ನಿಷೇಧಾಜ್ಞೆ ಜಾರಿಯಲ್ಲಿರುವಾಗ ‘ಪ್ರಚೋದನಾಕಾರಿ ಭಾಷಣ’ ಆರೋಪ : ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ

ನಿಷೇಧಾಜ್ಞೆ ಜಾರಿಯಲ್ಲಿರುವಾಗ ‘ಪ್ರಚೋದನಾಕಾರಿ ಭಾಷಣ’ ಆರೋಪ : ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ

Share
IMG-20250504-WA0001 ನಿಷೇಧಾಜ್ಞೆ ಜಾರಿಯಲ್ಲಿರುವಾಗ 'ಪ್ರಚೋದನಾಕಾರಿ ಭಾಷಣ' ಆರೋಪ :                       ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ

ಬೆಳ್ತಂಗಡಿ : ದ.ಕ.ಜಿಲ್ಲೆಯಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಒಂದು ಕೋಮಿನವರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರೊಬ್ಬರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯುತ್ತಿದ್ದು ನಾನು ಅಲ್ಲಿಗೆ ಹೋಗಿದ್ದಾಗ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದವರ ಪೈಕಿ ಬೆಳ್ತಂಗಡಿ ವಿಧಾನ ಸಭಾ ಶಾಸಕರಾದ ಹರೀಶ್ ಪೂಂಜರವರು ರಾತ್ರಿ 9 ಗಂಟೆಯಿಂದ 9:30 ಗಂಟೆಯ ಮಧ್ಯೆಯ ವೇಳೆಗೆ ತುಳು ಭಾಷೆಯಲ್ಲಿ ಮಾತನಾಡುತ್ತಾ
“ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್ ಕದ್ದಿದ್ದಾರೆ’ ಎಂಬ ಬಗ್ಗೆ ಸ್ಥಳೀಯರಿಂದ ನನಗೆ ಮಾಹಿತಿ ಬಂದಿದ್ದು ಈ ವೇಳೆ ನಾನು ಅವರಿಗೆ ಹೇಳಿದೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮುಗಿಯುವ ಮೊದಲು ಯಾರೆಂದು ತಿಳಿದು ಬರುತ್ತದೆ.
ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಇನ್ವಿಟೇಷನ್ ಪತ್ರ ಕೊಟ್ಟ ಕಾರಣ ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಇನ್ವಿಟೇಷನ್ ಕೊಡಬಾರದಿತ್ತು ಅವರನ್ನು ಕಾಯರ್ಯಕ್ರಮಕ್ಕೆ ಕರೆಯಬಾರದಿತ್ತು.
ನಾವು ಹಿಂದುಗಳು ಹಿಂದೂಗಳೇ ಅವರನ್ನು ಸೇರಿಸಬಾರದು, ಎಂಬುದಾಗಿ ಉಲ್ಲೇಖಿಸಿ ಮಾತನಾಡುತ್ತಾ ಪ್ರಸ್ತುತ ತೆಕ್ಕಾರಿನಲ್ಲಿ ಅವರು 1200 ಇದ್ದಾರೆ, ನಾವು 150 ಮನೆಯವರು ಇದ್ದೇವೆ.
ಇನ್ನೂ ಕೆಲವು ವರ್ಷದಲ್ಲಿ ಅವರು 600 ಜನ ಆಗುವುದಿಲ್ಲ ಇನ್ನು 10 ವರ್ಷ ಕಳೆದರೆ ಅವರ ಸಂಖ್ಯೆ 5,000 ಜನ ಆಗುತ್ತಾರೆ. ಅವರು 5000 ಜನ ಅಲ್ಲ 10.000 ಜನ ಆದರೂ ಅವರುಗಳನ್ನು ಎದುರಿಸಿ ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆಮಾಡಿಕೊಂಡು ದೇವರ ಪೂಜೆಯನ್ನು ಮಾಡಿಕೊಂಡು ಬರಬೇಕು ಎಂಬುದಾಗಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿ ಕಟ್ಟಿ ಕೋಮು ಭಾವನೆಯನ್ನು ಉಂಟುಮಾಡಿ, ಧರ್ಮ ಧರ್ಮಗಳ ಮಧ್ಯೆ ದ್ವೇಷ ಉಂಟಾಗುವ ರೀತಿಯಲ್ಲಿ ಮಾತನಾಡಿರುವುದಾಗಿದೆ ಇವರ ಭಾಷಣವನ್ನು ನಾನು ನೇರವಾಗಿ ನೋಡಿ ಆಲಿಸಿರುವುದಲ್ಲದೇ ಸೋಷಿಯಲ್ ಮೀಡಿಯಾದಲ್ಲಿಯೂ ನೋಡಿರುತ್ತೇನೆ.
ಆ ರೀತಿಯಾಗಿ ಪ್ರಚೋದನಕಾರಿ ಭಾಷಣ ಮಾಡಿದ ಬೆಳ್ತಂಗಡಿ ವಿಧಾನ ಸಭಾ ಶಾಸಕ ಹರೀಶ್ ಪೂಂಜರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತೆಕ್ಕಾರು ನಿವಾಸಿ ಇಬ್ರಾಹಿಂ ಎಸ್.ಬಿ. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮೇ.4 ರಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

IMG-20250413-WA0003-682x1024 ನಿಷೇಧಾಜ್ಞೆ ಜಾರಿಯಲ್ಲಿರುವಾಗ 'ಪ್ರಚೋದನಾಕಾರಿ ಭಾಷಣ' ಆರೋಪ :                       ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ
IMG-20250413-WA0002-792x1024 ನಿಷೇಧಾಜ್ಞೆ ಜಾರಿಯಲ್ಲಿರುವಾಗ 'ಪ್ರಚೋದನಾಕಾರಿ ಭಾಷಣ' ಆರೋಪ :                       ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ
IMG-20250413-WA0001-792x1024 ನಿಷೇಧಾಜ್ಞೆ ಜಾರಿಯಲ್ಲಿರುವಾಗ 'ಪ್ರಚೋದನಾಕಾರಿ ಭಾಷಣ' ಆರೋಪ :                       ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ
Previous post

ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ ಬಂದ್ : ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆಒಂದೆಡೆ ಬೂದಿ ಮುಚ್ಚಿದ ಕೆಂಡ : ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಕೂಗು

Next post

ಬ್ರಹ್ಮಕಲಶೋತ್ಸವ ಸಮಿತಿಯವರು ಮಸೀದಿಗಳಿಗೆ ಹೋಗಿ ಮುಸ್ಲೀಮರನ್ನು ಆಮಂತ್ರಿಸಿದರು…!

Post Comment

ಟ್ರೆಂಡಿಂಗ್‌