ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್

ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್

Share
IMG-20241228-WA0001-1-770x1024 ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್
20241227_124737-2-1024x461 ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್

ಬೆಳ್ತಂಗಡಿ : ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ಆಡಳಿತ ತೆರೆದಿಟ್ಟ ಚರಂಡಿಯನ್ನು ದಾಟುವ ವೇಳೆ ಕುಸಿದು ಬಿದ್ದಿದ್ದ ಬಡ ಮಹಿಳೆಯ ಕಾಲು ಮುರಿತಕ್ಕೊಳಗಾಗಿದ್ದು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದ ಮಹಿಳೆಯನ್ನು ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಲಕ್ಷ್ಮಿ ಎಂಬವರು ಚರಂಡಿ ದಾಟುವ ವೇಳೆ ಕಾಲ್ಜಾರಿ ಬಿದ್ದು ಸೊಂಟ ಮತ್ತು ಕಾಲಿಗೆ ಗಂಭೀರ ಏಟು ಬಿದ್ದಿತ್ತು. ಬಿದ್ದ ತಕ್ಷಣ ನೋವು ಸಹಿಸಿಕೊಳ್ಳಲಾಗದೆ ಎದ್ದು ನಿಲ್ಲಲಾಗದೆ ಅಳುತ್ತಿದ್ದ ಮಹಿಳೆಯನ್ನು ಮಗಳು ಮತ್ತು ನಾಗರಿಕರ ಸಹಕಾರದಿಂದ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನೋಟರಿ ವಕೀಲರೊಬ್ಬರ ಕಚೇರಿಗೆ ಮಗಳೊಂದಿಗೆ ಬಂದಿದ್ದ ಮಹಿಳೆ ಚರಂಡಿ ದಾಟಿ ಬರುವಾಗ ಕಾಲು ಜಾರಿ ಬಿದ್ದಿದ್ದರು.
ಖಾಸಗಿ ವಾಣಿಜ್ಯ ಕಟ್ಟಡದ ಮಾಲಕರು ಕಾನೂನು ಮೀರಿದ್ದಾರೆಶ, ಕಟ್ಟಡ ನಿಯಮ ಪಾಲಿಸಿಲ್ಲ, ಸಮರ್ಪಕ ಚರಂಡಿಯನ್ನಾಗಲಿ, ಪಾರ್ಕಿಂಗ್ ವ್ಯವಸ್ಥೆಯನ್ನಾಗಲಿ ಮಾಡಿಲ್ಲ ಎಂಬ ಏಕೈಕ ನೆಪದಲ್ಲಿ ಪಟ್ಟಣ ಪಂಚಾಯತ್ ಸುಮಾರು ಒಂದೂವರೆ ತಿಂಗಳ ಹಿಂದೆ ಕಟ್ಟಡದ ಎರಡು ದಿಕ್ಕುಗಳ ಚರಂಡಿಯುದ್ದಕ್ಕೂ ಅಳವಡಿಸಲಾಗಿದ್ದ ಚಪ್ಪಡಿ ಕಲ್ಲುಗಳನ್ನು ಅಗೆದು ಚರಂಡಿಯನ್ನು ತೆರೆದಿಟ್ಟು ಹಾಗೆ ಬಿಟ್ಟಿದ್ದು ಬಾಡಿಗೆದಾರರು ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಚರಂಡಿ ವಿವಾದವು ಪಟ್ಟಣ ಪಂಚಾಯತ್ ಮತ್ತು ಕಟ್ಟಡ ಮಾಲಕರಿಗೆ ಆಟ, ನಾಗರಿಕರಿಗೆ ಪ್ರಾಣ ಸಂಕಟ ಎಂಬಂತಾಗಿದೆ.
ಇದೀಗ ಪಟ್ಟಣ ಪಂಚಾಯತ್ ತೆರೆದಿಟ್ಟ ಚರಂಡಿ ದಾಟುವಾಗ ಬಿದ್ದು ಬಡ ಮಹಿಳೆಯ ಕಾಲು ಮುರಿತಕ್ಕೊಳಗಾಗಿದ್ದು ಮಹಿಳೆಯ ಚಿಕಿತ್ಸೆಯ ವೆಚ್ಚವನ್ನು ಭರಿಸುವವರು ಯಾರು ಎಂಬ ಪ್ರಶ್ನೆಯನ್ನು ನಾಗರಿಕರು ಕೇಳುತ್ತಿದ್ದಾರೆ.

Post Comment

ಟ್ರೆಂಡಿಂಗ್‌