ಬೆಳ್ತಂಗಡಿಯ ಕುತ್ಲೂರಿನ ಸುಂದರಿ ಸಹಿತ 6 ಮಂದಿ ನಕ್ಸಲರ ಶರಣಾಗತಿ

ಬೆಳ್ತಂಗಡಿಯ ಕುತ್ಲೂರಿನ ಸುಂದರಿ ಸಹಿತ 6 ಮಂದಿ ನಕ್ಸಲರ ಶರಣಾಗತಿ

Share
InShot_20250109_113715484-scaled ಬೆಳ್ತಂಗಡಿಯ ಕುತ್ಲೂರಿನ ಸುಂದರಿ ಸಹಿತ 6 ಮಂದಿ ನಕ್ಸಲರ ಶರಣಾಗತಿ

ಬೆಂಗಳೂರು : ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಕರ್ನಾಟಕದ 6 ಮಂದಿ ನಕ್ಸಲರು ಶಸ್ತ್ರಾಸ್ತ್ರ ತೊರೆಯುವ ಚಾರಿತ್ರಿಕ ನಿರ್ಧಾರ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ನಕ್ಸಲ್ ಪಟ್ಟಿಯಲ್ಲಿದ್ದ 6 ಮಂದಿ ಬುಧವಾರ ಶಸ್ತ್ರಾಸ್ತ್ರ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಹಾಜರಾಗುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದಾರೆ.

ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ಸಮಿತಿಯ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈ ಯಶಸ್ವಿ ಬೆಳವಣಿಗೆ ನಡೆಯಿತು.

ಬೆಳ್ತಂಗಡಿ ಕುತ್ಲೂರಿನ ಸುಂದರಿ, ಮುಂಡುಗಾರು ಲತಾ, ವನಜಾಕ್ಷಿ, ಮಾರಪ್ಪ ಅರೋಳಿ, ವಸಂತ್ ಹಾಗೂ ಎನ್ ಜೀಶಾ ಎಂಬ 6 ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಿ ರಾಜ್ಯದ ಜನತೆಗೆ ಐತಿಹಾಸಿಕ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ್ ಮತ್ತು ಎನ್ ಜೀಶಾ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಶರಣಾಗತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಸರಕಾರ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದ್ದು ಸದ್ಯ ಶರಣಾದ 6 ಮಂದಿ ನಕ್ಸಲರಿಗೆ ಸರ್ಕಾರ ಭರ್ಜರಿ
ಪ್ಯಾಕೇಜ್ ಕೂಡ ಘೋಷಿಸಿದೆ.
ಇನ್ನೊಂದೆಡೆ ಶರಣಾಗತರಾದ ನಕ್ಸಲರ ವಿರುದ್ಧದ ಘೋರ ಅಪರಾಧಗಳ ಮೇಲಿನ ಕಾನೂನಾತ್ಮಕ ಪ್ರಕ್ರಿಯೆ ನ್ಯಾಯಾಲಯದಲ್ಲಿ
ಮುಂದುವರೆಯುತ್ತದೆ. ರಾಜ್ಯ ಸರ್ಕಾರವು ಸೂಕ್ತ ಕಾರ್ಯ ವಿಧಾನಗಳ ಮೂಲಕ ಶರಣಾದ ನಕ್ಸಲರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ.
ಹಾಗೂ ಉಚಿತ ಕಾನೂನು ಸಹಕಾರ ನೀಡಲು ವಕೀಲರನ್ನು
ಒದಗಿಸಬಹುದು. ಅಲ್ಲದೆ ತ್ವರಿತ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ರಚಿಸಲು ಸರ್ಕಾರಕ್ಕೆ ಅವಕಾಶವಿದೆ.
ನಕ್ಸಲ್ ಶರಣಾಗತಿ ನಿಯಮಾವಳಿ ಪ್ರಕಾರ, ಶರಣಾಗತ ನಕ್ಸಲರು ತಮ್ಮ ನಿಜವಾದ ಹೆಸರು, ಗುರುತು, ಚಟುವಟಿಕೆ, ಕ್ರಿಯಾಶೀಲವಾಗಿದ್ದ
ಸಂಘಟನೆಯ ಹೆಸರು, ನಾಯಕರ ವಿವರ , ಶಸ್ತ್ರಾಸ್ತ್ರ ಸರಬರಾಜು ಮೂಲದ ಬಗ್ಗೆ ಮಾಹಿತಿಗಳನ್ನು ಬಹಿರಂಗಪಡಿಸಬೇಕಾಗುತ್ತದೆ.
ಶರಣಾಗತರಾದ ನಕ್ಸಲರಿಗೆ ಸರಕಾರ ಘೋಷಿಸಿದ ಪ್ಯಾಕೇಜ್ ಗಳ ಅನುಷ್ಠಾನ ಮತ್ತು ಶರಣಾಗತಿ ಸಂದರ್ಭ ಮುಂದಿಟ್ಟ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಎಷ್ಟು ಶೀಘ್ರವಾಗಿ ಕ್ರಮಕೈಗೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿರುವುದು ರಾಜ್ಯದ ಜನತೆಗೆ ಹೊಸ ವರ್ಷದ ಶುಭ ಸಂದೇಶವಾಗಿದೆ.

Post Comment

ಟ್ರೆಂಡಿಂಗ್‌