ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ಓ, ಎನ್.ಪದ್ಮನಾಭ ಮಾಣಿಂಜ ವಿಧಿವಶ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ಓ, ಎನ್.ಪದ್ಮನಾಭ ಮಾಣಿಂಜ ವಿಧಿವಶ

Share
IMG-20250306-WA0000 ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ,                ನಿವೃತ್ತ ಡಿಎಫ್ಓ, ಎನ್.ಪದ್ಮನಾಭ ಮಾಣಿಂಜ ವಿಧಿವಶ

ಬೆಳ್ತಂಗಡಿ : ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯ ತಲೆ, ನಿವೃತ್ತ ಡಿಎಫ್ ಓ, ಮಾಜಿ ಶಾಸಕ ದಿ.ಕೆ.ವಸಂತ ಬಂಗೇರವರ ಆಪ್ತರಲ್ಲೊಬ್ಬರಾದ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಾ.6ರಂದು ಬೆಳಿಗ್ಗೆ ವಿಧಿವಶರಾದರು.

ಮಾಜಿ ಶಾಸಕ ಕೆ.ವಸಂತ ಬಂಗೇರರೊಂದಿಗೆ ಉತ್ತಮ ಸಂಬಂಧ ಹೊಂದಿದ ಇವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು.ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಪದ್ಮನಾಭ ಮಾಣಿಂಜರವರ ದೂರದೃಷ್ಟಿ ಚಿಂತನೆ ಮಹತ್ತರವಾದದು.

ಸರಳ, ನೇರ ನಿಷ್ಟುರವಾದಿ ವ್ಯಕ್ತಿತ್ವವನ್ನು ಹೊಂದಿದ್ದ ಇವರು ಪತ್ನಿ ಇಂದಿರಾ, ಪುತ್ರರಾದ ಸೂರಜ್, ಸುಧೀರ್, ಸುಜಿತ್, ಸೊಸೆಯಂದಿರಾದ ಸ್ನೇಹ, ಟೀನಾ, ದಿವ್ಯ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Previous post

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ ; ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

Next post

ನ್ಯಾಯಾಲಯದ ಕಟ್ಟಡ ಮಂಜೂರುಗೊಳಿಸುವಂತೆ ಬೆಂಗಳೂರಿನಲ್ಲಿ ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ಸಚಿವರುಗಳ ಭೇಟಿ

Post Comment

ಟ್ರೆಂಡಿಂಗ್‌