ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ: ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ

ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ: ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ

Share
IMG-20250415-WA0002-696x1024 ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ:           ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ

ಬೆಳ್ತಂಗಡಿ : ಮನೆಯ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮಹಡಿಯಿಂದ ಆಕಸ್ಮಿಕವಾಗಿ ಕಾಲ್ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಇಳಂತಿಲ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ‌ ಕಲಂದರ್ ಶಾಫಿ ಎಂಬವರು‌ ನಾಲ್ಕು ದಿನಗಳ ಹಿಂದೆ ಇಳಂತಿಲ ಗ್ರಾಮದ ಜೋಗಿಬೆಟ್ಟು ರವಿ ನಾರಾಯಣ ಭಟ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ 2ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಡಿಯ ಮೇಲಿನಿಂದ ಬಿದ್ದ ಪರಿಣಾಮ ಕಾಲು, ಕೈ, ಹಾಗೂ ಹಲ್ಲಿನ ದವಡೆಗೆ ಗಂಭೀರ ಗಾಯಗಳಾಗಿವೆ.
ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಡಿಯಿಂದ ಬಿದ್ದ ಕಾರ್ಮಿಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಮಹಿಡಿಯ ಕೆಲಸ ಮಾಡಿಸುತ್ತಿದ್ದ ಮಾಲಿಕ ಆಸ್ಪತ್ರೆಗೆ ಇಣುಕಿಯೂ ನೋಡಿಲ್ಲ,
ದೂರವಾಣಿ ಕರೆ ಮಾಡಿದ್ರೂ ಕರೆ ಸ್ವೀಕರಿಸುತ್ತಿಲ್ಲ ಗಾಯಗೊಂಡ ಕಾರ್ಮಿಕನ ಚಿಕಿತ್ಸೆ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.


IMG-20250413-WA0003-3-682x1024 ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ:           ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ
IMG-20250413-WA0000-1024x576 ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ:           ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ
IMG-20250413-WA0001-1-792x1024 ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ:           ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ
IMG-20250413-WA0002-2-792x1024 ಮಹಡಿಯಿಂದ ಬಿದ್ದು ಕಾರ್ಮಿಕ ಗಂಭೀರ ಗಾಯ:           ಆಸ್ಪತ್ರೆಗೆ ಇಣುಕಿಯೂ ನೋಡದ ಮನೆಯ ಮಾಲೀಕ

Post Comment

ಟ್ರೆಂಡಿಂಗ್‌