ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಕಟ್ಟಡ -ಸಭಾ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸ್ವಾಮೀಜಿಗೆ ಆಮಂತ್ರಿಸದೆ ಅವಮಾನ : ಶೃಂಗೇರಿ ಮಠದ ಶ್ರೀಗಳಿಗೆ ಆಹ್ವಾನ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಗೌಡ ಸಮಾಜದ ಒಂದು ಸಂಘಟನೆಯಾಗಿದ್ದು ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದು
ಸಮಾಜದ ಅನೇಕ ದಾನಿಗಳ ನೆರವಿನೊಂದಿಗೆ ವಿದ್ಯಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಈವರೆಗೆ ಉತ್ತಮ ಕೆಲಸ ಮಾಡಿಕೊಂಡು ಬಂದಿರುತ್ತದೆ. ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ).ಹಳೆಕೋಟೆ ಬೆಳ್ತಂಗಡಿ, ಇದರ ನೂತನ ಕಟ್ಟಡ ಮತ್ತು ಸಭಾಭವನವು ಏಪ್ರಿಲ್ 20- 2025ರಂದು ಉದ್ಘಾಟನೆಗೊಳ್ಳಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಗೌಡ ಸಮಾಜದ ಸ್ವಾಮೀಜಿಗಳಾಗಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಕಾವೂರು ಮಠ ಇವರುಗಳನ್ನು ಆಮಂತ್ತಿಸದೆ ಆಹ್ವಾನಿಸದೆ ಅವಮಾನಿಸಲಾಗಿದೆ. ಇದು ಸಮುದಾಯಯವನ್ನು ಒಡೆಯುವ ಕೆಲಸವಾಗಿದ್ದು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಖಂಡನೆ ವ್ಯಕ್ತಪಡಿಸುತ್ತದೆ ಎಂದು ನ್ಯಾಯವಾದಿ, ಸ್ಥಾಪಕ ಟ್ರಸ್ಟಿ ವಸಂತ ಗೌಡ ಮರಕಡ ಆರೋಪಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಂಗಳವಾರ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ನಮ್ಮ ಗೌಡ ಸಮಾಜದ ಸ್ವಾಮೀಜಿಗಳಾಗಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಕಾವೂರು ಮಠ ಇವರುಗಳನ್ನು ಉದ್ದೇಶಪೂರ್ವಕವಾಗಿ ಆಮಂತ್ರಿಸಿರುವುದಿಲ್ಲ, ಇದರಿಂದ ಸಮಾಜದ ಸಮಸ್ತ ಭಾಂಧವರಿಗೆ ಅತ್ಯಂತ ನೋವಾಗಿದೆ ಶ್ರೀ ಮಠಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. 72 ಪೀಠಾಧ್ಯಕ್ಷರು ಶ್ರೀ ಆದಿಚುಂಚನಗಿರಿ ಪೀಠವನ್ನಾಳಿದ್ದಾರೆ. ಇಂದು ವಿಶ್ವದೆಲ್ಲೆಡೆ ಒಕ್ಕಲಿಗ ಗೌಡರ ಮಠವಾಗಿ ಬೆಳೆದು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿರುವ ಸ್ವಾಮೀಜಿಗಳನ್ನು ಅಹ್ವಾನಿಸದೆ, ಬದಲಿಗೆ ಶೃಂಗೇರಿ ಮಠದ ಶ್ರೀಗಳನ್ನು ಆಮಂತ್ರಿಸಿರುವುದು ನಮ್ಮ ಜಾತಿಯ ಸ್ವಾಮೀಜಿಗಳನ್ನು ಅವಮಾನಿಸುವ. ಉದ್ದೇಶದಿಂದಲೇ ಮಾಡಿರುವುದಾಗಿದೆ ಎಂದು ಆರೋಪಿಸಿದರು.
ನಮ್ಮ ತಾಲೂಕಿನ ಗೌಡ ನಮ್ಮ ಗೌಡರ ಯಾನೆ ಒಕ್ಕಲಿಗ ಸಮುದಾಯಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠವೇ ಗುರುಪೀಠವಾಗಿದ್ದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಹಳೆಕೋಟೆ, ಬೆಳ್ತಂಗಡಿ ಸಂಘಟನೆಯು ಕೂಡಾ ಪ್ರಾರಂಭದಿಂದಲೂ ಆದಿಚುಂಚನಗಿರಿ ಮಠದ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳೆದು ಬೆಸೆದುಕೊಂಡು ಬಂದಿದೆ.
ಸೇವಾ ಸಂಘದ ಈ ಹಿಂದಿನ ಎಲ್ಲಾ ಪ್ರಮುಖ ಕಾರ್ಯಕ್ರಮಗಳಿಗೆ ಆದಿಚುಂಚನಗಿರಿಯ ಸ್ವಾಮೀಜಿಗಳನ್ನು ಕರೆದು ಅವರ ಗೌರವ ಉಪಸ್ಥಿತಿಯಲ್ಲಿ ನಡೆಯುತ್ತಿದ್ದುದು ಎಲ್ಲರಿಗೂ ತಿಳಿದಿರುವ ವಿಚಾರ. ಇನ್ನೊಂದೆಡೆ ವಾಣಿ ವಿದ್ಯಾ ಸಂಸ್ಥೆಯ ಸ್ಥಾಪನೆ, ಉದ್ಘಾಟನೆ ಹಾಗೂ ಗೌಡರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಮುಂತಾದ ಕಾರ್ಯಗಳನ್ನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ದಿವ್ಯಹಸ್ತದಿಂದ ನೆರವೇರಿಸಲಾಗಿದೆ ಎಂದರು.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಹಳೆಕೋಟೆ, ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನ ಪ್ರತಿ ಗೌಡ ಮನೆಗಳಿಗೆ ಆದಿಚುಂಚನಗಿರಿ ಸ್ವಾಮಿಗಳ ಭಾವಚಿತ್ರವನ್ನು ನೀಡಲಾಗಿದ್ದು ಅದನ್ನು ಪ್ರತಿ ಮನೆಯಲ್ಲಿಟ್ಟು ಗೌರವಿಸಲಾಗುತ್ತಿದೆ.
ಆದರೆ ಇದೀಗ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಿಗೆ ಅವಮಾನಿಸಿರುವುದರ ಹಿಂದೆ ಯಾವ ಉದ್ದೇಶವಿದೆ ಎಂಬ ಸಂಗತಿ ನಮಗೆ ತಿಳಿದಿಲ್ಲ.
ಶೃಂಗೇರಿ ಮಠ ಮತ್ತು ಆದಿಚುಂಚನಗಿರಿ ಮಠದ ನಡುವೆ ವೈಮನಸ್ಸುಂಟುಮಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ನಮ್ಮದೇ ಸಮುದಾಯದ ಸ್ವಾಮೀಜಿಗಳನ್ನು ಕಾರ್ಯಕ್ರಮಕ್ಕೆ ಶೃಂಗೇರಿ ಮಠದ ಶ್ರೀಗಳನ್ನು ಆಮಂತ್ರಿಸದಿರುವುದು ಸಮಾಜವನ್ನು ದಿಕ್ಕು ತಪ್ಪಿಸುವ ಮತ್ತು ಗೌಡ ಸಮಾಜದ ಒಗ್ಗಟ್ಟನ್ನು ಒಡೆಯುವ ಕೆಲವು ವ್ಯಕ್ತಿಗಳ ಸಂಚು ಇದೆ ಎಂದ ಟ್ರಸ್ಟಿ ಮೋಹನ ಗೌಡ ಕಲ್ಮಂಜ ಈ ವಿಚಾರವನ್ನು ಗೌಡ ಸಮಾಜ ಎಂದಿಗೂ ಸಹಿಸುವುದಿಲ್ಲ ಹಾಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಹಳೆಕೋಟೆ, ಬೆಳ್ತಂಗಡಿ ಇದರ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಅಥವಾ ಮಂಗಳೂರು ಶಾಖಾ ಮಠಕ್ಕೆ ಹೋಗಿ ಆಗಿರುವಂತಹ ತಪ್ಪಿಗೆ ಕ್ಷಮೆ ಯಾಚಿಸಿ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ದಿವ್ಯಹಸ್ತದಿಂದಲೇ ಕಟ್ಟಡವನ್ನು ಉದ್ಘಾಟಿಸಬೇಕೆಂದು ಬೆಳ್ತಂಗಡಿ ತಾಲೂಕಿನ ಸಮಸ್ತ ಗೌಡ ಭಾಂಧವರ ಪರವಾಗಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಆಗ್ರಹಿಸುತ್ತದೆ,
ಇಲ್ಲದಿದ್ದರೆ ರಾಜ್ಯದಾದ್ಯಂತ ನಡೆಯುವ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸ್ಥಾಪಕ ಟ್ರಸ್ಟಿಗಳಾದ ರಂಜನ್ ಜಿ. ಗೌಡ ಬೆಳ್ತಂಗಡಿ , ಕೆ. ವಿಜಯ ಗೌಡ ವೇಣೂರು, ಶ್ರೀನಿವಾಸ ಗೌಡ, ಬೆಳಾಲು, ಸೂರಜ್ ಗೌಡ ವಳಂಬ್ರ, ಜಯಂತ್ ಗೌಡ ಗುರಿಪಳ್ಳ, ಭರತ್ ಗೌಡ ಬಂಗಾಡಿ, ದಾಮೋದರ ಗೌಡ ಬೆಳಾಲು, ನವೀನ್ ಗೌಡ ಬಿ.ಕೆ. ನಿಡ್ಲೆ, ದಿನೇಶ್ ಗೌಡ ಉಪಸ್ಥಿತರಿದ್ದರು.
Post Comment