‘ರಜತ ಪಥ’ ಸಂಭ್ರಮದಲ್ಲಿ ಮೊಗ್ರು ‘ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ : ಇಂದು ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ

‘ರಜತ ಪಥ’ ಸಂಭ್ರಮದಲ್ಲಿ ಮೊಗ್ರು ‘ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ : ಇಂದು ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ

Share

IMG-20250215-WA0003-1024x819 'ರಜತ ಪಥ' ಸಂಭ್ರಮದಲ್ಲಿ ಮೊಗ್ರು 'ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ : ಇಂದು ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ

ಬೆಳ್ತಂಗಡಿ : ಮೊಗ್ರು ಗ್ರಾಮದ ಅಲೆಕ್ಕಿ-ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಬೆಳ್ಳಿಹಬ್ಬದ ಸವಿ ನೆನಪಿಗಾಗಿ ಇಲ್ಲಿನ ಶ್ರೀ ರಾಮ ಶಿಶುಮಂದಿರ ವಠಾರದಲ್ಲಿ ‘ರಜತ ಪಥ’ವೆಂಬ ವಿನೂತನ ಹಬ್ಬವಾಗಿ (ಫೆ14 ಶುಕ್ರವಾರ ಮತ್ತು ಶನಿವಾರ15) ವಿಜೃಂಭಣೆಯೊಂದಿಗೆ
ಆಚರಿಸಿಕೊಳ್ಳುತ್ತಿದೆ.
ಕಾರ್ಯಕ್ರಮದಲ್ಲಿ ಶುಕ್ರವಾರ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಮತ್ತಿತರರು ಭಾಗಿಯಾಗಿ ಶುಭಹಾರೈಸಿದರು.
ಶ್ರೀ ರಾಮ ಶಿಶುಮಂದಿರದ ಅಲೆಕ್ಕಿ-ಮುಗೇರಡ್ಕ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ನಡೆಯಿತು. ರಾತ್ರಿ ಪುಣಿಕೆತ್ತಡಿ ಲೀಲಾವತಿ ಮತ್ತು ಪುರುಷೋತ್ತಮ ಹಾಗೂ ಮಾ. ಮಿಲನ್ ಕು.ಯತಿದೇವಿ ಇವರ ಪ್ರಾಯೋಜಕ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ ನಡೆಯಿತು.

InShot_20250215_141945162-1-1024x1007 'ರಜತ ಪಥ' ಸಂಭ್ರಮದಲ್ಲಿ ಮೊಗ್ರು 'ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ : ಇಂದು ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ


ಶನಿವಾರ ಮಧ್ಯಾಹ್ನ ಮಾತೃಪಾದ ಪೂಜೆ ನಡೆಯುತ್ತಿದೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಸಭಾಧ್ಯಕ್ಷತೆವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ , ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ‘ನವಶಕ್ತಿ’ ಶಶಿಧರ ಶೆಟ್ಟಿ ಬರೋಡಾ, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಉದ್ಯಮಿ ಮೋಹನ್ ಕುಮಾರ್, ಹೈಕೋರ್ಟ್ ವಕೀಲ ರಾಜಶೇಖರ ಭಟ್, ಇಲಿಯಾರ್, ಶ್ರೀ ರಾಮ ಶಾಲೆ, ಉಪ್ಪಿನಂಗಡಿ ಇದರ ಸಂಚಾಲಕಿ ಯು. ಜಿ. ರಾಧಾ, ಬೆಂಗಳೂರಿನ ಉದ್ಯಮಿ ಗಿರೀಶ್ ರಾವ್, ಶ್ರೀ.ಧ.ಗ್ರಾ.ಯೋ, ಗುರುವಾಯನಕೆರೆ ವಿಭಾಗ ಯೋಜನಾಧಿಕಾರಿ ದಯಾನಂದ ಪೂಜಾರಿ, ಗ್ರಾ.ಪಂ. ಅಧ್ಯಕ್ಷ ದಿನೇಶ್ ಖಂಡಿಗ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಮುಗೇರಡ್ಕ ದೈವಸ್ಥಾನ ಆಡಳಿತ ಮೊಕ್ತೇಸರರಾದ ರಾಮಣ್ಣ ಗೌಡ ದೇವಸ್ಯಗುತ್ತು, ಮನೋಹರ ಗೌಡ ಅಂತರ, ಪ್ರಶಸ್ತಿ ಪುರಷ್ಕೃತ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆ, ಗೌರವಾಧ್ಯಕ್ಷ ಉದಯ ಭಟ್, ಅಧ್ಯಕ್ಷ ರಮೇಶ್ ಎನ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಕುಡ್ಡ ಅರ್ಪಣೆ ಮಲ್ಪುನ ಅರದಲ ಆಣಿ ತಿರಿ ದಾಂತಿನ ಪಾಡ್ದನ ಆಧಾರಿತ ತುಳು ನಾಟಕ ‘ಕಾಡ್ ಪೊಗ್ಗಿಯೆಂಡ ಮೃಗ, ನಾಡ್ ಪೊಗ್ಗಿಯೆಂಡ ದೈವ’ ‘ಪರಮಾತ್ಮೆ ಪಂಜುರ್ಲಿ’ ಪ್ರದರ್ಶನಗೊಳ್ಳಲಿದೆ.

Post Comment

ಟ್ರೆಂಡಿಂಗ್‌