“ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ”

“ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ”

Share
IMG-20241227-WA0023 "ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ"
20241222_141545-1024x461 "ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ"

ಬೆಳ್ತಂಗಡಿ : ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಬಾಗಿಲಿಗೆ ಬಂದ ಅಪರಿಚಿತ ವ್ಯಕ್ತಿಗಳು “ನಿಮ್ಮ ಮನೆ ಮತ್ತು ಜಾಗ ಹೆದ್ದಾರಿಗೆ ಬಿಡಬೇಕು, ಮನೆ ಬಿಟ್ಟು ಹೋಗಬೇಕು..” ಎಂದು ಭಯ ಹುಟ್ಟಿಸಿದ್ದಾರೆ, ಇಲ್ಲೇ ಹುಟ್ಟಿ ಬೆಳೆದವರು ನಮ್ಮ ಅಜ್ಜ, ಅಜ್ಜಿ ಕಾಲದಿಂದಲೂ ಇಲ್ಲೇ ವಾಸವಿದ್ದೇವೆ, ನಾವು ಯಾವ ಕಾರಣಕ್ಕೂ ವಾಸದ ಮನೆ ಬಿಟ್ಟು ಹೋಗುವುದಿಲ್ಲ , ನಮ್ಮ ಮನೆ ನೆಲಸಮ ಮಾಡಿ ನಮ್ಮ ಜಾಗದಲ್ಲಿ ಹೆದ್ದಾರಿ ಹೋಗ್ಲೇ ಬೇಕೆಂದು ಇದ್ದರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ ಎಂದು ಮುಂಡಾಜೆ ಗ್ರಾಮದ ಮಜಲು ನಿವಾಸಿ ದಲಿತ ಮಹಿಳೆ ಕುನ್ನಿಗ ಗದ್ಗದಿತರಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮಜಲು ಎಂಬಲ್ಲಿನ
ಸ ನಂ 142/3ರಲ್ಲಿ 0.50 ಎಕ್ರೆ ಜಾಗವು ದಲಿತ ಮಹಿಳೆ ಕುನ್ನಿಗ ಎಂಬವರ ಸ್ವಾಧೀನತೆಯಲ್ಲಿದ್ದು ಕುನ್ನಿಗ , ಕರ್ಮಿನ ಹಾಗೂ ವಾಸು ಎಂಬವರ ಮೂರು ಕುಟುಂಬಗಳು ಇದೇ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸವಿದ್ದಾರೆ.
50 ಸೆಂಟ್ಸ್ ಜಾಗದಲ್ಲಿ 9 ಸೆಂಟ್ಸ್ ಜಾಗವು LRY 6/1981-82ರಂತೆ
1984 ಪ್ರಕಾರ ಕುನ್ನಿಗ ಅವರಿಗೆ ಮಂಜೂರಾಗಿದ್ದು ಸ್ವಂತ ಜಮೀನಿನಲ್ಲಿ ಡೋ.ನಂ. 2-4ನಲ್ಲಿ ಹಂಚು ಛಾವಣಿಯ ಚಿಕ್ಕ ಮನೆಯಲ್ಲಿ ವಾಸ್ತವ್ಯವಿದ್ದಾರೆ.

“ನಮ್ಮ ಕುಟುಂಬದ ಹಿರಿಯರ ನಂತರ ಸುಮಾರು 50 ವರ್ಷಗಳ ಹಿಂದಿನಿಂದಲೂ ವಾಸವಿದ್ದೇವೆ, ಜಾಗದಲ್ಲಿ 40ವರ್ಷಗಳಷ್ಟು ಹಿಂದಿನ ಬಾವಿಯಿದ್ದು ಕುಡಿಯುವ ನೀರಿಗಾಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬಾವಿಯನ್ನು ಅಭಿವೃದ್ಧಿಪಡಿಸಿದ್ದೇವೆ, ನನ್ನ ಜಾಗದಲ್ಲಿ ಸುಮಾರು 25 ತೆಂಗಿನ ಮರಗಳು ಮತ್ತು ಅಡಿಕೆ ಮರಗಳಿದ್ದು ಬೇರೆ ಮನೆಯಾಗಲಿ, ಜಾಗವಾಗಲಿ ನಮಗಿಲ್ಲ , ಆದರೆ ಇದೀಗ ನಮ್ಮ ಜಾಗವು ಪುಂಜಾಲಕಟ್ಟೆ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ 73 ರ ಅಗಲೀಕರಣಕ್ಕಾಗಿ ಸ್ವಾಧೀನಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆ ಬಂದಿದೆ.” ಎಂದು ವಿಧವೆ ಮಹಿಳೆ ಕುನ್ನಿಗ
ಆತಂಕ ವ್ಯಕ್ತಪಡಿಸಿದ್ದಾರೆ.

” ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೆಂದು ಹೇಳಿಕೊಂಡು ಬೇರೆ ಬೇರೆ ಅಧಿಕಾರಿಗಳು ನನ್ನ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ, ಆದರೆ ಯಾವುದೇ ಸರಿಯಾದ ಮಾಹಿತಿ ಮಾಹಿತಿಯನ್ನಾಗಲಿ ನೋಟೀಸನ್ನಾಗಲಿ ನೀಡಿರುವುದಿಲ್ಲ. ದಿನಕ್ಕೊಂದು ರೀತಿಯಲ್ಲಿ ಬಂದು ಭಯ ಹುಟ್ಟಿಸುತ್ತಿದ್ದಾರೆ, ನಮ್ಮ ಜಾಗವನ್ನು ಹೆದ್ದಾರಿಗೆ ಬಿಡಬೇಕಾದರೆ ನಾವೆಲ್ಲಿ ಹೋಗಬೇಕು ? ಎಂದು ಸ್ಥಳಕ್ಕಾಗಮಿಸಿದ ಮಾಧ್ಯಮ ಪ್ರತಿನಿಧಿಗಳ ಮುಂದೆ ಗದ್ಗದಿತರಾಗಿ ಪ್ರಶ್ನಿಸುತ್ತಾರೆ ಈ ದಲಿತ ಮಹಿಳೆ.
“ನಿಮ್ಮ ಜಾಗ ಹೆದ್ದಾರಿಗೆ ಸ್ವಾಧೀನಗೊಳ್ಳಲಿದೆ ಎಂದು ಹೇಳುತ್ತಾರೆ. ಆದರೆ ಬಗ್ಗೆ ಸರಿಯಾದ ಮಾಹಿತಿ ಕೊಡಿ ಎಂದು ಕೇಳಿಕೊಂಡರೆ ಮಹಿಳೆಯರೇ ಇರುವ ನಮ್ಮ ಮನೆಯಲ್ಲಿ ಬಂದು ಗದರಿಸುತ್ತಾರೆ ಎಂದಿದ್ದಾರೆ.
ಭೂಸ್ವಾಧೀನದ ಆತಂಕದಲ್ಲಿರುವ ಬಡ ದಲಿತ ಮಹಿಳೆ ಕುನ್ನಿಗ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿಗಳಿಗೂ ಮನವಿ ನೀಡಿದ್ದು ಇದೀಗ ದ.ಕ.ಜಿಲ್ಲಾಧಿಕಾರಿಗಳಿಗೂ ನೀಡಿದ ಮನವಿಯಲ್ಲಿ ಹೆದ್ದಾರಿ ಭೂಸ್ವಾಧೀನದ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಭೂಸ್ವಾಧೀನಾಧಿಕಾರಿಗಳಿಗೆ ನಿರ್ದೇಶನ ನೀಡಬೇಕಾಗಿ ಹಾಗೂ ತಮ್ಮ ಜಾಗ, ಮನೆ, ಬಾವಿ , ಅಡಿಕೆ, ತೆಂಗಿನ ಮರಗಳನ್ನು ಉಳಿಸಿಕೊಡಬೇಕಾಗಿ ಅತಂತ್ರತೆಯ ಆತಂಕದಲ್ಲಿರುವ ದಲಿತ ಮಹಿಳೆ ಕುನ್ನಿಗ ಅವರು ವಿನಂತಿಸಿಕೊಂಡಿದ್ದಾರೆ.

20241222_142022-1024x461 "ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ"

Post Comment

ಟ್ರೆಂಡಿಂಗ್‌