ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ ಬಂದ್ : ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆಒಂದೆಡೆ ಬೂದಿ ಮುಚ್ಚಿದ ಕೆಂಡ : ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಕೂಗು

ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ ಬಂದ್ : ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆಒಂದೆಡೆ ಬೂದಿ ಮುಚ್ಚಿದ ಕೆಂಡ : ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಕೂಗು

Share
InShot_20250502_150526420-1-1024x1024 ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ ಬಂದ್ : ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆಒಂದೆಡೆ ಬೂದಿ ಮುಚ್ಚಿದ ಕೆಂಡ : ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಕೂಗು

ಬೆಳ್ತಂಗಡಿ : ಮಂಗಳೂರಿನಲ್ಲಿ ಗುರುವಾರ ನಡೆದ ಕೊಲೆ ಹಿಂದೂ ಕಾರ್ಯಕರ್ತ , ಕೊಲೆ ಆರೋಪಿ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್ ಗೆ ಬೆಳ್ತಂಗಡಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಡೀ ನಗರದಲ್ಲಿ ಅರ್ಧಂಬರ್ಧ ಬಂದ್ ಕಂಡು ಬಂದಿದೆ.
ತಾಲೂಕಿನಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನ ವಿವಿಧೆಡೆ ಅಂಗಡಿ ಮುಂಗಟ್ಟುಗಳು ಬಹುತೇಕ ಬಂದ್ ಆಗಿ ಖಾಸಗಿ ವಾಹನಗಳು ಎಂದಿನಂತೆ ಓಡಾಟ ಸಾಧಾರಣವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಬಂದ್ ಪರ ಬೆಂಬಲಿಗರು ಹಲವೆಡೆ ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿದ್ದು ವಾಹನ ಸವಾರರು ಆತಂಕದಿಂದ ಸಂಚರಿಸಬೇಕಾಯಿತು.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ , ಮುಂಡಾಜೆ, ಕಕ್ಕಿಂಜೆ ಮುಂತಾದ ಕಡೆಗಳಲ್ಲಿ ರಸ್ತೆ ಮಧ್ಯೆ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ಬೆಂಬಲಿಗರು ಅವರಿಗೆ ಬೇಕಾದವರು ಅಂಗಡಿ ತೆರೆದಿದ್ದರೂ ಕೆಲವರು ಅಂಗಡಿ ಬಾಗಿಲನ್ನು ಹೊರಗಿಂದ ಮುಚ್ಚಿ ಒಳಗೆ ಚಾಲೂ ಇದ್ದರೂ ಬಂದ್ ಮಾಡಿಸದೆ ಹಾಗೆ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳ್ತಂಗಡಿ- ಗುರುವಾಯನಕೆರೆ ಮಧ್ಯೆ ಜೈನ್ ಪೇಟೆ ಎಂಬಲ್ಲಿ ಖಾಸಗಿ ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ.
ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ, ಕೊಕ್ಕಡ – ಧರ್ಮಸ್ಥಳ ಮುಂತಾದ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ಕೆಲವು ಸಂಪೂರ್ಣ ಇನ್ನೂ ಕೆಲವು ಅರ್ಧಂಬರ್ಧ ಬಂದ್ ಆಗಿರುವುದು ಕಂಡು ಬಂದಿದೆ‌.
ಬೆಳಗ್ಗೆ ಕೆಲವು ಹೋಟೆಲ್ ಗಳು ಅರ್ಧ ತೆರೆದಿದ್ದರೂ ಬಳಿಕ ಅದನ್ನು ಮುಚ್ಚಿಸಲಾಯಿತು. ಸರಕಾರಿ ಬಸ್ಸುಗಳು ಸ್ಥಳೀಯವಾಗಿ ಓಡಾಟ ನಡೆಸಿದವು ಧರ್ಮಸ್ಥಳ ದಿಂದ ಹೊರ ಜಿಲ್ಲೆಗೆ ಪ್ರಯಾಣಿಸುವ ಬಸ್ಸುಗಳು ಓಡಾಟ ನಡೆಸಿದವು ಮಂಗಳೂರಿಗೆ ಮಾತ್ರ ಬಸ್ ಗಳು ಓಡಾಟ ನಡೆಸಿಲ್ಲ. ಖಾಸಗಿ ವಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿರುವುದು ಕಂಡು ಬಂತು. ಬೆಳ್ತಂಗಡಿ, ಧರ್ಮಸ್ಥಳ, ವೇಣೂರು , ಪುಂಜಾಲಕಟ್ಟೆ ಠಾಣಾ ಪೊಲೀಸರು ತಾಲೂಕಿನ ಸೂಕ್ಷ್ಮ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.
ಈ ಮಧ್ಯೆ ಇಡೀ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರು ನಿಷೇಧಾಜ್ಞೆ ಜಾರಿಗೊಳಿಸಿದ್ದು ಜನಜೀವನ ಭಯದ ವಾತಾವರಣದಲ್ಲಿದೆ.

Previous post

ಬೆಳ್ತಂಗಡಿ:ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಆಗಮಿಸಲು ಒಪ್ಪಿ ಕೈಕೊಟ್ಟ ಕಾಂಗ್ರೆಸ್ ಸಚಿವರು : ಸಚಿವರ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಿದ್ದ ದಲಿತರಿಗೆ ನಿರಾಶೆ

Next post

ನಿಷೇಧಾಜ್ಞೆ ಜಾರಿಯಲ್ಲಿರುವಾಗ ‘ಪ್ರಚೋದನಾಕಾರಿ ಭಾಷಣ’ ಆರೋಪ : ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ

Post Comment

ಟ್ರೆಂಡಿಂಗ್‌

error: Content is protected !!