ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಕಸ್ಟಡಿ ಅಂತ್ಯ: ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:

ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಕಸ್ಟಡಿ ಅಂತ್ಯ: ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:

Share
InShot_20250411_223112116-1024x1024 ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ-          ಸಾವಿತ್ರಿ ಕಸ್ಟಡಿ ಅಂತ್ಯ:          ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:

ಬಿಗಿ ಪೊಲೀಸ್ ಭದ್ರತೆಯಲ್ಲಿ
ಕೇರಳ ಪ್ರಯಾಣ ಬೆಳೆಸಿದ
ನಕ್ಸಲ್ ನಾಯಕರು

ಬೆಳ್ತಂಗಡಿ : ತಾಲೂಕಿನ ನಡೆದ ಮೂರು ನಕ್ಸಲ್ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಏ.7 ರಂದು ಹಾಜರುಪಡಿಸಿ ಏ.11ರವರೆಗೆ ಕಸ್ಟಡಿಗೆ ಪಡೆಯಲಾಗಿದ್ದ ಇಬ್ಬರು ನಕ್ಸಲ್ ನಾಯಕರ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಶುಕ್ರವಾರ ಮತ್ತೆ ಕೇರಳ ಜೈಲಿಗೆ ಕಳುಹಿಸಿದೆ.
2021ರ ನವೆಂಬರ್ 8ರಂದು ಕೇರಳ ರಾಜ್ಯದ ಪೊಲೀಸರು ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ(50) ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿ(36)ಯನ್ನು ಬಂಧಿಸಿ ತ್ರಿಶೂರ್ ಜೈಲಿನಡಿಲಾಗಿತ್ತು.
ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ 53 ಪ್ರಕರಣ, ಸಾವಿತ್ರಿ ವಿರುದ್ಧ 22 ಪ್ರಕರಣ ತನಿಖೆಯಲ್ಲಿದೆ.
2012-2013 ರಲ್ಲಿ ನಡೆದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಮನೆಯ ಅಂಗಳದಲ್ಲಿದ್ದ ಕಾರು, ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣ,ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಯತಡ್ಕ ಗ್ರಾಮದಲ್ಲಿ ನಕ್ಸಲ್ ಬೆಂಬಲಿತ ಬ್ಯಾನರ್ ಹಾಕಿದ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಇಬ್ಬರನ್ನು ಬಾಡಿ ವಾರೆಂಟ್ ಮೂಲಕ ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಏ.7 ರಂದು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಿದ್ದರು.
ಏ.11 ರಂದು ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಏ.11 ರಂದು ಬೆಳಗ್ಗೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಇವರನ್ನು ನ್ಯಾಯಾಲಯ ವಾಪಸ್ ಕೇರಳದ ತ್ರಿಶೂರ್ ಜೈಲಿಗೆ ಕಳುಹಿಸಲು ಆದೇಶಿಸಿದೆ.
ಅದರಂತೆ ಇಬ್ಬರು ನಕ್ಸಲರನ್ನು ಬೆಳ್ತಂಗಡಿ ಪೊಲೀಸರು ಬಿಗಿ ಭದ್ರತೆಯಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಿ ಸಂಜೆ ಹೊತ್ತಿಗೆ ಜೈಲಿಗೆ ಕಳುಹಿಸಲಾಗಿದೆ.

***********************************************

IMG-20250412-WA0000-723x1024 ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ-          ಸಾವಿತ್ರಿ ಕಸ್ಟಡಿ ಅಂತ್ಯ:          ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:

Post Comment

ಟ್ರೆಂಡಿಂಗ್‌