ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!

ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!

Share
IMG-20250121-WA0001-1024x461 ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!
IMG-20250120-WA0000-3 ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!

ಬೆಳ್ತಂಗಡಿ : ಲಾಯಿಲಾ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಹಿತ್ಯ ಪ್ರಿಯರಿಗಾಗಿ ವಿಶೇಷವಾಗಿ ಪುತ್ರಬೈಲು ಪ್ರದೇಶದ ಕುಟುಂಬಗಳ ವಿದ್ಯಾರ್ಥಿಗಳಿಗೆ, ವಿದ್ಯಾವಂತ ಯುವಕ ಯುವತಿಯರಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಬೇಡಿಕೆಯಂತೆ ನಿರ್ಮಾಣಗೊಂಡ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆಯಾಗದೆ ನಿರುಪಯುಕ್ತವಾಗಿದೆ.
15 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯ ಕಟ್ಟಡ ಗ್ರಾಮಪಂಚಾಯತ್ ಆಡಳಿತದ ನಿರ್ಲಕ್ಷ್ಯದಿಂದ ಇದುವರೆಗೂ ಉದ್ಘಾಟನೆಯೇ ಆಗಿಲ್ಲ. ಕಳಪೆ ಕಾಮಗಾರಿಯ ಪರಿಣಾಮ ನೂತನ ಗ್ರಂಥಾಲಯ ಕಟ್ಟಡದ ಮೇಲ್ಛಾವಣಿಯು ಮಳೆಗಾಲ ಪ್ರಾರಂಭದಲ್ಲೇ ಸೋರಲಾರಂಭಿಸಿತ್ತು.

ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಪುತ್ರಬೈಲು ಪ್ರದೇಶದಲ್ಲಿ 2023-24ನೇ ಸಾಲಿನಲ್ಲಿ ಕೆ ಆರ್ ಡಿ ಎಲ್ ನಿಂದ 5 ಲಕ್ಷ ರೂ. ಅನುದಾನ ಹಾಗೂ ತಾಲೂಕು ಪಂಚಾಯತ್ ನ ವಿಶೇಷ ಘಟಕ ಯೋಜನೆಯಡಿಯಲ್ಲಿ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯ ಕಟ್ಟಡದ ಮೇಲ್ಛಾವಣಿ ಉದ್ಘಾಟನೆಗೂ ಮುನ್ನ ಸೋರಲಾರಂಭಿಸಿದಾಗ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರಲ್ಲಿ ಸಂಶಯ ಮೂಡಿತ್ತು.
ಪುತ್ರಬೈಲು ಪರಿಸರದಲ್ಲಿ ಹೆಚ್ಚಾಗಿ ಪರಿತಿಷ್ಟ ಜಾತಿಯ ಕುಟುಂಬಗಳಿದ್ದು ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೂ,
ಯುವ ಜನತೆಗೂ ಅನುಕೂಲವಾಗಲೆಂದು ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಲಾಯಿಲಾ ಗ್ರಾಮದಲ್ಲಿ ಎಲ್ಲಾ ಸಮುದಾಯಗಳ ಕ್ರೀಡಾ, ಸಾಂಸ್ಕೃತಿಕ, ಧಾರ್ಮಿಕ ಸಂಘ, ಸಂಸ್ಥೆಗಳು ಗ್ರಾಮಸ್ಥರ ಹಿತದೃಷ್ಟಿಯಲ್ಲಿ ನಾನಾ ಸಮುದಾಯಮುಖೀ ಚಟುವಟಿಕೆಗಳನ್ನು ಆಗಾಗ ಆಯೋಜಿಸುತ್ತಲೇ ಇರುತ್ತಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಯುವ ಸಮುದಾಯದಲ್ಲಿ ಓದುವ ಹವ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಳೀಯ ಕುಟುಂಬಗಳ ಬೇಡಿಕೆಯಂತೆ ಇಂಥ ಪ್ರದೇಶಕ್ಕೆ ನೂತನ ಗ್ರಂಥಾಲಯ ಮಂಜೂರಾಗಿತ್ತು.
ಇದುವರೆಗೂ ಲಾಯಿಲಾ ಗ್ರಾಮಪಂಚಾಯತ್ ಕಾರ್ಯಾಲಯದ ಒಂದು ಮೂಲೆಯಲ್ಲಿ ಗ್ರಂಥಾಲಯವಿದ್ದು ಮೂಟೆ ಮೂಟೆ ಪುಸ್ತಕಗಳು ಬಂದಿದ್ದರೂ ಯಾರೂ ಪುಸ್ತಕ ಓದಲು ಪಡೆಯಲು ಬರುವ ವಾತಾವರಣವೇ ಇಲ್ಲದೆ ಗ್ರಂಥಾಲಯ ಕೋಮಾವಸ್ಥೆಯಲ್ಲಿದೆ.
ಇತ್ತ ಹೊಸ ಗ್ರಂಥಾಲಯ ಕಟ್ಟಡವನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದರು. ಈ ಗ್ರಂಥಾಲಯ ಅವ್ಯವಸ್ಥೆ ಮತ್ತು ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟಿಸದೆ ಗ್ರಾ.ಪಂ. ಆಡಳಿತ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಾದ ಸುರೇಶ್ ಪುತ್ರಬೈಲು ಎಂಬವರು ಪದೇ ಪದೇ ಧ್ವನಿ ಎತ್ತಿದ್ದು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಲಿಖಿತ ದೂರನ್ನೂ ನೀಡಿದ್ದರು.

IMG-20250121-WA0001-1-1024x461 ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!


ದೂರಿಗೆ ಸ್ಪಂದಿಸಿದ ದ.ಕ.ಜಿ.ಪಂ.ಉಪಕಾರ್ಯದರ್ಶಿಯವರು ಗ್ರಾ.ಪಂ. ಕಾರ್ಯಾಲಯದಲ್ಲಿರುವ ಪುಸ್ತಕಗಳನ್ನು ಹಾಗೂ ಸಂಬಂಧಪಟ್ಟ ಪರಿಕರಗಳನ್ನು ಪುತ್ರಬೈಲಿನಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯ ಕಟ್ಟಡಕ್ಕೆ ಶೀಘ್ರವಾಗಿ
ಸ್ಥಳಾಂತರಿಸಿ ಗ್ರಂಥಾಲಯವನ್ನು ಓದುಗರಿಗೆ ಮುಕ್ತವಾಗಿ ತೆರೆದಿಡಬೇಕೆಂದು ಅಧಿಕೃತ ಪತ್ರದಲ್ಲಿ ಮತ್ತು ಭೇಟಿ ನೀಡಿದ ಸಂದರ್ಭ ಮೌಖಿಕವಾಗಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಮ್ಮುಖದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದರೂ ಗ್ರಂಥಾಲಯ ಸ್ಥಳಾಂತರಿಸಲು ಗ್ರಾ.ಪಂ. ಆಡಳಿತಕ್ಕೆ ಇನ್ನೂ ಘಳಿಗೆ ಕೂಡಿ ಬಂದಿಲ್ಲ. ಪುತ್ರಬೈಲು ಗ್ರಂಥಾಲಯ ತೆರೆದರೆ ಯಾರಿಗೇನು ಕಷ್ಟ, ನಷ್ಟ? ಈ ಬಗ್ಗೆ ಇಷ್ಟೊಂದು ವಿಳಂಬಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಸ್ಥಳೀಯರಿಂದ ಕೇಳಿ ಬಂದಿದೆ.

IMG-20250121-WA0002-1 ಲಾಯಿಲಾ ಗ್ರಾ.ಪಂ.ಗ್ರಂಥಾಲಯ ಕೋಮಾವಸ್ಥೆಯಲ್ಲಿ..!!

Post Comment

ಟ್ರೆಂಡಿಂಗ್‌