ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ: ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ

ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ: ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ

Share

20250412_133159-1024x779 ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ:         ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ

ಬೆಳ್ತಂಗಡಿ : ಜಾಗದ ವಿವಾದವೊಂದಕ್ಕೆ ಸಂಬಂಧಿಸಿ ಇಬ್ಬರು ಖಾಸಗಿ ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ಜಗಳದಲ್ಲಿ ಕೆಲಸಕ್ಕೆ ಬಂದ ಪರಿಶಿಷ್ಟ ಜಾತಿಯ ಯುವಕನೋರ್ವನ ಮೇಲೆ ಹಲ್ಲೆಗೈದು ಚರಂಡಿಗೆ ತಳ್ಳಿದ ಘಟನೆ ಕೊಯ್ಯೂರು ಗ್ರಾಮದ ಆದೂರುಪೇರಾಲ್ ಎಂಬಲ್ಲಿ ಶುಕ್ರವಾರ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಪರಿಶಿಷ್ಟ ಜಾತಿಯ ಕಾರ್ಮಿಕನಿಗೆ ಹಲ್ಲೆಗೈದ ಆರೋಪಿಯನ್ನು ಬೆಳ್ತಂಗಡಿ
ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಆದೂರುಪೇರಾಲ್ ಎಂಬಲ್ಲಿ ಶುಕ್ರವಾರ ಘಟನೆ ನಡೆದಿದೆ.
ಸ್ಥಳೀಯ ಮಹಿಳೆಯೊಬ್ಬರು ಸರಕಾರಿ ಬಾವಿ ಪರಿಸರದ ಜಾಗವನ್ನು ಅತಿಕ್ರಮಿಸಿದ್ದು ಇದರ ಸಮೀಪ ಸ್ಥಳೀಯ ನಿವಾಸಿ ಉಜ್ವಲ್ ಗೌಡ ಎಂಬವರಿಗೆ ಸೇರಿದ ಜಾಗವೂ ಇದೆ. ಸರಕಾರಿ ಬಾವಿಯ ಪರಿಸರದ ಸರಕಾರಿ ಜಾಗವನ್ನು ಅತಿಕ್ರಮಿಸಿರುವ ಮಹಿಳೆ ಬೇಲಿ ಹಾಕಿಕೊಂಡಿದ್ದು ಇನ್ನೊಂದೆಡೆ ಉಜ್ವಲ್ ಗೌಡ ಎಂಬಾತನೂ ಇದೇ ಜಾಗಕ್ಕೆ ಕಣ್ಣು ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಬೇಲಿ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಬಳಿ ಬಂದ ಉಜ್ವಲ್ ಅವರ ಪತ್ನಿ ಕೆಲಸದವರಲ್ಲಿ ಆಕ್ಷೇಪಿಸಿ ಮಾತನಾಡಿದ್ದು ಈ ಸಂದರ್ಭ “ನೀವು ಕೂಲಿ ಕೆಲಸಕ್ಕೆ ಬಂದ ನಮ್ಮಲ್ಲಿ ಮಾತನಾಡ ಬೇಡಿ ಮಾತನಾಡಬೇಕಾದವರಲ್ಲಿ ಮಾತನಾಡಿ ಎಂದು ಮಹಿಳೆಗೆ ಹೇಳಿದ್ದಾರೆ.
ಮಧ್ಯೆ ಪ್ರವೇಶಿಸಿದ ಪತಿ ಉಜ್ವಲ್ ಗೌಡ ಸ್ಥಳಕ್ಕೆ ಬಂದು ಬೇಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರನ್ನು ಉದ್ದೇಶಿಸಿ ಜಾತಿ ಹೆಸರೆತ್ತಿ ಮಾತನಾಡಿದ್ದಲ್ಲದೆ, ಕೂಲಿ ಕಾರ್ಮಿಕ ಮಧು ಎಂಬಾತನನ್ನು ಚರಂಡಿಗೆ ತಳ್ಳಿದ ಪರಿಣಾಮ ಈತನ ಬೆನ್ನು ಮೂಳೆ ಮುರಿತಕ್ಕೊಳಗಾಗಿದೆ ಎಂದು ವೈದ್ಯರು ಮಂಗಳೂರಿನ ಆಸ್ಪತ್ರೆಗೆ ರೆಫರ್ ಮಾಡಿರುವುದಾಗಿ ತಿಳಿದು ಬಂದಿದೆ.
ಹಲ್ಲೆಯ ಪರಿಣಾಮ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡ ದಲಿತ ಕಾರ್ಮಿಕ ಮಧು ಎಂಬವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕೇಸು ದಾಖಲಾಗಿದೆ.

IMG-20250413-WA0003-682x1024 ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ:         ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ
IMG-20250413-WA0002-792x1024 ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ:         ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ
Previous post

ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಕಸ್ಟಡಿ ಅಂತ್ಯ: ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:

Next post

ಬಂದಾರು ಗ್ರಾ.ಪಂ. ಆಡಳಿತದಿಂದ 134ನೇ ಅಂಬೇಡ್ಕರ್ ಜಯಂತಿ ಆಚರಣೆ: 16 ಸದಸ್ಯರ ಪೈಕಿ ಒಂಭತ್ತು ಮಂದಿ ಗೈರು..!

Post Comment

ಟ್ರೆಂಡಿಂಗ್‌

error: Content is protected !!