದೆ, ಮಹಿಳೆಯರೂ ಸಶಕ್ತವಾಗಲು ಸಾಧ್ಯ , ಹಾಲು ಉತ್ಪಾದಕರೇ ದ.ಕ. ಹಾಲು ಒಕ್ಕೂಟದ ಶಕ್ತಿ, ರಜತ ವರ್ಷದ ಕಾರಣಕ್ಕಾಗಿ ಈ ಸಂಸ್ಥೆಯಿಂದ ಈ ಗ್ರಾಮದಿಂದ ಗ್ರಾಮದಿಂದ ಅತೀ ಶೀಘ್ರವಾಗಿ 3,000 ಲೀಟರ್ ಹಾಲು ಬರುವ ಮೂಲಕ ದ.ಕ.ಹಾಲು ಒಕ್ಕೂಟದಲ್ಲಿ ಗುಣಮಟ್ಟದ ಹೈನುಗಾರಿಕೆ ಬೆಳೆಯಲಿ ಎಂದು ಸುಚರಿತ ಶೆಟ್ಟಿ ಆಶಿಸಿದರು.
ಬಂದಾರು ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ರಾಜೇಶ್ವರಿ ಕಬಿಲಾಲಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಜಯರಾಮ ರೈ, ನಿರ್ದೇಶಕರಾದ ಪದ್ಮನಾಭ ಶೆಟ್ಟಿ, ಅರ್ಕಜೆ, ನಾರಾಯಣ ಪ್ರಕಾಶ್, ಸವಿತಾ ಎನ್. ಶೆಟ್ಟಿ, ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.), ಉಡುಪಿ ಪ್ರಾದೇಶಿಕ ನಿರ್ದೇಶಕ
ದುಗ್ಗೇ ಗೌಡ ಮತ್ತಿತರರು ಶುಭಹಾರೈಸಿದರು.
ವೇದಿಕೆಯಲ್ಲಿ ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್. ಎಂ. ರಘು, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ ಗೌಡ ವೈ. ಏನಾಜೆ, ಬಂದಾರು ಹಾ.ಉ.ಮ.ಸ.ಸಂಘದ ಸ್ಥಾಪಕಾಧ್ಯಕ್ಷೆ ಚಂದ್ರಾಕ್ಷಿ, ದಂಡುಗ, ಸ್ಥಾಪಕ ಕೆ. ಲಕ್ಷ್ಮಣ ಗೌಡ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಜಗದೀಶ ಗೌಡ, ಕೊಂಬೇಡಿ, ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಡಾ.ಜಿತೇಂದ್ರ ಪ್ರಸಾದ್, ವಿಸ್ತರಣಾಧಿಕಾರಿ ರಾಜೇಶ್ ಕಾಮತ್ , ಆಡಳಿತ ಮಂಡಳಿ ಹಾಗೂ ಬೆಳ್ಳಿ ಹಬ್ಬ ಸಮಿತಿ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ದಿನೇಶ್ ಕಂಡಿಗ, ಮಾಜಿ ಅಧ್ಯಕ್ಷೆ ಪರಮೇಶ್ವರಿ ನಾರಾಯಣ ಗೌಡ ಮುಚ್ಚೂರು , ಸತೀಶ್ ಕಾರ್ಯಕ್ರಮ ನಿರೂಪಿಸಿ ಸಂಘದ ಕಾರ್ಯನಿರ್ವಹಣಾಧಿಕಾರಿ ಭವ್ಯಾ ಕೆ.ಎಸ್., ಸ್ವಾಗತಿಸಿ ವರದಿ ವಾಚಿಸಿದರು.
ಬೆಳ್ಳಿ ಹಬ್ಬ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹುಮಾನ ಹಾಗೂ ಅತಿಥಿಗಳಿಗೆ, ಸ್ಥಾಪಕಾಧ್ಯಕ್ಷರು,ಮಾಜಿ ಅಧ್ಯಕ್ಷರುಗಳಿಗೆ , ಆಡಳಿತ ಮಂಡಳಿ, ಬೆಳ್ಳಿ ಹಬ್ಬ ಸಮಿತಿ ಪದಾಧಿಕಾರಿಗಳಿಗೆ ಸ್ಮರಣಿಕೆ, ಸದಸ್ಯರಿಗೆ ಉಡುಗೋರೆ ವಿತರಿಸಲಾಯಿತು.

20241129_112146-1024x461 ದ.ಕ. ಹಾಲು ಒಕ್ಕೂಟದಲ್ಲಿ     3.5 ಲಕ್ಷ ಲೀ ಹಾಲು ಸಂಗ್ರಹ ಉತ್ಪಾದಕರ ಪರಿಶ್ರಮದ ಫಲವಾಗಿದೆ : ಸುಚರಿತ ಶೆಟ್ಟಿ

Post Comment

ಟ್ರೆಂಡಿಂಗ್‌