ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು

ಬೆಳ್ತಂಗಡಿ : ಮರವೊಂದರ ಗೆಲ್ಲು ಕತ್ತರಿಸುವ ವೇಳೆ ಹಸಿ ಮರದ ಗೆಲ್ಲು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಬೆಳ್ತಂಗಡಿ ಕಸಬಾದ ಹುಣ್ಸೆಕಟ್ಟೆ ನಡೆದಿದೆ.
ಬೆಳ್ತಂಗಡಿ ಕಸಬಾದ ಹುಣ್ಸೆಕಟ್ಟೆಯ ಪುಂಡಿಕ್ಕು ಎಂಬಲ್ಲಿ ಚನನ ಗೌಡ (69ವ) ಎಂಬವರು ಗುರುವಾರ ಬೆಳಿಗ್ಗೆ ಖಾಸಗಿ ಮರದ ಗೆಲ್ಲೊಂದನ್ನು ಕಡಿಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಗೆಲ್ಲು ಆಕಸ್ಮಿಕವಾಗಿ ರಸ್ತೆಯ ಎತ್ತರದಲ್ಲಿ ಹಾದು ಹೋಗಿರುವ 11ಕೆವಿ ಕುವೆಟ್ಟು ಫೀಡರ್‌ನ ಹೆಚ್.ಟಿ. ಲೈನ್‌ಗೆ ಬಿದ್ದಿದ್ದೇ ಈ ಘಟನೆ ನಡೆದಿದೆ.
ಗೆಲ್ಲು ತಂತಿ ಮೇಲೆ ಬಿದ್ದುದರಿಂದ ವಿದ್ಯುತ್ ಶಾಕ್ ತಗಲಿ, ಅವರು ಮರದಿಂದ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು ಚನನ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಸೂಚಿಸಿದ ಮೇರೆಗರ ಕರೆದೊಯ್ಯುವ ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment