ಬಂದಾರು ಗ್ರಾ.ಪಂ. ಆಡಳಿತದಿಂದ 134ನೇ ಅಂಬೇಡ್ಕರ್ ಜಯಂತಿ ಆಚರಣೆ: 16 ಸದಸ್ಯರ ಪೈಕಿ ಒಂಭತ್ತು ಮಂದಿ ಗೈರು..!



ಬೆಳ್ತಂಗಡಿ : ಬಂದಾರು ಗ್ರಾಮಪಂಚಾಯತ್ ಆಡಳಿತದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಭಾಗಹಿಸುವಂತೆ ಸೂಚಿಸಲಾಗಿತ್ತು.
ಸಾರ್ವಜನಿಕರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ ಆದರೆ ಯಾಕೆ ಇಷ್ಟೊಂದು ಅಸಹಕಾರ ತೋರಿಸುತ್ತಿದ್ದಾರೆ ಎಂದು ಅರ್ಥಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು. ಅಂಬೇಡ್ಕರ್ ರವರ ಬದುಕು, ಹೋರಾಟಗಳು ನಮಗೆ ಆದರ್ಶ ಎಂದು ಶುಭಹಾರೈಸಿದರು.
ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ , ನ್ಯಾಯವಾದಿ ಉದಯ ಕುಮಾರ್ ಬಿ.ಕೆ. ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಅಂಬೇಡ್ಕರ್ ರವರು ಶ್ರೇಷ್ಠ ರಾಷ್ಟ್ರನಾಯಕರಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ಹಕ್ಕುಗಳನ್ನು ನೀಡಿದೆ,
ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಇಡೀ ದೇಶವೇ ಋಣಿಯಾಗಿದೆ, ಇವರ ಅಧ್ಯಯನ, ಜ್ಞಾನ ಮತ್ತು ಪ್ರತಿಭೆಯನ್ನು ದೇಶ ವಿದೇಶಗಳಲ್ಲಿ ಕೊಂಡಾಡುತ್ತಿದ್ದಾರೆ ಎಂದರು. ವೇದಿಕೆಯಲ್ಲಿ
ಪತ್ರಕರ್ತ ಅಚುಶ್ರೀ ಬಾಂಗೇರು ಮಾತನಾಡಿ ರಾಷ್ಟ್ರನಾಯಕ ಅಂಬೇಡ್ಕರ್ ರವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುತ್ತಾ ಸಂವಿಧಾನ, ಪ್ರಜಾಪ್ರಭುತ್ವ ಅಂಬೇಡ್ಕರ್ ರವರ
ಕೊಡುಗೆಯಾಗಿದೆ, ಮತದಾನದ ಹಕ್ಕು, ಜನಪ್ರತಿನಿಧಿಗಳಾಗುವ ಅವಕಾಶವನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ರವರೇ ಕೊಟ್ಟಿದ್ದು ಇದಕ್ಕೆ ನಾವು ಋಣಿಗಳಾಗಿದ್ದೇವೆ, ಇಂಥ ಶ್ರೇಷ್ಠ ರಾಷ್ಟ್ರ ನಾಯಕನಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಈ ಬಗ್ಗೆ ಸಂಕುಚಿತ ಮನಸ್ಥಿತಿಗಳು ಬದಲಾಗಬೇಕು ಎಂದರು.
ವೇದಿಕೆಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಪುಷ್ಪಾವತಿ , ಕುಸುಮಾ ಕುಮಾರಿ ಉಪಸ್ಥಿತರಿದ್ದರು.
ಪಂ.ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಗ್ರಾಮಪಂಚಾಯತ್ ಸದಸ್ಯರಾದ ಪರಮೇಶ್ವರಿ, ಭಾರತಿ, ಅನಿತಾ, ಗಂಗಾಧರ, ವಿಮಲ ಭಾಗವಹಿಸಿದರು. ಸಿಬ್ಬಂದಿಗಳಾದ ದಿನಕರ್, ಪ್ರವೀಣ್, ಸರೋಜಿನಿ, ಕು.ಸಹನಾ ಇದ್ದರು.
16 ಸದಸ್ಯರ ಪೈಕಿ ಒಂಭತ್ತು ಮಂದಿ
ಗೈರು !
ಬಂದಾರು ಗ್ರಾಮಪಂಚಾಯತ್ ಆಡಳಿತದಲ್ಲಿ ಒಟ್ಟು 16 ಮಂದಿ ಸದಸ್ಯರಿದ್ದು ಕಾರ್ಯಕ್ರಮದಲ್ಲಿ ಅಧ್ಯಕ್ಷರು ಉಫಾಧ್ಯಕ್ಷರು ಹಾಗೂ ಇತರ 4 ಮಂದಿ ಸದಸ್ಯರು ಭಾಗವಹಿಸಿದರು. ಆದರೆ ಸದಸ್ಯರುಗಳಾದ ಬಾಲಕೃಷ್ಣ ಗೌಡ, ಶಿವಪ್ರಸಾದ್, ಶಿವ ಗೌಡ, ಚೇತನ್, ಸುಚಿತ್ರಾ, ಪವಿತ್ರ, ಶಾಂತ, ಶಾಂತ, ಮಂಜುಶ್ರೀ , ಮೋಹನ ಗೌಡ ಮುಂತಾದವರು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸಂವಿಧಾನ ಆಧಾರಿತ ಜವಾಬ್ದಾರಿಯುತ ಜನಪ್ರತಿನಿಧಿಗಳಾಗಿ ಗೈರು ಹಾಜರಾಗಿ ಅಗೌರವ ತೋರಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.



Post Comment