ಮೊಗ್ರು ಮುಗೇರಡ್ಕ ‘ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್’ ಬೆಳ್ಳಿಹಬ್ಬ ಪ್ರಯುಕ್ತ ‘ರಜತ ಪಥ’ ಕಾರ್ಯಕ್ರಮ

ಮೊಗ್ರು ಮುಗೇರಡ್ಕ ‘ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್’ ಬೆಳ್ಳಿಹಬ್ಬ ಪ್ರಯುಕ್ತ ‘ರಜತ ಪಥ’ ಕಾರ್ಯಕ್ರಮ

Share
20250215_205207-1024x407 ಮೊಗ್ರು ಮುಗೇರಡ್ಕ               'ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್' ಬೆಳ್ಳಿಹಬ್ಬ ಪ್ರಯುಕ್ತ 'ರಜತ ಪಥ' ಕಾರ್ಯಕ್ರಮ

ಬೆಳ್ತಂಗಡಿ : ರಾಮನೇ ನಮ್ಮ ದೇಶ , ರಾಮನೇ ನಮ್ಮ ಧರ್ಮ, ರಾಮನೇ ನಮ್ಮ ಸಂಸ್ಕೃತಿ, ರಾಮನೇ ನಮ್ಮ ಧೈರ್ಯ ರಾಮನೇ ನಮ್ಮ ಪರಾಕ್ರಮ, ರಾಮನೇ ನಮ್ಮಸರ್ವಸ್ವ, ರಾಮನೇ ನಮ್ಮ ಅಸ್ತಿತ್ವ, ಸಮಾಜದ ಯಾವುದೇ ಮುಖದಲ್ಲಿ ನೋಡಿದರೂ ಶ್ರೀರಾಮಚಂದ್ರ ಸರ್ವ ಶ್ರೇಷ್ಠ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಮೊಗ್ರು ಗ್ರಾಮದ ಅಲೆಕ್ಕಿ-ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬದ ಸವಿ ನೆನಪಿಗಾಗಿ ಇಲ್ಲಿನ ಶ್ರೀ ರಾಮ ಶಿಶುಮಂದಿರ ವಠಾರದಲ್ಲಿ ಫೆ15ರಂದು ನೆರವೇರಿದ
‘ರಜತ ಪಥ’ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಇಪ್ಪತ್ತೈದು ವರ್ಷಗಳಿಂದ ಸಮಾಜದ ಹಿತಕ್ಕೆ ಬೇಕಾಗುವ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಜೈಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ ಮಾತನಾಡಿದ ಶಾಸಕ ಹರೀಶ್ ಪೂಂಜ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ನ ಯುವಕರು ಸತತ ಇಪ್ಪತ್ತೈದು ವರ್ಷಗಳಿಂದ ಊರಿನ ಒಳಿತಿಗಾಗಿ ಸತ್ಕಾರ್ಯಗಳಲ್ಲಿ ತೊಡಗಿದ್ದಾರೆ, ಉತ್ತಮ ಚಿಂತನೆಯೊಂದಿಗೆ ಹಿಂದೂ ಸಮಾಜದ ಆಶಯದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ ಎಂದರು.
ಇಡೀ ಜಗತ್ತಿನಲ್ಲಿ ಯಾವ ದೇಶಕ್ಕೆ ಮನ್ನಣೆ ಇದೆ ಎಂದು ಕೇಳಿದರೆ ನಮ್ಮ ದೇಶಕ್ಕೆ ಮನ್ನಣೆ ಇದೆ, ದೇವರ ಗುಡಿಯಂತಿರುವ
ಶಿಶು ಮಂದಿರದ ಮಕ್ಕಳು ಶ್ರೇಷ್ಠ ಸನಾತನ ಸಂಸ್ಕೃತಿಯ ಶಿಕ್ಷಣ ಪಡೆಯುತ್ತಿರುವುದು ಸ್ವಾಮಿ ವಿವೇಕಾನಂದರವರ ಪರಿಕಲ್ಪನೆಯ ಭಾರತವನ್ನು ಕಟ್ಟುವ ಸಂಪತ್ತುಗಳಾಗಿದ್ದಾರೆ ಎಂದು ಹೇಳುತ್ತಾ ಶುಭ ಹಾರೈಸಿದರು.
ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅಧ್ಯಕ್ಷತೆವಹಿಸಿ ಮಾತನಾಡಿ ಸನಾತನ ಸಂಸ್ಕೃತಿ, ಸನಾತನ ಶಕ್ತಿಯ ಜೀವನಾಡಿಯಾಗಿರುವಂಥ, ಹಿಂದುತ್ವದ ವಿಚಾರಧಾರೆ ನಮಗೆಲ್ಲ ಸ್ಫೂರ್ತಿಯಾಗಿದೆ, ಜಗತ್ತಿನ ದೇವರ ಕೋಣೆ ಭಾರತವಾದರೆ, ಭಾರತದ ದೇವರ ಕೋಣೆ ತುಳುವ ನೆಲವಾಗಿದೆ, ಸನಾತನ ಸಂಸ್ಕೃತಿಯ ಪ್ರತೀಕವಾಗಿರುವಂಥ ಮುಂದಿನ ಪೀಳಿಗೆಯ ಮಕ್ಕಳನ್ನು ಸಂಸ್ಕೃತಿ, ಸಂಸ್ಕಾರ, ಧರ್ಮ, ವೇದಗಳು, ಉಪನಿಷತ್ತು ಎಲ್ಲವನ್ನು ಮಾದರಿಯಾಗಿಟ್ಟುಕೊಂಡು ಧರ್ಮ ಶಿಕ್ಷಣವನ್ನು ಕೊಡುವಂಥ ನಿಟ್ಟಿನಲ್ಲಿ ಜೈ ಶ್ರೀರಾಮ್ ಬಳಗವು ಶ್ರೀರಾಮ ಶಿಶು ಮಂದಿರವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ.ರಾಧ, ಸಿ.ಎ.ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಗ್ರಾ.ಪಂ. ಅಧ್ಯಕ್ಷ ದಿನೇಶ್ ಖಂಡಿಗ,ಉಪಾಧ್ಯಕ್ಷ ಗಂಗಾಧರ ಪೂಜಾರಿ, ಮುಗೇರಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಣ್ಣ ಗೌಡ ದೇವಸ್ಯಗುತ್ತು, ಮನೋಹರ ಗೌಡ ಅಂತರ, ಪ್ರಶಸ್ತಿ ಪುರಷ್ಕೃತ ಕೃಷಿಕ
ದೇವಿಪ್ರಸಾದ್ ಕಡಮ್ಮಾಜೆ, ಗೌರವಾಧ್ಯಕ್ಷ ಉದಯ ಭಟ್,
ಅಧ್ಯಕ್ಷ ರಮೇಶ್ ಎನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ಷೇತ್ರದ ಸಾಧಕರ ಸಾಧನೆ ಕಾರ್ಯ ಚಟುವಟಿಕೆಗಳ ಸಾಕ್ಷ್ಯಚಿತ್ರಗಳನ್ನು ಸ್ಕ್ರೀನ್ ಮೂಲಕ ಅನಾವರಣಗೊಳಿಸುವ ಮೂಲಕ ಸಾಧಕರನ್ನು ಸನ್ಮಾನಿಸಲಾಯಿತು.

20250215_212257-1024x426 ಮೊಗ್ರು ಮುಗೇರಡ್ಕ               'ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್' ಬೆಳ್ಳಿಹಬ್ಬ ಪ್ರಯುಕ್ತ 'ರಜತ ಪಥ' ಕಾರ್ಯಕ್ರಮ


ಶ್ರೀ ರಾಮ ಶಿಶುಮಂದಿರದ ಪುಟಾಣಿಗಳಿಂದ ಹಾಗೂ ಪೋಷಕರಿಂದ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಳಿಕ ‘ಪರಮಾತ್ಮೆ ಪಂಜುರ್ಲಿ’ ಪ್ರದರ್ಶನಗೊಂಡಿತು.
ಪದಾಧಿಕಾರಿಗಳು, ಮಾತೃಮಂಡಳಿ, ಮಾತಾಜಿಯರು, ಪೋಷಕರು, ವಿದ್ಯಾಭಿಮಾನಿಗಳು ಪಾಲ್ಗೊಂಡರು. ಶಿಕ್ಷಕ ಮಾಧವ ಗೌಡ
ಸ್ವಾಗತಿಸಿ ಬೆಳ್ಳಿಹಬ್ಬ ಸಮಿತಿ‌ ಉಪಾಧ್ಯಕ್ಷ ಭರತೇಶ್ ವಂದಿಸಿದರು.

Post Comment

ಟ್ರೆಂಡಿಂಗ್‌