ಮಗುವನ್ನು ತಬ್ಬಲಿ ಮಾಡಿ ತಲೆಮರೆಸಿಕೊಂಡಿದ್ದ ನಿರ್ದಯಿ ಹೆತ್ತವರು ಕೊನೆಗೂ ಪತ್ತೆ!

ಬೆಳ್ತಂಗಡಿ : ತೀವ್ರ ಕುತೂಹಲ ಕೆರಳಿಸಿದ್ದ ಬೆಳಾಲು ಗ್ರಾಮದ ಕೂಡೋಳುಕೆರೆ-ಮುಂಡ್ರೊಟ್ಟು ರಸ್ತೆಯಲ್ಲಿ ಮಾ:22ರಂದು ಬೆಳಿಗ್ಗೆ ಮೂರು ತಿಂಗಳ ಹೆಣ್ಣು ಮಗುವನ್ನು ಕಾಡಿನ ರಸ್ತೆ ಬದಿ ಬಿಟ್ಟು ತಲೆಮರೆಸಿಕೊಂಡಿದ್ದ ಪ್ರಕರಣದ ಮಗುವಿನ ಹೆತ್ತವರು ಕೊನೆಗೂ ಪತ್ತೆಯಾಗಿದ್ದಾರೆ.
ಸ್ಥಳೀಯರಿಂದ ವೆಬ್ ಸೈಟ್ ಪ್ರತಿನಿಧಿಯ ಮೂಲಕ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಕಾಡಿನಲ್ಲಿ ಪತ್ತೆಯಾದ ಮಗುವಿನ ತಂದೆ-ತಾಯಿಯ ಗುರುತು ಪತ್ತೆ ಹಚ್ಚಿದ್ದು ಇಬ್ಬರೂ ಮಗುವಿನ ಹೆತ್ತವರು ತಾವೇ ಎಂದು ಖಚಿತ ಪಡಿಸಿಕೊಂಡಿದ್ದು ಮದುವೆಯಾಗುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಬೆಳಾಲು ಕಾಡಿನಲ್ಲಿ ಪತ್ತೆಯಾದ ಮಗುವನ್ನು ರಕ್ಷಿಸಿ ಉಪಚರಿಸಿದ ಬಳಿಕ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಗೊಂಡ ಮಗು ಪ್ರಕ್ರಿಯೆಯ ನಂತರ ಪುತ್ತೂರು ರಾಮಕೃಷ್ಣ ಸೇವಾಶ್ರಮದ ಆಶ್ರಯದಲ್ಲಿ ಪೋಷಣೆಯಲ್ಲಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖಾ ಮೇಲ್ವಿಚಾರಕಿ ಅನ್ನಪೂರ್ಣ ಮಾ.22 ರಂದು ನೀಡಿದ ದೂರಿನಂತೆ BNS93 (ಅಪರಿಚಿತ ಹೆಣ್ಣು ಮಗುವನ್ನು ಯಾರೋ ಬಿಟ್ಟು ಹೋದ)ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಳೆದೆರಡು ದಿನಗಳ ಹಿಂದೆ ಪ್ರತೀಕ್ ಕೋಟ್ಯಾನ್ ಅವರಿಗೆ ಸ್ಥಳೀಯರೊಬ್ಬರು ಕರೆ ಮಾಡಿ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲು ವಿನಂತಿಸಿಕೊಂಡು ಊ ಗಗನ ಗಮ ಯವರನಮಗುವಿನ ತಂದೆ-ತಾಯಿ ವಿಳಾಸ, ಮೊಬೈಲ್ ಸಂಖ್ಯೆ ಸಮೇತ ಖಚಿತ ಮಾಹಿತಿ ನೀಡಿದ್ದರು.
ನಿಖರ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರಾ ಮತ್ತು ತಂಡ ಮಗುವಿನ ತಂದೆ ಮನೆಯಲ್ಲಿ ಇರುವಿಕೆಯನ್ನು ಖಚಿತಪಡಿಸಿಕೊಂಡು ಬುಧವಾರ ರಾತ್ರಿ ಮಗುವಿನ ತಂದೆ ರಂಜಿತ್ ಗೌಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡ ಎಂಬವರ ಪುತ್ರ ಧರ್ಮಸ್ಥಳ ದೇವಸ್ಥಾನದ ಸಿಬ್ಬಂದಿ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ನಿವಾಸಿ ಮಂಗಳೂರಿನಲ್ಲಿ
ಬ್ಯೂಟಿಷಿಯನ್ ಆಗಿರುವ ಸುಶ್ಮಿತಾ ಗೌಡ (22) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸರು ಇದೀಗ ಮಗುವಿನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸ್ವಇಚ್ಛೆಯಿಂದ ಮದುವೆಯಾಗುವುದಾಗಿ ಇಬ್ಬರೂ
ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಾನೂನು ಪ್ರಕ್ರಿಯೆ (DNA) ಮುಗಿದ ಬಳಿ ಪುತ್ತೂರು ಆಶ್ರಮದಲ್ಲಿರುವ ಮಗುವನ್ನು ತಂದೆ-ತಾಯಿಗೆ ಹಸ್ತಾಂತರಿಸಲ್ಲಿದ್ದಾರೆ.
ರಂಜಿತ್ ಮತ್ತು ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದ ವಿಚಾರ ಎರಡು ಮನೆಯವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚುತ್ತು.
ಪ್ರೀತಿಸಿದಾತ ಮದುವೆಯಾಗುತ್ತಾನೆಂದು ನಂಬಿದ ಯುವತಿ ದೈಹಿಕ ಸಂಬಂದಕ್ಕೆ ಒಪ್ಪಿಕೊಂಡ ಪರಿಣಾಮ ಗರ್ಭಿಣಿಯಾಗಿದ್ದಳು.
ಈ ವಿಚಾರವನ್ನು ಮನೆಯವರಿಗೆ ತಿಳಿಸದ ಕಾರಣ ಕದ್ದುಮುಚ್ಚಿ
ದಂಪತಿಗಳಂತೆ ಉಜಿರೆಯ ಕ್ಲಿನಿಕ್ ಗಳಿಗೆ ಪ್ರತಿ ತಿಂಗಳು ಹೋಗುತ್ತಿದ್ದು ವೈದ್ಯರು ತಾಯಿ ಕಾರ್ಡ್ ಕೇಳಿದಾಗ ‘ಕಳೆದು ಹೋಗಿದೆ’ ಎಂದು ಹೇಳಿದ್ದರು. ಉಜಿರೆಯಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಬಿಟ್ಟಿದ್ದ ರಂಜಿತ್ ವಾರಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದು ನಿಯಮ ಬಾಹಿರವಾಗಿ ನಾರ್ಮಲ್ ಡೆಲಿವರಿ ಆಗಿದ್ದರಿಂದ ಆಸ್ಪತ್ರೆಗೆ ಹೋಗದೆ ಬಾಡಿಗೆ ರೂಂ ನಲ್ಲಿದ್ದರು.
ಮದುವೆಯಾಗದೆ ಗರ್ಭಿಣಿಯಾಗಿ ಮಗು ಹುಟ್ಟಿದ ಕಾರಣ ಕುಟುಂಬದವರ ಭಯದಿಂದ ಮರ್ಯಾದೆಗಂಜಿದ್ದರು. ಪೊಲೀಸರು ಹೋಗುವವರೆಗೂ ಈ ಜೋಡಿ ಅನಧಿಕೃತ ದಾಂಪತ್ಯ ಸಂಸಾರ ವಿಚಾರ ಎರಡು ಮನೆಯ ಪೋಷಕರಿಗೆ ಗೊತ್ತಾಗಿರಲಿಲ್ಲ.
ಇದೀಗ ಪ್ರಕರಣ ಸುಖಾಂತ್ಯ ಕಾಣುವ ಹಂತದಲ್ಲಿದ್ದು ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಮಗುವಿನ ಹೆತ್ತವರ ವಿಚಾರಣೆ ಬಳಿಕ ಬೆಳಕಿಗೆ ಬರಬೇಕಿದೆ. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ನೋಂದಣಿಗೊಂಡು 60 ದಿನಗಳೊಳಗಾಗಿ ಹೆತ್ತವರು ತಮ್ಮ ಸೂಕ್ತ ಗುರುತು, ದಾಖಲೆಗಳನ್ನು ತೋರಿಸಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮಗುವನ್ನು ಮರಳಿ ಪಡೆಯುವು, ಅವಕಾಶವಿರುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
Post Comment